ETV Bharat / sports

ಆರ್​ಸಿಬಿ ಬ್ಯಾಟಿಂಗ್​ ಸಲಹೆಗಾರನಾಗಿ ಸಂಜಯ್ ಬಂಗಾರ್​ ನೇಮಕ

author img

By

Published : Feb 10, 2021, 1:24 PM IST

ಬಂಗಾರ್ ಭಾರತ ರಾಷ್ಟ್ರೀಯ ತಂಡ ಹಾಗೂ ಐಪಿಎಲ್​ನಲ್ಲೂ ಕೆಲವು ತಂಡದಲ್ಲಿ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದು, ಅಪಾರ ಅನುಭವವನ್ನು ಹೊಂದಿದ್ದಾರೆ. ​ ಇದೀಗ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಲ್ಲಿರುವ ಬ್ಯಾಟಿಂಗ್ ಹಾಗೂ ಸ್ಪಿನ್​ ಬೌಲಿಂಗ್​ ಕೋಚ್​ ಶ್ರೀದರನ್​ ಶ್ರೀರಾಮ್ ಹಾಗೂ ಮುಖ್ಯ ಕೋಚ್​ ಸೈಮನ್ ಕ್ಯಾಟಿಚ್​ ಅವರ ಜೊತೆ ​2021ರ ಐಪಿಎಲ್​ನಲ್ಲಿ ಕೋಚಿಂಗ್ ಸಿಬ್ಬಂದಿಯಾಗಿ ಸೇರಿಕೊಳ್ಳಲಿದ್ದಾರೆ.

ಸಂಜಯ್ ಬಂಗಾರ್​
ಸಂಜಯ್ ಬಂಗಾರ್​

ಬೆಂಗಳೂರು: ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಟೀಮ್​ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್​ ಸಂಜಯ್ ಬಂಗಾರ್​ ಅವರನ್ನು 2021ರ ಐಪಿಎಲ್​ಗೂ ಮುನ್ನ ಬ್ಯಾಟಿಂಗ್​ ಸಲಹೆಗಾರನನ್ನಾಗಿ ನೇಮಕ ಮಾಡಿದೆ.

" ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ನೇತೃತ್ವದ ನಮ್ಮ ಕೋಚಿಂಗ್ ತಂಡಕ್ಕೆ ಸಂಜಯ್ ಬಂಗಾರ್ ಅಂತಹ ಅನುಭವವುಳ್ಳ ಕೋಚ್​ ಆಗಿರುವವರನ್ನು ಸೇರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ" ಎಂದು ಆರ್​ಸಿಬಿ ಟ್ವೀಟ್​ ಮೂಲಕ ಖಚಿತಪಡಿಸಿದೆ.

ತಂಡದಲ್ಲಿ ಬಂಗಾರ್ ಪಾತ್ರದ ಬಗ್ಗೆ ಮಾತನಾಡಿರುವ ಮೈಕ್ ಹೆಸನ್​, " 48 ವರ್ಷದ ಬಂಗಾರ್ ಐಪಿಎಲ್​ ಪೂರ್ವ ಶಿಬಿರಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಶಿಬಿರಗಳಲ್ಲಿ ಸಂಪೂರ್ಣ ತಂಡದ ಬ್ಯಾಟಿಂಗ್ ಸಲಹೆಗಾರನಾಗಿ ಬಂಗಾರ್ ತಂಡದೊಂದಿಗೆ ಕೆಲಸ ಮಾಡಲಿದ್ದಾರೆ" ಎಂದು ತಿಳಿಸಿದ್ದಾರೆ.

ಇದನ್ನು ಓದಿ:ಭಾರತದ ಪಿಚ್​ಗಳೆಂದರೆ ರೂಟ್​ಗೆ ಬಲು ಇಷ್ಟ: ರೆಕಾರ್ಡ್​ ಹೇಗಿದೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.