ಚೆನ್ನೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 2 ವಿಕೆಟ್ಗಳ ರೋಚಕ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ಇಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 2ನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.
ಮೊದಲ ಪಂದ್ಯದಲ್ಲಿ ಕ್ವಾರಂಟೈನ್ ಸಲುವಾಗಿ ಹೊರಗುಳಿದಿದ್ದ ಕ್ವಿಂಟನ್ ಡಿಕಾಕ್ ಭಾನುವಾರ ಮುಂಬೈ ಬಳಗ ಸೇರಿಕೊಂಡಿದ್ದರು. ಇದೀಗ ಕೆಕೆಆರ್ ವಿರುದ್ಧ ಕಣಕ್ಕಿಳಿಯಲಿದ್ದು, ಆರ್ಸಿಬಿ ವಿರುದ್ಧ ಮುಂಬೈನ ಗರಿಷ್ಠ ಸ್ಕೋರರ್ ಆಗಿದ್ದ ಕ್ರಿಸ್ ಲಿನ್ ಮತ್ತೆ ಬೆಂಚ್ ಕಾಯಬೇಕಾಗಿದೆ.
ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ನಾಯಕ ರೋಹಿತ್ ಶರ್ಮಾ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಡಿಕಾಕ್ ಕಣಕ್ಕಿಳಿಯುವುದನ್ನು ಈಗಾಗಲೇ ಮುಂಬೈ ತಂಡದ ನಿರ್ದೇಶಕ ಜಹೀರ್ ಖಾನ್ ಕೂಡ ಖಚಿತಪಡಿಸಿದ್ದಾರೆ.
ಆರ್ಸಿಬಿ ವಿರುದ್ಧ ವಿಫಲರಾಗಿದ್ದ ಮಧ್ಯಮ ಕ್ರಮಾಂಕದ ಪಾಂಡ್ಯ ಸಹೋದರರು ಮತ್ತು ಕೀರನ್ ಪೊಲಾರ್ಡ್ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದರೆ ಮುಂಬೈಗೆ ಗೆಲುವು ಆಸಾಧ್ಯವೇನಲ್ಲ. ಬೌಲಿಂಗ್ ಯುನಿಟ್ ಎಂದಿನಂತೆ ಪ್ರಬಲವಾಗಿದೆ. ಕೆಕೆಆರ್ ಮಣಿಸಿ ಚೊಚ್ಚಲ ಗೆಲುವು ಪಡೆಯಲು ಹಾತೊರೆಯುತ್ತಿದೆ. ಈ ಪಂದ್ಯದಲ್ಲಿ ಅನುಭವಿ ಪಿಯುಷ್ ಚಾವ್ಲಾ ಕಣಕ್ಕಿಳಿಯುವ ಸಾಧ್ಯತೆ ಕೂಡ ಹೆಚ್ಚಿದೆ.
-
Rested. Recharged. Ready for #KKRvMI 🔥#OneFamily #MumbaiIndians #MI #KhelTakaTak #IPL2021 pic.twitter.com/tnDtWNiCem
— Mumbai Indians (@mipaltan) April 12, 2021 " class="align-text-top noRightClick twitterSection" data="
">Rested. Recharged. Ready for #KKRvMI 🔥#OneFamily #MumbaiIndians #MI #KhelTakaTak #IPL2021 pic.twitter.com/tnDtWNiCem
— Mumbai Indians (@mipaltan) April 12, 2021Rested. Recharged. Ready for #KKRvMI 🔥#OneFamily #MumbaiIndians #MI #KhelTakaTak #IPL2021 pic.twitter.com/tnDtWNiCem
— Mumbai Indians (@mipaltan) April 12, 2021
ಇನ್ನು, ಮುಂಬೈ ತಂಡ ಐಪಿಎಲ್ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಆಡಿರುವ 27 ಪಂದ್ಯಗಳಲ್ಲಿ 21ರಲ್ಲಿ ಜಯ ಸಾಧಿಸಿದೆ. ಕೆಕೆಆರ್ ಕೇವಲ 6 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಹಾಗಾಗಿ, ಅಂಕಿ-ಅಂಶಗಳ ಪ್ರಕಾರ ಮುಂಬೈ ಗೆಲುವು ಪಡೆಯುವ ಸಾಧ್ಯತೆ ಹೆಚ್ಚಿದೆ.
ಇತ್ತ ಕೆಕೆಆರ್ ಮಧ್ಯಮ ಕ್ರಮಾಂಕದ ವೈಫಲ್ಯದ ಹೊರೆತಾಗಿಯೂ ಆರಂಭಿಕ ನಿತೀಶ್ ರಾಣಾ(80) ಮತ್ತು ರಾಹುಲ್ ತ್ರಿಪಾಠಿ ಬಲದಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 10 ರನ್ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
-
𝐁𝐀𝐂𝐊 𝐓𝐎 𝐖𝐎𝐑𝐊 👊🏼#KKRvMI #KKRHaiTaiyaar #IPL2021 pic.twitter.com/fJz9wZXE13
— KolkataKnightRiders (@KKRiders) April 13, 2021 " class="align-text-top noRightClick twitterSection" data="
">𝐁𝐀𝐂𝐊 𝐓𝐎 𝐖𝐎𝐑𝐊 👊🏼#KKRvMI #KKRHaiTaiyaar #IPL2021 pic.twitter.com/fJz9wZXE13
— KolkataKnightRiders (@KKRiders) April 13, 2021𝐁𝐀𝐂𝐊 𝐓𝐎 𝐖𝐎𝐑𝐊 👊🏼#KKRvMI #KKRHaiTaiyaar #IPL2021 pic.twitter.com/fJz9wZXE13
— KolkataKnightRiders (@KKRiders) April 13, 2021
ಕಳೆದ ಪಂದ್ಯದಲ್ಲಿ ಮುಂಬೈನಂತೆಯೇ ಕೆಕೆಆರ್ ತಂಡದ ಸ್ಟಾರ್ ಆಟಗಾರರಾದ ಮಾರ್ಗನ್, ರಸೆಲ್ ಹಾಗೂ ಗಿಲ್ ವಿಫಲರಾಗಿದ್ದರು. ಗೆಲುವಿನ ವಿಶ್ವಾಸದಲ್ಲಿರುವ ಮುನ್ನುಗ್ಗಿ ಜಯದ ಓಟವನ್ನು ಮುಂದುವರಿಸಲು ಮಾರ್ಗನ್ ಪಡೆ ಎದುರು ನೋಡುತ್ತಿದೆ.
ಇದನ್ನು ಓದಿ: ವಾಂಖೆಡೆಯಲ್ಲಿ ಬೌಂಡರಿ, ಸಿಕ್ಸರ್ಗಳ ಸುರಿಮಳೆ... ರಾಜಸ್ಥಾನದ ವಿರುದ್ಧ ಪಂಜಾಬ್ಗೆ 4 ರನ್ಗಳ ರೋಚಕ ಜಯ!