ಕ್ರೈಸ್ಟ್ಚರ್ಚ್: ಟೆಸ್ಟ್ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ವೇಗವಾಗಿ ಟಾಪ್ 5ಕ್ಕೆ ಎಂಟ್ರಿಕೊಟ್ಟಿದ್ದ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ನ್ಯೂಜಿಲ್ಯಾಂಡ್ ವಿರುದ್ಧ ಕಳಪೆ ಬೌಲಿಂಗ್ ಪ್ರದರ್ಶನ ತೋರಿದ ಬೆನ್ನಲ್ಲೇ ಟಾಪ್ 5ರಿಂದ ಹೊರಬಿದ್ದಾರೆ.
2018ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಬುಮ್ರಾ ಕೇವಲ 12 ಟೆಸ್ಟ್ ಪಂದ್ಯಗಳಲ್ಲೇ ಬೌಲಿಂಗ್ ಶ್ರೇಯಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿ ಶ್ರೇಯಾಂಕದಲ್ಲಿ 3ನೇ ಸ್ಥಾನ ಸಂಪಾದಿಸಿದ್ದರು. ನಂತರ ಬೆನ್ನು ನೋವಿಗೆ ತುತ್ತಾಗಿ ಕೆಲವು ತಿಂಗಳು ಕ್ರಿಕೆಟ್ನಿಂದ ದೂರ ಉಳಿದಿದ್ದ ಅವರು ನ್ಯೂಜಿಲ್ಯಾಂಡ್ ವಿರುದ್ಧ ಮತ್ತೆ ಟೆಸ್ಟ್ ಕ್ರಿಕೆಟ್ಗೆ ಮರಳಿದ್ದರು. ಆದರೆ, 26 ಓವರ್ ಬೌಲಿಂಗ್ ಮಾಡಿ ಕೇವಲ ಒಂದು ವಿಕೆಟ್ ಪಡೆದಿದ್ದರು.
-
Match-winning returns of 9/110 in the first #NZvIND Test have propelled Tim Southee eight spots in the @MRFWorldwide ICC Test Rankings for bowlers 🔥 pic.twitter.com/62sP7blXBf
— ICC (@ICC) February 26, 2020 " class="align-text-top noRightClick twitterSection" data="
">Match-winning returns of 9/110 in the first #NZvIND Test have propelled Tim Southee eight spots in the @MRFWorldwide ICC Test Rankings for bowlers 🔥 pic.twitter.com/62sP7blXBf
— ICC (@ICC) February 26, 2020Match-winning returns of 9/110 in the first #NZvIND Test have propelled Tim Southee eight spots in the @MRFWorldwide ICC Test Rankings for bowlers 🔥 pic.twitter.com/62sP7blXBf
— ICC (@ICC) February 26, 2020
ಇದೀಗ ಬುಧವಾರ ಐಸಿಸಿ ಬಿಡುಗಡೆ ಮಾಡಿದ ನೂತನ ಬೌಲಿಂಗ್ ಶ್ರೇಯಾಂಕಲ್ಲಿ 5 ಸ್ಥಾನ ಕುಸಿತ ಕಂಡು 6ರಿಂದ 11ನೇ ಸ್ಥಾನ ಹಿಂಬಡ್ತಿ ಪಡೆದಿದ್ದಾರೆ. ಭಾರತದ ಪರ ಆರ್ ಅಶ್ವಿನ್ ಮಾತ್ರ ಟಾಪ್ 10ರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಭಾರತದ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಟಿಮ್ ಸೌಥಿ 8 ಸ್ಥಾನ ಬಡ್ತಿ ಪಡೆದು 6 ಸ್ಥಾನಕ್ಕೇರಿದ್ದಾರೆ.
ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 904 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ನೀಲ್ ವ್ಯಾಗ್ನರ್(843) ಎರಡನೇ ಸ್ಥಾನದಲ್ಲೂ, ವಿಂಡೀಸ್ನ ಜೇಸನ್ ಹೋಲ್ಡರ್(830) 3, ದಕ್ಷಿಣ ಆಫ್ರಿಕಾದ ಕಗಿಸೊ ರಬಡಾ(802) 4, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.