ETV Bharat / sports

RCB ಸೇರಿದ ಆಸ್ಟ್ರೇಲಿಯಾದ ಡೇನಿಯಲ್​ ಸ್ಯಾಮ್ಸ್​, ಹರ್ಷಲ್ ಪಟೇಲ್​ - ಹರ್ಷಲ್ ಪಟೇಲ್​

ಕಳೆದ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಇಂಗ್ಲೆಂಡ್​ನ ಜೇಸನ್ ರಾಯ್​ ಅವರ ಬದಲಿ ಆಟಗಾರನಾಗಿ ಡೇನಿಯಲ್ ಸ್ಯಾಮ್ಸ್​ರನ್ನು ನೇಮಕ ಮಾಡಿತ್ತು. ಆದರೆ, ಇಡೀ ಟೂರ್ನಿಯಲ್ಲಿ ಒಂದು ವಿಕೆಟ್ ಪಡೆಯಲು ವಿಫಲರಾದ ಕಾರಣ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ..

ಆರ್​ಸಿಬಿ ಸೇರಿದ ಡೇನಿಯಲ್ ಸ್ಯಾಮ್ಸ್​
ಆರ್​ಸಿಬಿ ಸೇರಿದ ಡೇನಿಯಲ್ ಸ್ಯಾಮ್ಸ್​
author img

By

Published : Jan 20, 2021, 8:32 PM IST

ಮುಂಬೈ : ಆಸ್ಟ್ರೇಲಿಯಾದ ಯುವ ಆಲ್​ರೌಂಡರ್​ ಡೇನಿಯಲ್ ಸ್ಯಾಮ್​ ಮತ್ತು ಹರ್ಷಲ್ ಪಟೇಲ್​ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕ್ಯಾಷ್ ಡೀಲ್ ಮೂಲಕ ಖರೀದಿಸಿದೆ.

ಆರ್​ಸಿಬಿ 12 ಆಟಗಾರರನ್ನು ಉಳಿಸಿಕೊಂಡು 10 ಆಟಗಾರರನ್ನು ಬಿಡುಗಡೆ ಮಾಡಿದೆ. ಮೋರಿಸ್​ರನ್ನು ರಿಲೀಸ್​ ಮಾಡಿರುವುದರಿಂದ ಆಲ್​ರೌಂಡರ್​ ಕೋಟಾಗೆ ಆಸ್ಟ್ರೇಲಿಯಾದ ಯುವ ಆಲ್​ರೌಂಡರ್​ ಡೇನಿಯಲ್ ಸ್ಯಾಮ್​ರನ್ನು ಆರ್​ಸಿಬಿ ಕ್ಯಾಷ್​ ಡೀಲ್ ಮೂಲಕ ಖರೀದಿಸಿದೆ.

ಕಳೆದ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಇಂಗ್ಲೆಂಡ್​ನ ಜೇಸನ್ ರಾಯ್​ ಅವರ ಬದಲಿ ಆಟಗಾರನಾಗಿ ಡೇನಿಯಲ್ ಸ್ಯಾಮ್ಸ್​ರನ್ನು ನೇಮಕ ಮಾಡಿತ್ತು. ಆದರೆ, ಇಡೀ ಟೂರ್ನಿಯಲ್ಲಿ ಒಂದು ವಿಕೆಟ್ ಪಡೆಯಲು ವಿಫಲರಾದ ಕಾರಣ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.

ಡೇನಿಯಲ್​ ಸ್ಯಾಮ್ಸ್​ ಪ್ರಸ್ತುತ ಬಿಬಿಎಲ್​ನಲ್ಲಿ 49ರ ಸರಾಸರಿಯಲ್ಲಿ 199 ರನ್​ ಗಳಿಸಿದ್ದಾರೆ. ಜೊತೆ 10 ವಿಕೆಟ್​ ಪಡೆದು ಉತ್ತಮ ಆಲ್​ರೌಂಡ್ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ ಆರ್​ಸಿಬಿಯಲ್ಲಿ ಆಸ್ಟ್ರೇಲಿಯಾದ ಕೇನ್ ರಿಚರ್ಡ್ಸನ್​ ಮತ್ತು ಜೋಶ್ ಫಿಲಿಪ್ಪೆ ಕೂಡ ರೀಟೈನ್​ ಆಗಿದ್ದಾರೆ.

ಆರ್​ಸಿಬಿ ಸ್ಯಾಮ್ಸ್​ ಜೊತೆಗೆ ಡೆಲ್ಲಿಯ ಆಲ್​ರೌಂಡರ್​ ಹರ್ಷಲ್ ಪಟೇಲ್​ರನ್ನು ಖರೀದಿಸಿದೆ. ಈ ಕಾರಣದಿಂದಲೇ ಆರ್​ಸಿಬಿ ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಕ್ರಿಸ್ ಮೋರಿಸ್​ರನ್ನು ರಿಲೀಸ್ ಮಾಡಿದೆ.

ಇದನ್ನು ಓದಿ:12 ಆಟಗಾರರನ್ನು ಉಳಿಸಿಕೊಂಡ ಆರ್​ಸಿಬಿ.. ಕೈಬಿಟ್ಟವರಿಷ್ಟು____

ETV Bharat Logo

Copyright © 2025 Ushodaya Enterprises Pvt. Ltd., All Rights Reserved.