ಹೈದರಾಬಾದ್ : ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಮತ್ತೆ ತಮಗೆ ಅವಕಾಶ ಸಿಕ್ಕರೆ ನಿವೃತ್ತಿಯಿಂದ ಹೊರಬರುವ ಆಲೋಚನೆ ಮಾಡಿದ್ದಾರೆ.
ಆಯ್ಕೆ ಸಮಿತಿ ನಮ್ಮ ಸಂದೇಶಕ್ಕೆ ಉತ್ತಮ ರೀತಿಯಲ್ಲಿ ಸಂವಹನ ನಡೆಸಿ ನಮಗೆ ಅವಕಾಶ ನೀಡುವ ಬರವಸೆ ನೀಡಿದರೆ ನಾವು ಕಷ್ಟಪಟ್ಟು ಬೆವರು ಸುರಿಸಲು ತಾವೂ ಸಿದ್ದವಿರುವುದಾಗಿ ಹೇಳಿದ್ದಾರೆ.
ಕೆವಿನ್ ಪೀಟರ್ಸನ್, ಇಮ್ರಾನ್ ಖಾನ್ರಂತಹ ಆಟಗಾರರು ತಮ್ಮ ದೇಶಕ್ಕಾಗಿ ನಿವೃತ್ತಿಯಿಂದ ಹೊರಬಂದು ಆಡಿದ್ದರು. ಅದೇ ರೀತಿ ತಾವೂ ಕೂಡ ಭಾರತ ತಂಡಕ್ಕಾಗಿ ಆಡುವ ಉತ್ಸಾಹವಿದ್ದು, ಆಯ್ಕೆ ಸಮಿತಿ ಅವಕಾಶ ನೀಡುವ ಭರವಸೆ ನೀಡಿದರೆ ಫಿಟ್ನೆಸ್ ಕಡೆ ಗಮನ ನೀಡುವುದಾಗಿ ಹೇಳಿದ್ದಾರೆ.
ಬರೋಡದ ಆಲ್ರೌಂಡರ್ ಈ ವರ್ಷದ ಜನವರಿಯಲ್ಲಿ ತಮ್ಮ 16 ವರ್ಷದ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದರು. ಸ್ವಿಂಗ್ನಲ್ಲಿ ಅದ್ಭುತ ಹಿಡಿತ ಹೊಂದಿದ್ದ ಪಠಾಣ್ ಉತ್ತಮ ಬ್ಯಾಟ್ಸ್ಮನ್ ಕೂಡ ಆಗಿದ್ದರು. 2011ರ ವಿಶ್ವಕಪ್ ವಿಜಯದ ನಂತರ ಭಾರತ ಕ್ರಿಕೆಟ್ ತಂಡದಿಂದ ಬಹುತೇಕ ಅವರು ದೂರ ಉಳಿಯುವಂತಾಯಿತು.
ಸುರೇಶ್ ರೈನಾ ಅವರೊಂದಿಗೆ ಇನ್‌ಸ್ಟಾಗ್ರಾಮ್ ಲೈವ್ನಲ್ಲಿ ಸಂವಾದ ನಡೆಸಿದ ಪಠಾಣ್, ಬಿಸಿಸಿಐ ಆಯ್ಕೆ ಸಮತಿ ತಮ್ಮ ಆಯ್ಕೆಗೆ ಪರಿಗಣಿಸುವುದಾದರೆ ಒಂದು ವರ್ಷದಲ್ಲಿ ಸಂಪೂರ್ಣ ಫಿಟ್ನೆಸ್ನಲ್ಲಿ ಹಿಡಿತ ಸಾಧಿಸಿ ತಂಡಕ್ಕೆ ಸೇವೆ ನೀಡಬಲ್ಲೆ ಎಂದು ಪಠಾಣ್ ಹೇಳಿದ್ದಾರೆ.
ಬೇರೆ ದೇಶಗಳಲ್ಲಿ ಸನ್ನಿವೇಶ ಬೇರೆ ರೀತಿ ಇದೆ. ಆಸ್ಟ್ರೇಲಿಯಾದ ಮೈಕಲ್ ಹಸ್ಸಿ 29ನೇ ವಯಸ್ಸಿಗೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ನಿವೃತ್ತಿ ಘೋಷಿಸುವ ವೇಳೆಗೆ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಆದರೆ, ನನಗೆ 30 ವರ್ಯ ವಯಸಿದ್ದಾಗ ನನಗೆ ಆಡುವ ವಯಸ್ಸು ಮುಗಿದಿದೆ ಎಂದು ಹೇಳಲಾಗಿತ್ತು. ಆಟಗಾರರು ಫಿಟ್ ಇದ್ದರೆ ಅವರಿಗೆ ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿದರು
ಇದಕ್ಕೆ ಸಂವಹನ ಅಗತ್ಯ. ಆಯ್ಕೆ ಸಮಿತಿಯವರು, ನನಗೆ ಇರ್ಫಾನ್ ನಿನಗೆ ತಂಡಕ್ಕೆ ಮರಳಲು ತಯಾರಾಗಲು ಒಂದು ವರ್ಷ ಸಮಯವಿದೆ ಎಂದರೆ ನಾನು ನನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಕಠಿಣ ಪರಿಶ್ರಮ ಪಟ್ಟು ಹೃದಯ ಮತ್ತು ಮನಸ್ಸಿಟ್ಟು ತಯಾರಾಗಲು ಸಿದ್ದನಿದ್ದೇನೆ. ಆದರೆ, ನಮ್ಮ ಜೊತೆ ಮಾತನಾಡುವವರ್ಯಾರು? ಎಂದು ಪ್ರಶ್ನಿಸಿದ್ದಾರೆ.
ಹಾಗೇಯೇ ಮಾತನ್ನು ಮುಂದುವರಿಸಿದ ಪಠಾಣ್, "ಸುರೇಶ್ ರೈನಾ, ವಿಶ್ವಕಪ್ಗೆ ಇನ್ನು 6 ತಿಂಗಳಿದೆ, ನೀವು ಉತ್ತಮ ಪ್ರದರ್ಶನ ತೋರಿದರೆ ನಿಮಗೆ ಅವಕಾಶ ನೀಡುತ್ತೇವೆ ಎಂದು ಆಯ್ಕೆ ಸಮಿತಿ ನಿಮ್ಮೊಂದಿಗೆ ಮಾತನಾಡಿದರೆ ನೀವು ಕೂಡ ಎಲ್ಲವನ್ನು ಬಿಡಲು ಸಿದ್ದರಿಲ್ಲವೇ "ಎಂದು ಕೇಳಿದಾಗ, ರೈನಾ ಕೂಡ ‘ಖಂಡಿತ’ಎಂದು ತಲೆ ಅಲ್ಲಾಡಿಸಿದ್ದಾರೆ.
2018ರಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಆಡಿದ್ದ ರೈನಾ ಕೂಡ, "ನಾವು ಇನ್ನೂ ಯಂಗ್ ಆಗಿದ್ದೇವೆ, ಮೊದಲಾಗಿ ನಮಗೆ ಕ್ರಿಕೆಟ್ ಆಡುವ ಉತ್ಸಾಹವಿದೆ. ನಾವು ಹೋರಾಟಗಾರರು, ನಮಗೆ ಅವಕಾಶ ಸಿಕ್ಕರೆ ಖಂಡಿತ ಉತ್ತಮವಾಗಿ ಆಡುತ್ತೇವೆ. ತುಂಬಾ ಆಟಗಾರರು ಇದರ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಅಸೋಸಿಯೇಷನ್ ಬದಲಾಗಿದೆ. ಆದರೆ, ಅವರಿಂದಲೂ ನಮಗೆ ಬೆಂಬಲ ಸಿಗುತ್ತಿಲ್ಲ" ಎಂದು ರೈನಾ ಬೇಸರ ವ್ಯಕ್ತಪಡಿಸಿದ್ದಾರೆ.