ETV Bharat / sports

ತಂಡಕ್ಕೆ ಮರಳುತ್ತಿರುವುದೇ ಒಂದು ದೊಡ್ಡ ಬಹುಮಾನ: ಮಾರ್ಕಸ್​ ಸ್ಟೋಯ್ನಿಸ್​

author img

By

Published : Aug 30, 2020, 1:56 PM IST

ತಂಡಕ್ಕೆ ಮರಳುತ್ತಿರುವುದರ ಕುರಿತು ಮಾತನಾಡಿರುವ ಸ್ಟೊಯ್ನಿಸ್​, ಸೃಜನಶೀಲತೆಗಳನ್ನು ತರುವ ಮೂಲಕ ಬ್ಯಾಟಿಂಗ್​ನಲ್ಲಿ ಚಲನಶೀಲತೆಯನ್ನು ಬದಲಾಯಿಸಿಕೊಳ್ಳಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಸರಣಿಗೆ ಆಯ್ಕೆಯಾದ ನಂತರ ಅವರಿಂದ ಈ ಹೇಳಿಕೆ ಬಂದಿದೆ.

ಮಾರ್ಕಸ್​ ಸ್ಟೋಯ್ನಿಸ್​
ಮಾರ್ಕಸ್​ ಸ್ಟೋಯ್ನಿಸ್​

ಸೌತಾಂಪ್ಟನ್​: ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ಗಳ ಟೂರ್ನಿಗೆ ತಂಡಕ್ಕೆ ವಾಪಸ್​ ಆಗಿರುವ ಆಸ್ಟ್ರೇಲಿಯಾದ ಆಲ್​ರೌಂಡರ್​ ಮಾರ್ಕಸ್​ ಸ್ಟೊಯ್ನಿಸ್​, ತಂಡಕ್ಕೆ ಮರಳುತ್ತಿರುವುದು ಉತ್ತಮವಾದ ಬಹುಮಾನ ಎಂದು ಹೇಳಿದ್ದಾರೆ.

ತಂಡಕ್ಕೆ ಮರಳುತ್ತಿರುವುದರ ಕುರಿತು ಮಾತನಾಡಿರುವ ಸ್ಟೊಯ್ನಿಸ್​, ಸೃಜನಶೀಲತೆಗಳನ್ನು ತರುವ ಮೂಲಕ ಬ್ಯಾಟಿಂಗ್​ನಲ್ಲಿ ಚಲನಶೀಲತೆಯನ್ನು ಬದಲಾಯಿಸಿಕೊಳ್ಳಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಸರಣಿಗೆ ಆಯ್ಕೆಯಾದ ನಂತರ ಅವರಿಂದ ಈ ಹೇಳಿಕೆ ಬಂದಿದೆ.

ಟಿ 20 ಪಂದ್ಯಗಳು ಏಜಸ್ ಬೌಲ್‌ನಲ್ಲಿ ನಡೆಯಲಿದ್ದು, ಏಕದಿನ ಸರಣಿ ಎಮಿರೇಟ್ಸ್ ಓಲ್ಡ್ ಟ್ರ್ಯಾಫೋರ್ಡ್‌ನಲ್ಲಿ ನಡೆಯಲಿದೆ. ಈ ಎಲ್ಲಾ ಪಂದ್ಯಗಳನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ.

ನಾನು ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಕ್ರೀಸ್​ನಲ್ಲಿ ಸ್ವಲ್ಪಮಟ್ಟಿಗೆ ಇರುವ ಸಲುವಾಗಿ ಕೆಲವು ಆಯ್ಕೆಗಳನ್ನು ರಚಿಸಲು ಮತ್ತು ಆಟದ ಕ್ರಿಯಾತ್ಮಕತೆಯನ್ನು ಬದಲಾಯಿಸಲು ಹೆಚ್ಚು ಸಿದ್ದನಾಗಿದ್ದೇನೆ. ನಾನು ಸಾಕಷ್ಟು ವೈಯಕ್ತಿಕ ರಚನಾತ್ಮಕ ಆಟಗಾರನಾಗಿದ್ದೇನೆ ಹಾಗಾಗಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ ಎಂದು ಸ್ಟೊಯ್ನಿಸ್​ ಹೇಳಿದ್ದಾರೆ.

ಸ್ಟೊಯ್ನಿಸ್​ ಅಂಕಿ ಅಂಶ
ಸ್ಟೊಯ್ನಿಸ್​ ಅಂಕಿ ಅಂಶ

2019 ವಿಶ್ವಕಪ್​ ನಂತರ ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದಿದ್ದರು. ಈ ಬಗ್ಗೆ ಮಾತನಾಡಿದ ಅವರು ನೀವು ಉತ್ತಮ ಪ್ರದರ್ಶನ ತೋರಿದರೂ ಮಂಡಳಿಯಿಂದ ಬಹುಮಾನ ಸಿಗುತ್ತಿಲ್ಲ ಅನಿಸಿದಾಗ ಅದು ನಿರಾಶಾದಾಯಕವಾಗಿರುತ್ತದೆ. ಆದರೆ ಅದೇ ರೀತಿ ಏರೇಳು ಆಟಗಾರರು ಇದ್ದಾಗ ನೀವು ಆ ಅಲೋಚನೆಯಲ್ಲಿ ತುಂಬಾ ದೂರ ಹೋಗದೆ, ನೀವು ನಿಮ್ಮ ಕೆಲಸವನ್ನು ಮಾಡುತ್ತಿದ್ದರೆ ತಂಡಕ್ಕೆ ಹಿಂತಿರುಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ತಂಡಕ್ಕೆ ಮರಳಲು ಎಷ್ಟು ಸಮಯ ಬೇಕು ಎಂದು ತಿಳಿದಿರಲಿಲ್ಲ. ಆದರೆ ಮರಳಿರುವುದು ಸಂತೋಷ ತಂದಿದೆ ಎಂದಿದ್ದಾರೆ.

ಸ್ಟೊಯ್ನಿಸ್​ ಕಳೆದ ವರ್ಷದ ಬಿಗ್​ಬ್ಯಾಶ್​​ನಲ್ಲಿ 54.23 ರ ಸರಾಸರಿಯಲ್ಲಿ ಒಂದು ಶತಕದ ಸಹಿತ 705 ರನ್​ಗಳಿಸಿದ್ದರು. ಸಿಡ್ನಿ ಸಿಕ್ಸರ್​ ವಿರುದ್ಧ ಔಟಾಗದೆ 147 ರನ್​ಗಳಿಸಿ ದಾಖಲೆ ನಿರ್ಮಿಸಿದ್ದರು.

ಇದೀಗ ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ಗಳ ಸರಣಿಗೆ ಕ್ರಿಕೆಟ್​ ಆಸ್ಟ್ರೇಲಿಯಾ ಘೋಷಿಸಿರುವ 21 ಆಟಗಾರರ ಪಟ್ಟಿಯಲ್ಲಿ ಅವರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.