ಲಂಡನ್: ಬಯೋ ಸೆಕ್ಯೂರ್ ನಿಯಮ ಉಲ್ಲಂಘನೆ ಮಾಡಿ 2ನೇ ಟೆಸ್ಟ್ನಿಂದ ಹೊರಬಿದ್ದಿದ್ದ ವೇಗಿ ಜೋಫ್ರಾ ಆರ್ಚರ್ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟೆಸ್ಟ್ಗೆ ಇಂಗ್ಲೆಂಡ್ ತಂಡ ಸೇರಿಕೊಳ್ಳಲಿದ್ದಾರೆ.
ಬಯೋ ಸೆಕ್ಯೂರ್ ಪ್ರೋಟೋಕಾಲ್ ಉಲ್ಲಂಘಿಸಿದ್ದನ್ನು ಒಪ್ಪಿಕೊಂಡಿದ್ದ ಬಲಗೈ ವೇಗಿ ಈಗಾಗಲೇ 5 ದಿನಗಳ ಐಸೊಲೇಶನ್ ಪೂರ್ಣಗೊಳಿಸಿದ್ದಾರೆ. ಈ 5 ದಿನಗಳಲ್ಲಿ 2 ಕೋವಿಡ್ ಟೆಸ್ಟ್ನಲ್ಲೂ ನೆಗೆಟಿವ್ ವರದಿ ಬಂದಿದ್ದು ಮೂರನೇ ಟೆಸ್ಟ್ ತಂಡಕ್ಕೆ ಅವರು ಮರಳಲಿದ್ದಾರೆ.
25 ವರ್ಷದ ವೇಗಿಗೆ ವಿಧಿಸಲಾದ ದಂಡ ಮೊತ್ತವನ್ನು ವಿಧಿಸಲಾಗಿದೆ. ಅಲ್ಲದೆ ಅವರಿಗೆ ಅಧಿಕೃತ ಲಿಖಿತ ಎಚ್ಚರಿಕೆಯನ್ನು ನೀಡಲಾಗಿದೆ.
ಪ್ರಮುಖ ಕ್ರಿಕೆಟ್ ವೆಬ್ಸೈಟ್ನ ವರದಿಯ ಪ್ರಕಾರ, ಆರ್ಚರ್ ಬಹುತೇಕ ಎರಡನೇ ಟೆಸ್ಟ್ ಅನ್ನು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ನಲ್ಲಿರುವ ಹೋಟೆಲ್ ಕೋಣೆಯಲ್ಲಿ ಕಳೆದಿದ್ದಾರೆ. ಜೊತೆಗೆ ಯಾರೊಂದಿಗೂ ಮುಖಾಮುಖಿ ಸಂಪರ್ಕವನ್ನು ಅವರು ಸಾಧಿಸಿಲ್ಲ. ಈ ಅವಧಿಯಲ್ಲಿ ಅವರು ಎರಡು ಕೊರೊನಾ ವೈರಸ್ ಪರೀಕ್ಷೆಗಳಿಗೆ ಒಳಗಾಗಿದ್ದು, ಎರಡರಲ್ಲೂ ನಕರಾತ್ಮಕ ಫಲಿತಾಂಶ ಹೊರಬಂದಿದೆ.