ETV Bharat / sports

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್​

5ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್​ ತಂಡ ಟೂರ್ನಿಯಲ್ಲಿ ಆಡಿದ 14ರಲ್ಲಿ 9 ಪಂದ್ಯಗಳನ್ನ ಗೆದ್ದು 5 ರಲ್ಲಿ ಸೋಲು ಕಂಡಿದ್ದರು ಅಗ್ರಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಇನ್ನು ಲೀಗ್​ನ 2 ಪಂದ್ಯಗಳಲ್ಲೂ ಡೆಲ್ಲಿ ವಿರುದ್ಧ ಗೆಲುವು ಸಾಧಿಸಿರುವುದರಿಂದ ಇಂದಿನ ಪಂದ್ಯದಲ್ಲೂ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಡೆಲ್ಲಿ vs ಮುಂಬೈ
ಡೆಲ್ಲಿ vs ಮುಂಬೈ
author img

By

Published : Nov 5, 2020, 7:06 PM IST

ದುಬೈ: 13ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್​ ಅಯ್ಯರ್​ ಬೌಲಿಂಗ್ ಆಯ್ದುಕೊಂಡಿದ್ದಾರೆ. ಈ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

5ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್​ ತಂಡ ಟೂರ್ನಿಯಲ್ಲಿ ಆಡಿದ 14 ರಲ್ಲಿ 9 ಪಂದ್ಯಗಳನ್ನ ಗೆದ್ದು 5 ರಲ್ಲಿ ಸೋಲು ಕಂಡಿದ್ದರೂ ಅಗ್ರಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಇನ್ನು ಲೀಗ್​ನ 2 ಪಂದ್ಯಗಳಲ್ಲೂ ಡೆಲ್ಲಿ ವಿರುದ್ಧ ಗೆಲುವು ಸಾಧಿಸಿರುವುದರಿಂದ ಇಂದಿನ ಪಂದ್ಯದಲ್ಲೂ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಕೊನೆಯ ಲೀಗ್​ ಪಂದ್ಯದದಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದ ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಮತ್ತು ಹಾರ್ದಿಕ್ ಪಾಂಡ್ಯ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಇತ್ತ ಟೂರ್ನಿಯಲ್ಲಿ 8 ಗೆಲುವು ಹಾಗೂ 6 ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದ ವಿಶ್ವಾಸದಲ್ಲಿದ್ದು, ಇಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡಕ್ಕೆ ಸೋಲುಣಿಸಲು ಸಜ್ಜಾಗಿದೆ. ಒಂದು ವೇಳೆ ಮುಂಬೈ ತಂಡವನ್ನು ಸೋಲಿಸಿದ್ದೇ ಆದೆ ಇದು ಡೆಲ್ಲಿ ತಂಡದ ಮೊದಲ ಐಪಿಎಲ್ ಫೈನಲ್ ಆಗಲಿದೆ.

ಐಪಿಎಲ್​ನಲ್ಲಿ ಎರಡು ತಂಡಗಳು 26 ಬಾರಿ ಮುಖಾ ಮುಖಿಯಾಗಿದ್ದು, ಮುಂಬೈ 14 ಪಂದ್ಯಗಳಲ್ಲಿ ಹಾಗೂ ಡೆಲ್ಲಿ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿ ಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಥನ್ ಕೌಲ್ಟರ್-ನೈಲ್, ರಾಹುಲ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.

ಡೆಲ್ಲಿ ಕ್ಯಾಪಿಟಲ್ಸ್​: ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೀ), ಮಾರ್ಕಸ್ ಸ್ಟೋಯ್ನಿಸ್, ಆಕ್ಸರ್ ಪಟೇಲ್, ಆರ್. ಅಶ್ವಿನ್, ಡೇನಿಯಲ್ ಸ್ಯಾಮ್ಸ್, ಕಗಿಸೊ ರಬಾಡ, ಎನ್ರಿಚ್ ನೋಕಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.