ETV Bharat / sports

ವಿವಾದಾಸ್ಪದ 'ಅಂಪೈರ್​ ಕಾಲ್​' ನಿಷೇಧಿಸಲಿ : ಮಾಜಿ ಅಂಪೈರ್​ ಡೆರಿಲ್ ಹಾರ್ಪರ್​ ಇಂಗಿತ - ಅಂಪೈರ್​ ಕಾಲ್ ವಿವಾಧ

ಪ್ರಸ್ತುತ ಅಂಪೈರ್​ಗಳು​ ಎಲ್​ಬಿಡಬ್ಲ್ಯೂಗೆ ರಿವ್ಯೂವ್​ ಕೇಳಿದ ಸಂದರ್ಭದಲ್ಲಿ ಅಂಪೈರ್​ ಕಾಲ್​ ಪರಿಗಣನೆಗೆ ಬರುತ್ತದೆ. ರಿವ್ಯೂ​ನಲ್ಲಿ ಚೆಂಡು ಸ್ಟಂಪ್​ಗೆ ಹೊಡೆಯುತ್ತಿದ್ದರೂ, ಅಂಪೈರ್​ ನಾಟೌಟ್​ ಎಂದು ತೀರ್ಪು ನೀಡಿದ್ರೆ, ಟಿವಿ ಅಂಪೈರ್​ಗೆ ಔಟ್​ ಎಂದು ತೀರ್ಪು ನೀಡುವ ಅಥವಾ ಮೈದಾನದ ಅಂಪೈರ್​ ನಿರ್ಧಾರವನ್ನು ಬದಲಿಸುವ ಅಧಿಕಾರ ಇರುವುದಿಲ್ಲ. ಈ ಸಂದರ್ಭದಲ್ಲಿ ಬೌಲಿಂಗ್​ ತಂಡಕ್ಕೆ ಕೇವಲ ರಿವ್ಯೂ​ ಮಾತ್ರ ಉಳಿದುಕೊಳ್ಳಲಿದೆ..

ಮಾಜಿ ಐಸಿಸಿ ಅಂಪೈರ್​ ಡೆರಿಲ್ ಹಾರ್ಪರ್​
ಮಾಜಿ ಐಸಿಸಿ ಅಂಪೈರ್​ ಡೆರಿಲ್ ಹಾರ್ಪರ್​
author img

By

Published : Jan 2, 2021, 4:56 PM IST

ಸಿಡ್ನಿ : ಡಿಆರ್​ಎಸ್​ (ಡಿಸಿಸನ್​ ರಿವ್ಯೂವ್​ ಸಿಸ್ಟಮ್​)ನಲ್ಲಿ ಅಂಪೈರ್​ ಕರೆ ನಿರ್ಧಾರವನ್ನು ನಿಷೇಧಿಸುವಂತೆ ಐಸಿಸಿ ಎಲೈಟ್​ ಪ್ಯಾನಲ್​ನ ಮಾಜಿ ಅಂಪೈರ್​ ಡೆರಿಲ್ ಹಾರ್ಪರ್​ ಆಗ್ರಹಿಸಿದ್ದಾರೆ.​

​ಒಂದು ದಶಕವಾದರೂ ಡಿಆರ್​ಎಸ್​ನಲ್ಲಿ ಸಂವಹನ ಮತ್ತು ತಿಳುವಳಿಕೆಯಲ್ಲಿ ಕೊರತೆ ಕಂಡು ಬರುತ್ತಿರುವುದರಿಂದ ಮಿಚೆಲ್​ ಈ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಅಂಪೈರ್​ಗಳು​ ಎಲ್​ಬಿಡಬ್ಲ್ಯೂಗೆ ರಿವ್ಯೂವ್​ ಕೇಳಿದ ಸಂದರ್ಭದಲ್ಲಿ ಅಂಪೈರ್​ ಕಾಲ್​ ಪರಿಗಣನೆಗೆ ಬರುತ್ತದೆ.

ರಿವ್ಯೂ​ನಲ್ಲಿ ಚೆಂಡು ಸ್ಟಂಪ್​ಗೆ ಹೊಡೆಯುತ್ತಿದ್ದರೂ, ಅಂಪೈರ್​ ನಾಟೌಟ್​ ಎಂದು ತೀರ್ಪು ನೀಡಿದ್ರೆ, ಟಿವಿ ಅಂಪೈರ್​ಗೆ ಔಟ್​ ಎಂದು ತೀರ್ಪು ನೀಡುವ ಅಥವಾ ಮೈದಾನದ ಅಂಪೈರ್​ ನಿರ್ಧಾರವನ್ನು ಬದಲಿಸುವ ಅಧಿಕಾರ ಇರುವುದಿಲ್ಲ. ಈ ಸಂದರ್ಭದಲ್ಲಿ ಬೌಲಿಂಗ್​ ತಂಡಕ್ಕೆ ಕೇವಲ ರಿವ್ಯೂ​ ಮಾತ್ರ ಉಳಿದುಕೊಳ್ಳಲಿದೆ.

ನಾನು ಸಾಕಷ್ಟು ಅಂಪೈರ್​ ಕರೆಗಳನ್ನು ಹೊಂದಿದ್ದೇನೆ. ಹಾಗಾಗಿ ವಿವಾದವನ್ನು ತಡೆಯಲು ಅಂಪೈರ್ ಕರೆಯನ್ನು ನಿಷೇಧಿಸೋಣ. ಚೆಂಡು ಶೇ. 48 ಅಥವಾ 49 ಸ್ಟಂಪ್​ಗೆ ತಾಕಿದರು ಅದನ್ನು ಔಟ್​ ಎಂದೇ ತೀರ್ಮಾನಿಸೋಣ ಎಂದ ಆಸ್ಟ್ರೇಲಿಯಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್​
ಸಚಿನ್ ತೆಂಡೂಲ್ಕರ್​

ಓದಿ: ಕೆಲ ಸಾರಿ ಎಲ್ಲರಿಗೂ ಹಿನ್ನಡೆ ಆಗುತ್ತದೆ : ಸ್ಮಿತ್ ಪರ ವಾರ್ನರ್ ಬ್ಯಾಟಿಂಗ್‌

"ಇದು 12 ವರ್ಷಗಳಿಂದ ಹೀಗೆಯೇ ನಡೆಯುತ್ತಿದೆ ಮತ್ತು ಕೆಲವೊಮ್ಮೆ ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದಾರೆ. ಕೆಲವೊಮ್ಮೆ ಆಟಗಾರರು ಕೂಡ ತಬ್ಬಿಬ್ಬಾಗಿದ್ದಾರೆ. ಇದು ಡಿಆರ್​ಎಸ್​ನ ಸಂವಹನ ಅಥವಾ ತಿಳುವಳಿಕೆಯಲ್ಲಿ ಕೆಲವು ನ್ಯೂನತೆಗಳಿವೆ ಎಂಬುದನ್ನು ಸೂಚಿಸುತ್ತದೆ" ಎಂದು ಅವರು ಹೇಳಿದರು.

ಇದಕ್ಕೂ ಮುಂಚೆ ಭಾರತ ತಂಡ ಮಾಜಿ ಕ್ರಿಕೆಟಿಗರ ಸಚಿನ್ ತೆಂಡೂಲ್ಕರ್​ ಹಾಗೂ ಹರ್ಭಜನ್​ ಸಿಂಗ್ ಕೂಡ ಅಂಪೈರ್​ ಕಾಲ್​ ನಿಷೇಧ ಮಾಡಬೇಕೆಂದು ತಿಳಿಸಿದ್ದರು. ಚೆಂಡು ರಿವ್ಯೂ​ನಲ್ಲಿ ಸ್ಟಂಪ್​ಗೆ ತಾಗಿದರೆ ಅದನ್ನು ಔಟ್​ ಎಂದು ತೀರ್ಪು ನೀಡಬೇಕು. ಈ ಸಂದರ್ಭದಲ್ಲಿ ಅಂಪೈರ್​ ತೀರ್ಮಾನವನ್ನೇ ಎತ್ತಿ ಹಿಡಿಯಬಾರದೆಂದು ತಿಳಿಸಿದ್ದರು.

ಅಲ್ಲದೆ ಮೂರನೇ ಅಂಪೈರ್​ಗೆ ಮನವಿ ಮಾಡಿದಾಗ ಮೈದಾನದ ಅಂಪೈರ್​ ತೀರ್ಮಾನ ಏನೇ ಆಗಿದ್ದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.