ರಾಜ್ಕೋಟ್: 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲು ನನ್ನ ಬದುಕಿನ ಅತ್ಯಂತ ದುಃಖದ ದಿನಗಳಲ್ಲಿ ಒಂದು ಎಂದು ಟೀಂ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಇದೇ ತಿಂಗಳಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ನಲ್ಲಿ ಅತ್ಯದ್ಬುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ, ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 18ರನ್ಗಳ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಈ ಪಂದ್ಯದಲ್ಲಿ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಹಾಯದಿಂದ ಜಡೇಜಾ 59 ಎಸೆತಗಳಲ್ಲಿ ಬರೋಬ್ಬರಿ 77ರನ್ಗಳಿಕೆ ಮಾಡಿದ್ದರೂ ಕೂಡ ತಂಡ ಸೋಲು ಕಾಣುವಂತಾಗಿತ್ತು.
-
We try our best but still fall short sometimes 😔
— Ravindrasinh jadeja (@imjadeja) July 10, 2020 " class="align-text-top noRightClick twitterSection" data="
One of the saddest days! #oneyearagotoday pic.twitter.com/1U3N3VYyYj
">We try our best but still fall short sometimes 😔
— Ravindrasinh jadeja (@imjadeja) July 10, 2020
One of the saddest days! #oneyearagotoday pic.twitter.com/1U3N3VYyYjWe try our best but still fall short sometimes 😔
— Ravindrasinh jadeja (@imjadeja) July 10, 2020
One of the saddest days! #oneyearagotoday pic.twitter.com/1U3N3VYyYj
ಇದೀಗ ಟ್ವೀಟ್ ಮಾಡಿರುವ ಜಡೇಜಾ, ಈ ಪಂದ್ಯದಲ್ಲಿ ನಮ್ಮ ಕೈಯಿಂದ ಆದಷ್ಟು ಪ್ರಯತ್ನ ಮಾಡಿದ್ವಿ. ಆದರೆ ಕೆಲವೊಮ್ಮೆ ಅದು ಕಡಿಮೆಯಾಗುತ್ತದೆ. ನನ್ನ ದುಃಖದ ದಿನಗಳಲ್ಲಿ ಇದು ಒಂದು ಎಂದಿದ್ದಾರೆ.
ಈ ಪಂದ್ಯದಲ್ಲಿ 10 ಓವರ್ಗಳಿಂದ ಕೇವಲ 34ರನ್ ನೀಡಿದ್ದ ಜಡೇಜಾ 1ವಿಕೆಟ್ ಕೂಡ ಪಡೆದುಕೊಂಡಿದ್ದರು. ಜತೆಗೆ ಧೋನಿ ಜತೆ ಸೇರಿ 111ರನ್ಗಳ ಜೊತೆಯಾಟವಾಡಿದ್ದರು.ಇಲ್ಲಿಯವರೆಗೆ 165 ಏಕದಿನ ಪಂದ್ಯಗಳನ್ನಾಡಿರುವ ಜಡೇಜಾ 2,296 ರನ್ಗಳಿಸಿದ್ದು, 187 ವಿಕೆಟ್ ಪಡೆದುಕೊಂಡಿದ್ದಾರೆ.