ನವದೆಹಲಿ: ಇಂಗ್ಲೆಂಡ್ ತಂಡದ ಮಂಚೂಣಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರನ್ನು ತಾವೆದುರಿಸಿದ ಅತ್ಯುತ್ತಮ ಬೌಲರ್ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ 600 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎಂಬ ದಾಖಲೆಗೆ ಪಾತ್ರರಾದ ಬೆನ್ನಲ್ಲೇ ವಿರಾಟ್ ಈ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್ ಬೌಲರ್ ಪ್ರಸ್ತುತ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಪಟ್ಟಿಯಲ್ಲಿ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಆ್ಯಂಡರ್ಸನ್ ಪಾಕ್ ತಂಡದ ನಾಯಕ ಅಜರ್ ಅಲಿ ಅವರ ವಿಕೆಟ್ ಪಡೆಯುವ ಮೂಲಕ ಈ ಮಹತ್ವದ ದಾಖಲೆಗೆ ಪಾತ್ರರಾದರು.
ಈ ಬಲಗೈ ವೇಗಿ 600 ವಿಕೆಟ್ ಪಡೆಯುತ್ತಿದ್ದಂತೆ ಟೀಂ ಇಂಡಿಯಾ ಕ್ಯಾಪ್ಟನ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. "ನಿಮ್ಮ 600 ವಿಕೆಟ್ಗಳ ಅತ್ಯುತ್ತಮ ಸಾಧನೆಗೆ ಅಭಿನಂದನೆಗಳು ಜೇಮ್ಸ್ ಆ್ಯಂಡರ್ಸನ್, ನೀವು ಖಂಡಿತವಾಗಿಯೂ ನಾನೆದುರಿಸಿದ ಅತ್ಯುತ್ತಮ ಬೌಲರ್" ಎಂದು ಟ್ವೀಟ್ ಮಾಡಿದ್ದಾರೆ.
-
Congratulations @jimmy9 for this outstanding achievement of 600 wickets. Definitely one of the best bowlers I've faced.
— Virat Kohli (@imVkohli) August 25, 2020 " class="align-text-top noRightClick twitterSection" data="
">Congratulations @jimmy9 for this outstanding achievement of 600 wickets. Definitely one of the best bowlers I've faced.
— Virat Kohli (@imVkohli) August 25, 2020Congratulations @jimmy9 for this outstanding achievement of 600 wickets. Definitely one of the best bowlers I've faced.
— Virat Kohli (@imVkohli) August 25, 2020
38 ವರ್ಷದ ಜೇಮ್ಸ್ ಆ್ಯಂಡರ್ಸನ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಪಟ್ಟಿಯಲ್ಲಿ ಮುತ್ತಯ್ಯ ಮುರುಳಿಧರನ್ (800), ಶೇನ್ ವಾರ್ನ್(708), ಅನಿಲ್ ಕುಂಬ್ಳೆ(619) ನಂತರದ ಸ್ಥಾನದಲ್ಲಿದ್ದಾರೆ. ಇನ್ನು ವೇಗಿಗಳ ವಿಭಾಗದಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಶ್ರೇಯ ಇವರಿಗೆ ಸಲ್ಲುತ್ತದೆ. ಇವರ ನಂತರ ಆಸೀಸ್ನ ಗ್ಲೇನ್ ಮೆಕ್ಗ್ರಾತ್(563), ವಿಂಡೀಸ್ನ ಕಾರ್ಟ್ನಿ ವಾಲ್ಶ್(519) ಹಾಗೂ ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್(514) ಇದ್ದಾರೆ.