ಗಾಲೆ : ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಪಡೆದ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ 2ನೇ ವೇಗದ ಬೌಲರ್ ಎಂಬ ದಾಖಲೆಗೆ ಪಾತ್ರರಾದರು.
ಗಾಲೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನಲ್ಲಿ ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ 381 ರನ್ಗಳಿಸಿದೆ. ಮ್ಯಾಥ್ಯೂಸ್ 110 ರನ್ಗಲಿಸಿದರೆ, ನಿರೋಶನ್ ಡಿಕ್ವೆಲ್ಲಾ 92 ಹಾಗೂ ದಿಲ್ರುವಾನ್ ಪೆರೆರಾ 67 ರನ್ಗಳಿಸಿದರು.
ಮೊದಲ ಪಂದ್ಯದಲ್ಲಿ ಇದೇ ಕ್ರೀಡಾಂಗಣದಲ್ಲಿ ಸ್ಪಿನ್ ಬೌಲರ್ಗಳು ಪ್ರಾಬಲ್ಯ ಸಾಧಿಸಿದ್ದರು. ಆದರೆ, ಎರಡನೇ ಪಂದ್ಯದಲ್ಲಿ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ 40 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ವಿಶ್ವದ 2ನೇ ವೇಗದ ಬೌಲರ್ ಎಂಬ ದಾಖಲೆಗೆ ಪಾತ್ರರಾದರು.
ಜೇಮ್ಸ್ ಆ್ಯಂಡರ್ಸನ್ 157ನೇ ಪಂದ್ಯದಲ್ಲಿ 30ನೇ ಬಾರಿ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ಗ್ಲೇನ್ ಮೆಕ್ಗ್ರಾತ್ ದಾಖಲೆ ಬ್ರೇಕ್ ಮಾಡಿದರು. ಆಸೀಸ್ ವೇಗಿ 124 ಪಂದ್ಯಗಳಲ್ಲಿ 29 ಬಾರಿ 5 ವಿಕೆಟ್ ಪಡೆದಿದ್ದರು.
ಇನ್ನು, ಟೆಸ್ಟ್ ಕ್ರಿಕೆಟ್ನ ವೇಗಿಗಳಲ್ಲಿ ಅತಿಹೆಚ್ಚು 5 ವಿಕೆಟ್ ಪಡೆದ ದಾಖಲೆ ನ್ಯೂಜಿಲ್ಯಾಂಡ್ನ ರಿಚರ್ಡ್ ಹ್ಯಾಡ್ಲಿ ಅವರ ಹೆಸರಿನಲ್ಲಿದೆ. ಅವರು 86 ಪಂದ್ಯಗಳಲ್ಲಿ 36 ಬಾರಿ 5 ವಿಕೆಟ್ ಪಡೆದಿದ್ದಾರೆ. ಬೌಲರ್ಗಳಲ್ಲಿ ನೋಡುವುದಾದ್ರೆ, ಸ್ಪಿನ್ ಲೆಜೆಂಡ್ಗಳಾದ ಮುತ್ತಯ್ಯ ಮುರಳೀದರನ್ 67 ಬಾರಿ, ಶೇನ್ ವಾರ್ನ್ 37, ಅನಿಲ್ ಕುಂಬ್ಳೆ 35 ಹಾಗೂ ಹೆರಾತ್ 34 ಬಾರಿ ಈ ಸಾಧನೆ ಮಾಡಿದ್ದಾರೆ.
ಇದನ್ನು ಓದಿ : ಇಂಗ್ಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ 1 ವಾರ ಕ್ವಾರಂಟೈನ್