ETV Bharat / sports

ಒಂದೇ ಟೂರ್ನಿಯಲ್ಲಿ, ಒಂದೇ ದಿನ 2 ಪಂದ್ಯ ಟೈ: ಟಿ20 ಕ್ರಿಕೆಟ್​ನಲ್ಲಿ ಇದು 5ನೇ ನಿದರ್ಶನ! - ಕೆಕೆಆರ್ ಹಾಗೂ ಸನ್​ರೈಸರ್ಸ್ ಹೈದರಾಬಾದ್​

2009ರಲ್ಲಿ ದಕ್ಷಿಣ ಆಫ್ರಿಕಾದ ಸ್ಟ್ಯಾಂಡರ್ಡ್​ ಬ್ಯಾಂಕ್ ಪ್ರೋ ಟಿ20 ಸರಣಿಯಲ್ಲಿ ಮೊದಲ ಬಾರಿಗೆ 2 ಪಂದ್ಯಗಳೂ ಟೈನಲ್ಲಿ ಆಂತ್ಯಗೊಂಡಿದ್ದವು. ನಂತರ 2011ರಲ್ಲಿ ಇಂಗ್ಲೆಂಡ್​ನ ಫ್ರೆಂಡ್ಸ್​ ಲೈಫ್ ಟಿ20, 2018ರಲ್ಲಿ ಶ್ರೀಲಂಕಾದ ಟಿ20 ಟೂರ್ನಮೆಂಟ್ ಹಾಗೂ 2019ರಲ್ಲಿ ದಕ್ಷಿಣ ಆಫ್ರಿಕಾದ ಪ್ರೊವೆನ್ಸಿಯಲ್ ಟಿ20 ಕಪ್​ನಲ್ಲಿ ಈ ವಿಶೇಷತೆ ಕಂಡುಬಂದಿತ್ತು.

ಐಪಿಎಲ್ ಸೂಪರ್ ಓವರ್​
ಐಪಿಎಲ್ ಸೂಪರ್ ಓವರ್​
author img

By

Published : Oct 19, 2020, 5:51 PM IST

ದುಬೈ: ಐಪಿಎಲ್ ಭಾನುವಾರ ಅಭಿಮಾನಿಗಳಿಗೆ ಅದ್ಭುತ ಮನರಂಜನೆ ನೀಡಿದೆ. ಒಂದೇ ದಿನ ಎರಡು ಬಲಿಷ್ಠ ತಂಡಗಳು ಫಲಿತಾಂಶಕ್ಕಾಗಿ ಸೂಪರ್​ ಓವರ್​ಗಳನ್ನಾಡಿವೆ. ಅದರಲ್ಲೂ ಮುಂಬೈ ಮತ್ತು ಪಂಜಾಬ್ ತಂಡಗಳು 2 ಸೂಪರ್ ಓವರ್​ ಆಡಿದ್ದು ಐತಿಹಾಸಿಕ ಕ್ಷಣವಾಗಿದೆ.

ಭಾನುವಾರ ಕೆಕೆಆರ್ ಮತ್ತು ಹೈದರಾಬಾದ್ ತಂಡಗಳ ನಡುವಿನ ಪಂದ್ಯ ಟೈ ಆಗಿತ್ತು. ಸೂಪರ್ ಓವರ್​ನಲ್ಲಿ ಕೆಕೆಆರ್ ಗೆದ್ದು ಬೀಗಿತ್ತು. ಆದರೆ ರಾತ್ರಿ ನಡೆದ 2ನೇ ಪಂದ್ಯದಲ್ಲಿ ಪಂಜಾಬ್ ಹಾಗೂ ಮುಂಬೈ ನಡುವಿನ ಪಂದ್ಯ ಕೂಡ ಟೈ ಆಯಿತು. ಈ ಪಂದ್ಯವನ್ನ 2ನೇ ಸೂಪರ್ ಓವರ್​ನಲ್ಲಿ ಪಂಜಾಬ್ ಗೆಲ್ಲುವ ಮೂಲಕ ವಿಶ್ವದಲ್ಲೇ 2ನೇ ಸೂಪರ್​ ಓವರ್​ ಪಂದ್ಯ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಆದರೆ ಒಂದೇ ದಿನ 2 ಟಿ20 ಪಂದ್ಯಗಳು ಟೈ ಆಗಿದ್ದು ಐಪಿಎಲ್​ಗೆ ವಿಶೇಷವೆನಿಸಿದರೂ ಟಿ20 ಕ್ರಿಕೆಟ್​ಗೆ ಮಾತ್ರ ಇದು 5ನೇ ಬಾರಿ.

2009ರಲ್ಲಿ ದಕ್ಷಿಣಾ ಆಫ್ರಿಕಾದ ಸ್ಟ್ಯಾಂಡರ್ಡ್​ ಬ್ಯಾಂಕ್ ಪ್ರೋ ಟಿ20 ಸರಣಿಯಲ್ಲಿ ಮೊದಲ ಬಾರಿಗೆ 2 ಪಂದ್ಯಗಳೂ ಟೈನಲ್ಲಿ ಆಂತ್ಯಗೊಂಡಿದ್ದವು. ನಂತರ 2011ರಲ್ಲಿ ಇಂಗ್ಲೆಂಡ್​ನ ಫ್ರೆಂಡ್ಸ್​ ಲೈಫ್ ಟಿ20, 2018ರಲ್ಲಿ ಶ್ರೀಲಂಕಾದ ಟಿ20 ಟೂರ್ನಮೆಂಟ್ ಹಾಗೂ 2019ರಲ್ಲಿ ದಕ್ಷಿಣ ಆಫ್ರಿಕಾದ ಪ್ರೊವೆನ್ಸಿಯಲ್ ಟಿ20 ಕಪ್​ನಲ್ಲಿ ಈ ವಿಶೇಷತೆ ಕಂಡುಬಂದಿತ್ತು. ಫ್ರೆಂಡ್ಸ್​​ ಲೈಫ್ ಟೂರ್ನಮೆಂಟ್​ನಲ್ಲಿ ಟೈ ಆಗಿದ್ದ 2 ಪಂದ್ಯಗಳು ಸೆಮಿಫೈನಲ್ ಎಂಬುದು ಮತ್ತೊಂದು ವಿಶೇಷ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.