ETV Bharat / sports

ಐಪಿಎಲ್​ನಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಜೇಸನ್​ ರಾಯ್ - delhi capital

ಪಾಕಿಸ್ತಾನದ ವಿರುದ್ಧದ ಸರಣಿಗಾಗಿ ಅಭ್ಯಾಸ ಪಂದ್ಯವಾಡುವ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದ ಕಾರಣ ಜೇಸನ್‌ ರಾಯ್‌ ಸರಣಿಯಿಂದ ಹೊರಬಿದ್ದಿದ್ದರು. ನಂತರ ಫಿಟ್​ನೆಸ್​ ಕಾಪಾಡಿಕೊಳ್ಳುವುದಕ್ಕಾಗಿ ಸ್ವತಃ ಐಪಿಎಲ್​ನಿಂದ ಹೊರಗುಳಿಯುವುದಾಗಿ ಘೋಷಿಸಿಕೊಂಡಿದ್ದರು.

ಜೇಸನ್​ ರಾಯ್
ಜೇಸನ್​ ರಾಯ್
author img

By

Published : Aug 29, 2020, 8:12 PM IST

ನವದೆಹಲಿ: ಇಂಗ್ಲೆಂಡ್​ನ ಆರಂಭಿಕ ಬ್ಯಾಟ್ಸ್​ಮನ್​ ಸ್ನಾಯು ಸೆಳೆತಕ್ಕೊಳಗಾಗಿ ಪಾಕಿಸ್ತಾನದ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಐಪಿಎಲ್​ನಲ್ಲಿ ಆಡದಿರುವುದಕ್ಕೆ ಕಾರಣ ತಿಳಿಸಿದ್ದಾರೆ.

ರಾಯ್‌, ಲಾಕ್‌ಡೌನ್ ಸಮಯದಲ್ಲಿ ಫಿಟ್​ನೆಸ್​ಗಾಗಿ ರನ್ನಿಂಗ್​ ಮತ್ತು ಸೈಕ್ಲಿಂಗ್ ಮಾಡುತ್ತಿದ್ದರು. ಆದರೆ ನಿಯಮಿತವಾದ ನೆಟ್ ಸೆಷನ್‌ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಕಡೆಗೆ ಗಮನ ನೀಡಲು ತರಬೇತಿ ಮತ್ತು ಫಿಟ್​ನೆಸ್​ ಕಾಪಾಡಿಕೊಳ್ಳುವ ಸಲುವಾಗಿ ಐಪಿಎಲ್​ನಿಂದ ಹೊರಬಂದಿರುವುದಾಗಿ ತಿಳಿಸಿದೆ.

ಮುಂದಿನ ಎರಡು ತಿಂಗಳ ಸಮಯವನ್ನು ನಾನು ಫಿಟ್​ ಆಗಿರುವಂತೆ ನೋಡಿಕೊಳ್ಳಲು ಬಯಸಿದ್ದೇನೆ. ಅಲ್ಲದೆ ಇದು ನನಗೆ ಸಿಕ್ಕಿರುವ ಒಳ್ಳೆಯ ಅವಕಾಶ. ಹಾಗಾಗಿ ಇದನ್ನು ಉಪಯೋಗಿಸಿಕೊಳ್ಳಲು ಐಪಿಎಲ್​ನಿಂದ ದೂರ ಉಳಿಯುವ ನಿರ್ಧಾರ ಮಾಡಿರುವುದಾಗಿ ಕ್ರಿಕ್​ಬಜ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ರಾಯ್​ ಪ್ರಸ್ತುತ ಇಂಗ್ಲೆಂಡ್ ತಂಡದ ಭಾಗವಾಗಿ ಉಳಿಯಲಿದ್ದಾರೆ. ಆಸ್ಟ್ರೇಲಿಯಾದ ವೈಟ್-ಬಾಲ್ ಸರಣಿಯನ್ನು ಎದುರು ನೋಡುತ್ತಿರುವ ಅವರು ಪ್ರಸ್ತುತ ಪುನಶ್ಚೇತನ ಕಾರ್ಯಕ್ಕೆ ಒಳಗಾಗಿದ್ದಾರೆ ಎಂದು ಇಸಿಬಿ ತಿಳಿಸಿದೆ.

ಐಪಿಎಲ್​ನಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಡೆಲ್ಲಿ ಕ್ಯಾಪಿಟಲ್​ ತಂಡ ಆಸ್ಟ್ರೇಲಿಯಾದ ಆಲ್​ರೌಂಡರ್​ ಡೇನಿಯಲ್​ ಸ್ಯಾಮ್​ರನ್ನು ತಂಡಕ್ಕೆ ಸೇರಿಸಿಕೊಂಡಿದೆ.​

ಜೇಸನ್​ ರಾಯ್​ಗೂ ಮೊದಲು ಡೆಲ್ಲಿ ತಂಡದಲ್ಲಿದ್ದ ಇಂಗ್ಲೆಂಡ್​ ಆಲ್​ರೌಂಡರ್ ಕ್ರಿಸ್​ ವೋಕ್ಸ್​​ ಸಮ್ಮರ್​ ಕ್ರಿಕೆಟ್​ಗಾಗಿ ಫಿಟ್​ ಆಗಿರಲು ಐಪಿಎಲ್​ ನಿಂದ ಹೊರ ಹೋಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.