ETV Bharat / sports

ಬುಮ್ರಾ ಹೆಸರಿಗೆ ವೇಗವಾಗಿ 50 ವಿಕೆಟ್​ ಪಡೆದ ದಾಖಲೆ ಸೇರ್ಪಡೆ - ವಿಂಡೀಸ್​-ಭಾರತ ಟೆಸ್ಟ್​

ಶುಕ್ರವಾರ ವೆಸ್ಟ್​ ಇಂಡೀಸ್​ನ ಡೆರೇನ್​ ಬ್ರಾವೋ ಅವರ ವಿಕೆಟ್ ಪಡೆಯುವ ಮೂಲಕ ಬುಮ್ರಾ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡರು.

Jasprit Bumrah
author img

By

Published : Aug 24, 2019, 1:11 PM IST

ಆ್ಯಂಟಿಗುವಾ: ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್​ ಬುಮ್ರಾ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ಪರ ವೇಗವಾಗಿ 50 ವಿಕೆಟ್​ ಪಡೆದ ವೇಗದ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಶುಕ್ರವಾರ ವೆಸ್ಟ್​ ಇಂಡೀಸ್​ನ ಡೆರೇನ್​ ಬ್ರಾವೋ ಅವರ ವಿಕೆಟ್ ಪಡೆಯುವ ಮೂಲಕ ಬುಮ್ರಾ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡರು. ಬುಮ್ರಾ ಈ ಸಾಧನೆಗಾಗಿ 11 ಟೆಸ್ಟ್​ ತೆಗೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಮೊಹಮ್ಮದ್​ ಶಮಿ ವಿಂಡೀಸ್​ ವಿರುದ್ದ ತಮ್ಮ 13 ನೇ ಟೆಸ್ಟ್​ನಲ್ಲಿ 50 ವಿಕೆಟ್​ ಪಡೆದಿದ್ದರು. ಕನ್ನಡಿಗ ವೆಂಕಟೇಶ್​ ಪ್ರಸಾದ್​ ಕೂಡ 50 ವಿಕೆಟ್​ ಪಡೆಯಲು 13 ಟೆಸ್ಟ್​ ಆಡಿದ್ದರು.

ಆದರೆ, ವೇಗವಾಗಿ 50 ವಿಕೆಟ್​ ಪಡೆದ ದಾಖಲೆ ಆರ್​ ಅಶ್ವಿನ್​ ಹೆಸರಿನಲ್ಲಿದೆ. ಅಶ್ವಿನ್​ ಕೇವಲ 9 ಟೆಸ್ಟ್​ಗಳ 50 ವಿಕೆಟ್​ ಪಡೆದಿದ್ದಾರೆ. ಅನಿಲ್​ ಕುಂಬ್ಳೆ 10 ಪಂದ್ಯಗಳಲ್ಲಿ, ನರೇಂದ್ರ ಹಿರ್ವಾನಿ 11, ಹರ್ಭಜನ್​ ಸಿಂಗ್​ 11 ಪಂದ್ಯಗಳಲ್ಲಿ 50 ವಿಕೆಟ್​ ಪಡೆದಿದ್ದಾರೆ. ಆದರೆ ಇವರೆಲ್ಲರೂ ಸ್ಪಿನ್​ ಬೌಲರ್​​ಗಳಾಗಿದ್ದಾರೆ.

ಒಟ್ಟಾರೆ ವೇಗವಾಗಿ 50 ವಿಕೆಟ್​ ಪಡೆದ ದಾಖಲೆ ಆಸ್ಟ್ರೇಲಿಯಾದ ಚಾರ್ಲಿ ಟರ್ನರ್​ ಅವರ ಹೆಸರಿನಲ್ಲಿದೆ. ಅವರು ಕೇವಲ 6 ಪಂದ್ಯಗಳಲ್ಲಿ 50 ವಿಕೆಟ್​ ಪಡೆದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.