ETV Bharat / sports

ಚೆನ್ನೈನಲ್ಲಿ ಫೆ.18 ಅಥವಾ 19ಕ್ಕೆ ಐಪಿಎಲ್ ಮಿನಿ ಹರಾಜು - ಐಪಿಎಲ್ ಮಿನಿ ಹರಾಜು

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​ಗಾಗಿ ಫೆ. 18 ಅಥವಾ 19 ರಂದು ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

IPL Mini auction on February
ಐಪಿಎಲ್ ಮಿನಿ ಹರಾಜು
author img

By

Published : Jan 23, 2021, 6:51 AM IST

ನವದೆಹಲಿ: 2021 ರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಮುಂಚಿತವಾಗಿ ಫೆ.18 ಅಥವಾ 19 ರಂದು ಮಿನಿ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮೂಲಗಳು 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​ಗಾಗಿ ಫೆ. 18 ಅಥವಾ 19 ರಂದು ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಚೆನ್ನೈನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಫೆ.17 ಮುಕ್ತಾಯವಾಗಲಿದೆ. ಹೀಗಾಗಿ ಆ ದಿನಗಳನ್ನು ಆಯ್ಕೆ ಮಾಡಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುತ್ತದೆ' ಎಂದು ಹೇಳಿವೆ.

ಈ ಬಾರಿ ಭಾರತದಲ್ಲೇ ಟೂರ್ನಿ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 'ಟೂರ್ನಿಗೆ ಮೊದಲ ಆಯ್ಕೆ ಭಾರತವೇ ಆಗಿರುತ್ತದೆ. ಮುಷ್ತಾಕ್ ಅಲಿ ಟೂರ್ನಿ ಮುಕ್ತಾಯದ ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು ಸರ್ಕಾರದ ಅನುಮತಿ ಕೇಳಲಾಗುವುದು. ಕಳೆದ ಬಾರಿಯಂತೆ ಈ ಬಾರಿಯೂ ಯುಎಇ ನಮ್ಮ ಎರಡನೇ ಆಯ್ಕೆಯಾಗಿರುತ್ತದೆ' ಎಂದು ಮೂಲಗಳು ತಿಳಿಸಿವೆ.

ಕೊರೊನಾ ಸಾಂಕ್ರಾಮಿಕ ಭೀತಿಯ ನಡುವೆಯೂ 2020ರ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿಕೊಡುವಲ್ಲಿ ಬಿಸಿಸಿಐ ಸಫಲವಾಗಿದ್ದು. ಯುಎಇ ಅಲ್ಲಿ ಬಯೋ ಬಬಲ್ ವ್ಯವಸ್ಥೆಯಲ್ಲಿ ಟೂರ್ನಿ ನಡೆಸಿ ಯಶಸ್ವಿಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.