ಹೈದರಾಬಾದ್: ವೆಸ್ಟ್ ಇಂಡೀಸ್ ಕ್ರಿಕೆಟರ್ ಡೆರೆನ್ ಸಾಮಿ ಮಾಡಿರುವ ಮಾಡಿರುವ ಆರೋಪಕ್ಕೆ ಈ ಹಿಂದೆ 2014ರಲ್ಲಿ ಇಶಾಂತ್ ಶರ್ಮಾ ಮಾಡಿದ್ದ ಈ ಫೋಟೋ ಸಾಕ್ಷಿ ಎನ್ನಲಾಗಿದ್ದು, ಸದ್ಯ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2014ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಡೆರೆನ್ ಸಾಮಿ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಹಾಗೂ ಡೆಲ್ ಸ್ಟೇನ್ ಇರುವ ಪೋಟೋ ವೈರಲ್ ಆಗಿದ್ದು, ಇದರಲ್ಲಿ ಸಾಮಿಗೆ 'ಕಾಲು' ಎಂದು ಕರೆಯಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನನಗೆ ಹಾಗೂ ತಿಸ್ಸಾರ ಪೆರೆರಾಗೆ 'ಕಾಲು' ಎಂದು ಕರೆಯುತ್ತಿದ್ದರು ಎಂದು ವೆಸ್ಟ್ ಇಂಡೀಸ್ ಕ್ರಿಕೆಟರ್ ಡೇರನ್ ಸಾಮಿ ಇತ್ತೀಚೆಗೆ ಅಸಮಾಧಾನ ತೋಡಿಕೊಂಡಿದ್ದರು. ಈ ಬೆನ್ನಲ್ಲೇ ಇಶಾಂತ್ ಶರ್ಮಾ ಇನ್ಸ್ಟಾಗ್ರಾಂ ಹಳೇ ಪೋಟೋ ವೈರಲ್ ಆಗಿದೆ. ತಾವು ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದ ವೇಳೆ ತಮಗೆ 'ಕಾಲು' ಎಂದು ಕರೆಯುತ್ತಿದ್ದರು. ಅದು ಬಲಿಷ್ಠ ವ್ಯಕ್ತಿಗಳಿಗೆ ಬಳಕೆ ಮಾಡುತ್ತಿದ್ದ ಶಬ್ದ ಎಂದು ನಾವು ಪರಿಗಣಿಸಿದ್ದೆವು. ಆದರೆ ಅದರ ಇಂಗ್ಲೀಷ್ ಅರ್ಥ 'ಕಪ್ಪು ಮನುಷ್ಯ' ಎಂಬುದು ನಮಗೀಗ ಅರಿವಾಗಿದೆ ಎಂದು ಅವರು ಹೇಳಿದ್ದರು. ಜತೆಗೆ ಐಪಿಎಲ್ನಲ್ಲೂ ಇಂತಹ ಪದ ಬಳಕೆಯಾಗಿತ್ತು ಎಂದು ಅವರು ಹೇಳಿಕೊಂಡಿದ್ದರು.