ETV Bharat / sports

ಬುಮ್ರಾ ಅವಕಾಶ ಸಿಕ್ಕರೂ ಇಂತಹ ಲೀಗ್​ಗಳಲ್ಲಿ ಆಡಬಾರದು: ವಾಸೀಂ ಅಕ್ರಮ್ ಸಲಹೆ​ - county not for Bumrah

ಭಾರತದ ಮಾಜಿ ಆಟಗಾರ ಆಕಾಶ್​ ಚೋಪ್ರಾ ನಡೆಸಿಕೊಡುವ ಆಕಾಶವಾಣಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಕ್ರಮ್​, ಬುಮ್ರಾ ಭಾರತ ತಂಡದ ಮುಂಚೂಣಿ ಬೌಲರ್​. ಮೂರು ವಿಭಾಗದ ಕ್ರಿಕೆಟ್​ನಲ್ಲಿ ಅವರು ತಂಡದ ಅವಿಭಾಜ್ಯ ಅಂಗ. ವರ್ಷವಿಡೀ ಹಲವು ಟೂರ್ನಿಗಳಲ್ಲಿ ಅವರು ಆಡುವುದರಿಂದ ಕ್ರಿಕೆಟ್​ ಇಲ್ಲದ ಸಮಯದಲ್ಲಿ ವಿಶ್ರಾಂತಿ ಪಡೆಯುವುದು ಸೂಕ್ತ ಎಂದಿದ್ದಾರೆ.

ಜಸ್ಪ್ರೀತ್​ ಬುಮ್ರಾ
ಜಸ್ಪ್ರೀತ್​ ಬುಮ್ರಾ
author img

By

Published : May 11, 2020, 12:18 PM IST

ನವದೆಹಲಿ: ಭಾರತ ತಂಡದ ಅಗ್ರ ಶ್ರೇಯಾಂಕಿತ ವೇಗಿ ಜಸ್ಪ್ರೀತ್​ ಬುಮ್ರಾ ಅವಕಾಶ ಸಿಕ್ಕರೂ ಕೌಂಟಿ ಕ್ರಿಕೆಟ್‌ ಆಡಬಾರದು ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸೀಂ ಅಕ್ರಮ್​ ಹೇಳಿದ್ದಾರೆ.

ಕೌಂಟಿಯಂತಹ ಟೂರ್ನಿ ಯುವ ಆಟಗಾರರಿಗೆ ಮಾತ್ರ ಉತ್ತಮ ವೇದಿಕೆ. ಬುಮ್ರಾ ಅಂತಹ ಲೀಗ್​ನಲ್ಲಿ ಆಡಿದರೆ ಅವರು ಬಳಲಲಿದ್ದಾರೆ. ಹಾಗಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವಕಾಶ ಸಿಕ್ಕಾಗ ವಿಶ್ರಾಂತಿ ತೆಗದುಕೊಳ್ಳುವತ್ತ ಗಮನ ಹರಿಸಬೇಕು ಎಂದು ಯುವ ವೇಗಿಗೆ ಕಿವಿಮಾತು ಹೇಳಿದ್ದಾರೆ.

2016ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಬುಮ್ರಾ, 64 ಏಕದಿನ, 50 ಟಿ20, 14 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 104, ಟಿ20ಯಲ್ಲಿ 59 ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ 68 ವಿಕೆಟ್​ ಪಡೆದ ಸಾಧನೆ ಅವರದ್ದು.

ಬೆನ್ನು ನೋವಿಗೆ ತುತ್ತಾಗಿ ಕೆಲವು ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿದ್ದ ಬುಮ್ರಾ, ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಕ್ರಿಕೆಟ್​ ಟೂರ್ನಿಯಲ್ಲಿ ವಿಕೆಟ್​ ಪಡೆಯದೆ ನಿರಾಶೆ ಅನುಭವಿಸಿದ್ದರು. ಈ ವೇಳೆ ಅವರು ವಿಶ್ವದಾದ್ಯಂತ ಕ್ರಿಕೆಟ್ ತಜ್ಞರಿಂದ ಟೀಕೆಗೊಳಗಾಗಿದ್ದರು. ಆದರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಮರಳಿ ಫಾರ್ಮ್ ​ಕಂಡುಕೊಂಡ ಕ್ರಿಕೆಟಿಗ ಟೀಕೆಗಳಿಗೆ ಪ್ರದರ್ಶನದ ಮೂಲಕವೇ ಉತ್ತರಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.