ಲಂಡನ್ [ಯುಕೆ]: ವೆಸ್ಟ್ ಇಂಡೀಸ್ ಆಟಗಾರ ಕೆಮರ್ ರೋಚ್, ವೇಗದ ಬೌಲರ್ ಜೋಫ್ರಾ ಆರ್ಚರ್ ಅವರಿಗೆ ಎಚ್ಚರಿಕೆ ನೀಡಿದ್ದು, ಇಲ್ಲಿ ಸ್ನೇಹಕ್ಕೆ ಅವಕಾಶವಿಲ್ಲ. ನಮ್ಮ ತಂಡವು ಇಂಗ್ಲೆಂಡ್ ವಿರುದ್ಧ ಗೆಲ್ಲಲು ಮಾತ್ರ ಗಮನ ಹರಿಸಲಿದೆ ಎಂದು ಹೇಳಿದ್ದಾರೆ.
"ಇಲ್ಲಿಯವರೆಗೂ ಜೋಫ್ರಾ ತನ್ನ ನಿರ್ಧಾರವನ್ನು ತಾನೆ ತೆಗೆದುಕೊಂಡಿದ್ದಾನೆ. ಅವನು ತನ್ನ ವೃತ್ತಿಜೀವನದಲ್ಲಿ ಇದುವರೆಗೆ ಅದ್ಭುತ ಆಟವಾಡಿದ್ದಾನೆ ಎಂದು ನಾನು ಭಾವಿಸುತ್ತೇನೆ. ಆದರೆ ಈ ಸರಣಿಯಲ್ಲಿ ಯಾವುದೇ ರೀತಿಯಲ್ಲಿ ಸ್ನೇಹಕ್ಕೆ ಅವಕಾಶವಿಲ್ಲ ಎಂದು" ಎಂದು ರೋಚ್ ಹೇಳಿದ್ದಾರೆ.
"ಇಲ್ಲಿ ಕ್ರಿಕೆಟ್ ಆಡಿ ಗೆಲ್ಲುವ ಗುರಿ ಹೊಂದಿದ್ದೇವೆ. ಆದ್ದರಿಂದ ನಾವು ಜೋಫ್ರಾ ವಿರುದ್ಧ ಬಂದಾಗ ಅವರನ್ನು ಎದುರಿಸಲು ಅದ್ಭುತ ಯೋಜನೆಯನ್ನು ರೂಪಿಸಿಕೊಂಡಿದ್ದೇವೆ. ನಾನು ಈ ಸರಣಿಯಲ್ಲಿ ಅವರನ್ನ ಮತ್ತು ತಂಡದ ಉಳಿದವರನ್ನ ಎದುರಿಸಲು ಕಾಯುತ್ತಿದ್ದೇನೆ ಎಂದು ಹೇಳಿದರು.
ಓದಿ: ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ಐಪಿಎಲ್ ನಡೆಯುವ ಸಾಧ್ಯತೆ: ಸುನಿಲ್ ಗವಾಸ್ಕರ್
ಜುಲೈ 8 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ಧ ಸ್ಪರ್ಧಿಸಲು ಸಜ್ಜಾಗಿದೆ.
ಇದಲ್ಲದೆ, ಕೊರೊನಾದಿಂದ ಬೌಲರ್‌ಗಳು ಎಂಜಲಿನಿಂದ ಚೆಂಡನ್ನು ಹೊಳೆಯುವಂತೆ ಮಾಡಲು ಅನುಮತಿಸುವುದಿಲ್ಲ. ಚೆಂಡಿನ ಮೇಲೆ ಎಂಜಲನ್ನು ಬಳಸುವುದನ್ನು ನಿಷೇಧಿಸುವುದು ಬೌಲರ್‌ಗಳ ಮೇಲೆ ಕಠಿಣ ಪರಿಣಾಮ ಬೀರಲಿದೆ ಎಂದು ರೋಚ್ ಒಪ್ಪಿಕೊಂಡರು.
"ಇಲ್ಲಿನ ವಾತಾವರಣವು ತುಂಬಾ ಚಳಿಯಿಂದ ಕೂಡಿರುತ್ತದೆ, ಆದ್ದರಿಂದ ಇಲ್ಲಿ ಅಷ್ಟಾಗಿ ಯಾರು ಬೆವರುವುದಿಲ್ಲ. ಚೆಂಡನ್ನು ಹೊಳೆಯುವಂತೆ ಮಾಡಲು ಇತರೆ ಮಾರ್ಗಗಳಿವೆ. ಯಾವುದೇ ಎಂಜಲನ್ನು ಅನುಮತಿಸಲಾಗುವುದಿಲ್ಲ. ಆದ್ದರಿಂದ ತುಂಬಾ ಕಠಿಣವಾಗಲಿದೆ. ಆದರೆ ಚೆಂಡಿನ ಮೇಲೆ ಉತ್ತಮ ಹೊಳಪು ಬರಲು ನಾವು ಕೆಲವು ಮಾರ್ಗಗಳನ್ನು ಹುಡುಕುತ್ತಿದ್ದೇವೆ ಎಂದರು.