ETV Bharat / sports

2021ರಲ್ಲಿ ಬಿಡುವಿಲ್ಲದೆ ಕ್ರಿಕೆಟ್​ ಆಡಲಿದೆ ಕೊಹ್ಲಿ ಬಳಗ: 12 ತಿಂಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

author img

By

Published : Nov 17, 2020, 9:16 PM IST

ಈಗಷ್ಟೇ ಐಪಿಎಲ್ ಮುಗಿಸಿರುವ ಭಾರತ ತಂಡ 2021ರಲ್ಲಿ ಬಿಡುವಿಲ್ಲದೆ ಸರಣಿಗಳನ್ನಾಡಲಿದೆ. 2021ರಲ್ಲಿ ಭಾರತ ತಂಡ ಜನವರಿಯಿಂದ ಡಿಸೆಂಬರ್​ವರೆಗೆ ಬರೋಬ್ಬರಿ 14 ಟೆಸ್ಟ್​, 16 ಏಕದಿ ಪಂದ್ಯ, 23 ಟಿ-20 ಪಂದ್ಯಗಳನ್ನಾಡಲಿದೆ. ಇದರ ಜೊತೆಗೆ ಜೂನ್​ನಲ್ಲಿ ಏಷ್ಯಾ ಕಪ್​, ಅಕ್ಟೋಬರ್​ನಲ್ಲಿ ಟಿ-20 ವಿಶ್ವಕಪ್​, ಮಾರ್ಚ್​ನಲ್ಲಿ 2021ರ ಐಪಿಎಲ್​ ಆಡಲಿದೆ.

ಭಾರತ ತಂಡದ ವೇಳಾಪಟ್ಟಿ
ಭಾರತ ತಂಡದ ವೇಳಾಪಟ್ಟಿ

ಮುಂಬೈ: ಕೋವಿಡ್-19ನಿಂದ ಕಳೆದ 8 ತಿಂಗಳಿನಿಂದ ಕ್ರೀಡಾ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಆದರೆ ಕಳೆದ 3 ತಿಂಗಳಿನಿಂದ ಹೇಗೋ ಭಾರತ, ಇಂಗ್ಲೆಂಡ್​ ಹಾಗೂ ಆಸ್ಟ್ರೇಲಿಯಾದಂತಹ ಬಲಿಷ್ಠ ಕ್ರಿಕೆಟ್​ ರಾಷ್ಟ್ರಗಳು ಬಯೋಬಬಲ್​ ನಿರ್ಮಿಸಿಕೊಂಡು ಕ್ರಿಕೆಟ್​ಗೆ ಮರಳಲು ಪ್ರಯತ್ನಿಸುತ್ತಿವೆ.

ಈಗಷ್ಟೇ ಐಪಿಎಲ್ ಮುಗಿಸಿರುವ ಭಾರತ ತಂಡ 2021ರಲ್ಲಿ ಬಿಡುವಿಲ್ಲದೆ ಸರಣಿಗಳನ್ನಾಡಲಿದೆ. 2021ರಲ್ಲಿ ಭಾರತ ತಂಡ ಜನವರಿಯಿಂದ ಡಿಸೆಂಬರ್​ವರೆಗೆ ಬರೋಬ್ಬರಿ 14 ಟೆಸ್ಟ್​, 16 ಏಕದಿ ಪಂದ್ಯ, 23 ಟಿ-20 ಪಂದ್ಯಗಳನ್ನಾಡಲಿದೆ. ಇದರ ಜೊತೆಗೆ ಜೂನ್​ನಲ್ಲಿ ಏಷ್ಯಾ ಕಪ್​, ಅಕ್ಟೋಬರ್​ನಲ್ಲಿ ಟಿ-20 ವಿಶ್ವಕಪ್​, ಮಾರ್ಚ್​ನಲ್ಲಿ 2021ರ ಐಪಿಎಲ್​ ಆಡಲಿದೆ.

ಬಿಸಿಸಿಐ ಭಾರತ ಕ್ರಿಕೆಟ್ ತಂಡದ ಸಂಪೂರ್ಣ ವೇಳಾಪಟ್ಟಿಯನ್ನು ಇನ್ನು ಬಿಡುಗಡೆ ಮಾಡಿಲ್ಲವಾದರೂ ಮಂಚೂಣಿ ಕ್ರೀಡಾ ವೆಬ್​ಸೈಟ್​ ಆಗಿರುವ ಇನ್​ಸೈಡ್ ಸ್ಪೋರ್ಟ್ಸ್​ ಹಿಂದೆ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಆಧಾರದಲ್ಲಿ ವರದಿ ಪ್ರಕಟಿಸಿದೆ.

ಭಾರತ ತಂಡ
ಭಾರತ ತಂಡ

2021ರ ಭಾರತ ತಂಡದ ವೇಳಾಪಟ್ಟಿ

ಇಂಗ್ಲೆಂಡ್​ ತಂಡಕ್ಕೆ ಭಾರತದಲ್ಲಿ ಆತಿಥ್ಯ

ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬರುವ ಭಾರತ ತಂಡ ಇಂಗ್ಲೆಂಡ್​ ತಂಡಕ್ಕೆ ಜನವರಿಯಲ್ಲಿ ಆತಿಥ್ಯ ನೀಡಲಿದೆ. ಈ ಸುದೀರ್ಘ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 4 ಟೆಸ್ಟ್, 4 ಏಕದಿನ ಹಾಗೂ 4 ಟಿ-20 ಪಂದ್ಯಗಳನ್ನಾಡಲಿದೆ.

ಮಾರ್ಚ್​​ನಿಂದ ಮೇವರೆಗೆ 2021ರ ಐಪಿಎಲ್​

ಇಂಗ್ಲೆಂಡ್​ ವಿರುದ್ಧದ ಸರಣಿ ಮುಗಿಯುತ್ತಿದ್ದಂತೆ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಆಯೋಜನೆ ಮಾಡಲಿದೆ. ಮಾರ್ಚ್​ ಕೊನೆಯ ವಾರದಿಂದ ಆರಂಭವಾಗುವ ಮಿಲಿಯನ್ ಡಾಲರ್ ಟೂರ್ನಿ ಮೇನಲ್ಲಿ ಅಂತ್ಯಗೊಳ್ಳಲಿದೆ.

ಸೀಮಿತ ಓವರ್​ಗಳ ಸರಣಿ ಮತ್ತು ಏಷ್ಯಾ ಕಪ್​ಗಾಗಿ ಶ್ರೀಲಂಕಾ ಪ್ರವಾಸ

ಐಪಿಎಲ್ ಮುಗಿಯುತ್ತಿದ್ದಂತೆ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 3 ಪಂದ್ಯಗಳ ಏಕದಿನ ಸರಣಿ ಮತ್ತು 5 ಪಂದ್ಯಗಳ ಟಿ-20 ಸರಣಿಯನ್ನಾಡಲಿದೆ. ಈ ಸರಣಿ ಮುಗಿಯುತ್ತಲೇ ಲಂಕಾದಲ್ಲೇ ಜೂನ್​ ಮತ್ತು ಜುಲೈನಲ್ಲಿ ಏಷ್ಯಾ ಕಪ್​ ನಡೆಯಲಿದೆ.

ಜುಲೈನಲ್ಲಿ ಭಾರತ ತಂಡದಿಂದ ಜಿಂಬಾಬ್ವೆ ಪ್ರವಾಸ

ಏಷ್ಯಾ ಕಪ್​ ಮುಗಿಯುತ್ತಿದ್ದಂತೆ 3 ಪಂದ್ಯಗಳ ಏಕದಿನ ಸರಣಿಗಾಗಿ ಜಿಂಬಾಬ್ವೆ ಸರಣಿ ಕೈಗೊಳ್ಳಲಿದೆ. ಈ ಸರಣಿಗೆ ಹಿರಿಯ ಆಟಗಾರರು ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಭಾರತೀಯ ಆಯ್ಕೆ ಸಮಿತಿ ಯುವ ಆಟಗಾರರಿಗೆ ಅವಕಾಶ ನೀಡಲಿದೆ.

ಜುಲೈನಿಂದ ಸೆಪ್ಟೆಂಬರ್​ವರೆಗೆ ಇಂಗ್ಲೆಂಡ್ ಪ್ರವಾಸ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಭಾಗವಾಗಿ 5 ಪಂದ್ಯಗಳ ಟೆಸ್ಟ್​ ಸರಣಿಗಾಗಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.

ಅಕ್ಟೋಬರ್​ನಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ತಂಡ

ಅಕ್ಟೋಬರ್​ನಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 5 ಟಿ-20 , 3 ಏಕದಿನ ಪಂದ್ಯಗಳನ್ನಾಡಲಿದೆ.

ಐಸಿಸಿ ಟಿ-20 ವಿಶ್ವಕಪ್​

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಮುಗಿಯುತ್ತಿದ್ದಂತೆ ಭಾರತದಲ್ಲಿ ಟಿ-20 ವಿಶ್ವಕಪ್​ ಅಕ್ಟೋಬರ್​ ಮತ್ತು ನವೆಂಬರ್​ನಲ್ಲಿ ನಡೆಯಲಿದೆ.

ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ಭಾರತಕ್ಕೆ ನ್ಯೂಜಿಲ್ಯಾಂಡ್​ ತಂಡ ಆಗಮನ

2 ಪಂದ್ಯಗಳ ಟೆಸ್ಟ್​ ಸರಣಿ ಮತ್ತು 3 ಪಂದ್ಯಗಳ ಟಿ-20 ಸರಣಿಗಾಗಿ ನ್ಯೂಜಿಲ್ಯಾಂಡ್​ ತಂಡ ಭಾರತಕ್ಕೆ ಆಗಮಿಸಲಿದೆ.

ಡಿಸೆಂಬರ್​ನಲ್ಲಿ ಭಾರತ ತಂಡದಿಂದ ದಕ್ಷಿಣ ಆಫ್ರಿಕಾ ಪ್ರವಾಸ

ಭಾರತ ತಂಡ 2021ರ ಡಿಸೆಂಬರ್​ನಲ್ಲಿ 3 ಟೆಸ್ಟ್​ ಪಂದ್ಯಗಳ ಸರಣಿ ಮತ್ತು 3 ಟಿ-20 ಸರಣಿಯನ್ನಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.