ETV Bharat / sports

'ಬಯೋ ಬಬಲ್ ಮಾನಸಿಕವಾಗಿ ಕಠಿಣವಾಗಿತ್ತು': ಆಟಗಾರರಿಗೆ ಧನ್ಯವಾದ ಅರ್ಪಿಸಿದ ದಾದಾ - IPL 2020

ಕೋವಿಡ್​ 19 ನಿಂದಾಗಿ 13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆದಿತ್ತು. ​ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್​ಗಳ ಜಯ ಸಾಧಿಸಿತು.

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ
author img

By

Published : Nov 11, 2020, 5:32 PM IST

ದುಬೈ: ಮಂಗಳವಾರ 13ನೇ ಆವೃತ್ತಿ ಐಪಿಎಲ್ ಮುಕ್ತಾಯವಾಗಿದೆ. ಮುಂಬೈ ಇಂಡಿಯನ್ಸ್​ 5ನೇ ಬಾರಿ ಚಾಂಪಿಯನ್​ ಪಟ್ಟಕ್ಕೇರಿದೆ. ಆದರೆ, ಕೋವಿಡ್ ಸಂಕಷ್ಟದ ನಡುವೆಯೂ 3 ತಿಂಗಳ ಕಾಲ ಬಯೋಬಲ್​ನಲ್ಲಿದ್ದು ಟೂರ್ನಿಯ ಯಶಸ್ಸಿಗೆ ಕಾರಣರಾದ ಎಲ್ಲ ಆಟಗಾರರಿಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ಅರ್ಪಿಸಿದ್ದಾರೆ.

ಕೋವಿಡ್​ 19 ನಿಂದಾಗಿ 13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆದಿತ್ತು. ​ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್​ಗಳ ಜಯ ಸಾಧಿಸಿತು.

  • @bcci..along with the office bearers I personally thank all the players of each IPL team, for going thru the tuff bio bubble to make this tournament possible..it was tuff mentally, and ur commitment makes indian cricket what it is @JayShah @ThakurArunS

    — Sourav Ganguly (@SGanguly99) November 11, 2020 " class="align-text-top noRightClick twitterSection" data=" ">

ಬಯೋ ಬಬಲ್​ನಲ್ಲಿದ್ದು ಟೂರ್ನಿಯನ್ನು ಯಶಸ್ವಿಯಾಗಿಸಲು ನೆರವಾದ ಎಲ್ಲ ಐಪಿಎಲ್​ ತಂಡಗಳ ಆಟಗಾರರಿಗೆ ಬಿಸಿಸಿಐ ಮತ್ತು ಎಲ್ಲ ಅಧಿಕಾರಿಗಳ ಪರವಾಗಿ ಮತ್ತು ವೈಯಕ್ತಿಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಬಯೋಬಬಲ್​ ನಿಜಕ್ಕು ಮಾನಸಿಕವಾಗಿ ಕಠಿಣವಾಗಿದೆ. ಭಾರತೀಯ ಕ್ರಿಕೆಟ್​ ಏನು ಎಂದು ತೋರಿಸಿಕೊಟ್ಟಿದ್ದೀರಾ ಎಂದು ಗಂಗೂಲಿ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಈ ಟೂರ್ನಿ ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಬೇಕಿತ್ತು. ಆದರೆ, ಭಾರತದಲ್ಲಿ ಕೊರೊನಾ ಭೀತಿಯಿಂದ ಮುಂದೂಡಲ್ಪಟ್ಟಿತ್ತು. ಕೆಲವು ತಿಂಗಳ ನಂತರ ಬಿಸಿಸಿಐ ಯುಎಇ ಕ್ರಿಕೆಟ್ ಸಹಯೋಗದಲ್ಲಿ ನಡೆಸಲು ತೀರ್ಮಾನಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.