ಹೈದರಾಬಾದ್: ಭಾರತ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಸ್ಪೋರ್ಟ್ಸ್ ಆ್ಯಂಕರ್ ಸಂಜನಾ ಗಣೇಶನ್ ಅವರನ್ನು ಇದೇ ತಿಂಗಳ 14-15ರಂದು ಗೋವಾದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
- " class="align-text-top noRightClick twitterSection" data="
">
ವೈಯಕ್ತಿಕ ಕಾರಣಗಳ ಮೇರೆಗೆ ಬುಮ್ರಾರನ್ನು ಬಿಸಿಸಿಐ ಮುಂಬರುವ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯಿಂದ ಬಿಡುಗಡೆ ಮಾಡಿತ್ತು. ಇತ್ತ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸಿಕೊಡುವ ಸಂಜನಾ ಕೂಡ ರಜೆಯಲ್ಲಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ಈ ವರದಿಗಳ ಮಾಹಿತಿಯಂತೆ ವಿವಾಹ ಕಾರ್ಯಕ್ರಮಕ್ಕೆ ಕೇವಲ 20 ಮಂದಿ ಮಾತ್ರ ಗೋವಾಕ್ಕೆ ತೆರಳಲಿದ್ದಾರೆ. ಬುಮ್ರಾ ಮತ್ತು ಸಂಜನಾ ಇಬ್ಬರೂ ತಮ್ಮ ವಿವಾಹ ಖಾಸಗಿಯಾಗಿರಲಿ ಎಂದು ಬಯಸಿದ್ದಾಗಿ ತಿಳಿದುಬಂದಿದೆ. ವಿಶೇಷವೆಂದರೆ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳೂ ಕೂಡ ಅವರೊಂದಿಗೆ ಮೊಬೈಲ್ ತೆಗೆದುಕೊಂಡು ಹೋಗಲು ಕೂಡ ಅನುಮತಿ ನೀಡಿಲ್ಲ ಎಂಬ ಮಾಹಿತಿ ಇದೆ.
ಕಳೆದೊಂದು ವಾರದಿಂದ ತಮ್ಮ ವಿವಾಹದ ಸುತ್ತ ಮಾಧ್ಯಮಗಳಲ್ಲಿ ಹಲವು ರೀತಿಯ ಚರ್ಚೆ ನಡೆಯುತ್ತಿದ್ದರೂ ಬುಮ್ರಾ ಅಥವಾ ಸಂಜನಾ ಹಾಗೂ ಅವರಿಬ್ಬರ ಕುಟುಂಬಸ್ಥರಾಗಲೀ ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ:ಯುವಕರಿಗೆ ಸೂರ್ಯಕುಮಾರ್ ಯಾದವ್ ರೋಲ್ ಮಾಡೆಲ್: ವಿವಿಎಸ್ ಲಕ್ಷ್ಮಣ್