ETV Bharat / sports

ರವೀಂದ್ರ ಜಡೇಜಾ ವಿಶ್ವ ಕ್ರಿಕೆಟ್ ಅತ್ಯುತ್ತಮ ಫೀಲ್ಡರ್​: ಗೌತಮ್​ ಗಂಭೀರ್​ - ಗೌತಮ್​ ಗಂಭೀರ್ ಲೇಟೆಸ್ಟ್ ನ್ಯೂಸ್

ಭಾರತ ಕ್ರಿಕೆಟ್ ತಂಡದ ಆಲ್​ರೌಂಡ್​ ಆಟಗಾರ ರವೀಂದ್ರ ಜಡೇಜಾ ವಿಶ್ವ ಕ್ರಿಕೆಟ್ ಅತ್ಯುತ್ತಮ ಫೀಲ್ಡರ್​​ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗೆ ಗೌತಮ್ ಗಂಭೀರ್​ ಹೇಳಿದ್ದಾರೆ.

Jadeja probably is the best fielder in world cricket
ರವೀಂದ್ರ ಜಡೇಜಾ ವಿಶ್ವ ಕ್ರಿಕೆಟ್ ಅತ್ಯುತ್ತಮ ಫೀಲ್ಡರ್
author img

By

Published : Jun 19, 2020, 10:38 PM IST

ಮುಂಬೈ: ಸೌರವ್​ ಗಂಗೂಲಿ ಅವರ ನಾಯಕತ್ವದ ವೇಳೆ ಯುವರಾಜ್​ ಮತ್ತು ಮೊಹಮ್ಮದ್ ಕೈಫ್​ ಅತ್ಯುತ್ತಮ ಫೀಲ್ಡರ್​ಗಳಾಗಿದ್ದರು. ಪ್ರಸ್ತುತ ಟೀಂ ಇಂಡಿಯಾ ಆಲ್​ರೌಂಡ್​ ಆಟಗಾರ ರವೀಂದ್ರ ಜಡೇಜಾ ವಿಶ್ವ ಕ್ರಿಕೆಟ್ ಅತ್ಯುತ್ತಮ ಫೀಲ್ಡರ್​ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್​ ಹೇಳಿದ್ದಾರೆ.

ಸ್ಟಾರ್​ಸ್ಪೋರ್ಟ್ಸ್​ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಗೌತಮ್ ಗಂಭೀರ್, ಜಡೇಜಾ ವಿಶ್ವ ಕ್ರಿಕೆಟ್‌ನಲ್ಲಿ ಉತ್ತಮ ಫೀಲ್ಡರ್ ಏಕೆ ಎಂದು ವಿವರಿಸಿದ್ದಾರೆ. 'ನನ್ನ ಪ್ರಕಾರ, ವಿಶ್ವ ಕ್ರಿಕೆಟ್‌ನಲ್ಲಿ ಜಡೇಜಾ ಅವರಿಗಿಂತ ಉತ್ತಮ ಫೀಲ್ಡರ್ ಇಲ್ಲ. ಬಹುಶಃ ಅವರು ಸ್ಲಿಪ್ ಮತ್ತು ಗಲ್ಲಿ ಪಾಯಿಂಟ್​​ನಲ್ಲಿ ಫೀಲ್ಡಿಂಗ್ ಮಾಡದೆ ಇರಬಹುದು ಆದರೆ ಚೆಂಡನ್ನು ವಿಕೆಟ್​​ನತ್ತ ಎಸೆಯುವಲ್ಲಿ ಅವರಿಗಿಂತ ಉತ್ತಮರು ಮತ್ತೊಬ್ಬರಿಲ್ಲ ಎಂದಿದ್ದಾರೆ.

ಜಡೇಜಾರಂತೆ ಉತ್ತಮವಾಗಿ ಯಾರೂ ಔಟ್‌ಫೀಲ್ಡ್ ಕವರ್​ ಮಾಡಲು ಸಾಧ್ಯವಿಲ್ಲ. ಅವರನ್ನು ಪಾಯಿಂಟ್​, ಕವರ್‌ ಅಥವಾ ಯಾವ ಸ್ಥಳದಲ್ಲಾರೂ ಫೀಲ್ಡಿಂಗ್​ಗೆ ನಿಲ್ಲಿಸಬಹುದು. ಜಡೇಜಾ ಅವರಷ್ಟು ಸುಕ್ಷಿತವಾದ ಕೈಗಳನ್ನು ಯಾರೂ ಹೊಂದಿಲ್ಲ. ಬಹುಶಃ ರವೀಂದ್ರ ಜಡೇಜಾ ವಿಶ್ವ ಕ್ರಿಕೆಟ್​​ನ ಅತ್ಯತ್ತಮ ಫೀಲ್ಡರ್​ ಎಂದಿದ್ದಾರೆ.

ದಕ್ಷಿಣ ಆಫ್ರಿಕಾದ ಫೀಲ್ಡಿಂಗ್ ಶ್ರೇಷ್ಠ ಜಾಂಟಿ ರೋಡ್ಸ್ ಕೂಡ ಈ ಹಿಂದೆ ಜಡೇಜಾ ಅವರನ್ನು ವಿಶ್ವದ ಅತ್ಯುತ್ತಮ ಫೀಲ್ಡ್​ಗಳಲ್ಲಿ ಒಬ್ಬರು ಎಂದು ಕರೆದಿದ್ದರು. ಭಾರತೀಯ ಆಲ್​ರೌಂಡರ್ ಉತ್ತಮ ಬದ್ಧತೆ ಮತ್ತು ಚೆಂಡು ಬರುವ ಗತಿಯನ್ನು ನಿರೀಕ್ಷೆ ಮಾಡುವ ಕೌಶಲ್ಯ ಹೊಂದಿದ್ದಾರೆ ಎಂದು ಇನ್​ಸ್ಟಾಗ್ರಾಮ್​ ಲೈವ್ ಚಾಟ್‌ನಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರಿಗೆ ಜಾಂಟಿ ರೋಡ್ಸ್​ ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.