ETV Bharat / sports

ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ ಪರ ವೇಗದ ಅರ್ಧಶತಕ ಸಿಡಿಸಿದ ಜಾನಿ ಬೈರ್ಸ್ಟೋವ್​

ಐರ್ಲೆಂಡ್​ ನೀಡಿದ 213 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕನಾಗಿ ಕಣಕ್ಕಿಳಿದ ಜಾನಿ ಬೈರ್ಸ್ಟೋವ್​ ಅವರ ಸೋಟಕ ಅರ್ಧಶತಕ(82) ದ ನೆರವಿನಿಂದ 4 ವಿಕೆಟ್​ಗಳ ಜಯ ಸಾಧಿಸಲು ನೆರವಾದರು..

author img

By

Published : Aug 2, 2020, 4:20 PM IST

ಜಾನಿ ಬೈರ್ಸ್ಟೋವ್​
ಜಾನಿ ಬೈರ್ಸ್ಟೋವ್​

ಸೌತಾಂಪ್ಟನ್ ​: ಇಂಗ್ಲೆಂಡ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಜಾನಿ ಬೈರ್ಸ್ಟೋವ್​ ಶನಿವಾರ ಐರ್ಲೆಂಡ್​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.

ಐರ್ಲೆಂಡ್​ ನೀಡಿದ 213 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕನಾಗಿ ಕಣಕ್ಕಿಳಿದ ಜಾನಿ ಬೈರ್ಸ್ಟೋವ್​ ಅವರ ಸ್ಫೋಟಕ ಅರ್ಧಶತಕ(82)ದ ನೆರವಿನಿಂದ 4 ವಿಕೆಟ್​ಗಳ ಜಯ ಸಾಧಿಸಲು ನೆರವಾದರು.

ಈ ಪಂದ್ಯದಲ್ಲಿ ಬೈರ್ಸ್ಟೋವ್​ 41 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 82 ರನ್​ ದಾಖಲಿಸಿದರು. ಇವರು ತಮ್ಮ ಕೇವಲ 21 ಎಸೆತಗಳಲ್ಲೇ ತಮ್ಮ 12ನೇ ಅರ್ಧಶತಕ ದಾಖಲಿಸುವ ಮೂಲಕ ಇಂಗ್ಲೆಂಡ್​ ಪರ ವೇಗವಾಗಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್​ಮನ್​ ಎಂಬ ಶ್ರೇಯವನ್ನು ಇಯಾನ್​ ಮಾರ್ಗನ್​ ಜೊತೆ ಹಂಚಿಕೊಂಡರು.

ಮಾರ್ಗನ್​ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಏಕದಿನ ಇತಿಹಾಸದಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿರುವ ದಾಖಲೆ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್​ ಹೆಸರಿನಲ್ಲಿದೆ. ಅವರು 2015ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಕೇವಲ 16 ಎಸೆತಗಳಲ್ಲಿ 50 ರನ್​ಗಳಿಸಿದ್ದರು. ಅದೇ ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ವಿಶ್ವದಾಖಲೆ ಬರೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.