ನವದೆಹಲಿ : ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಚೆನ್ನೈನಲ್ಲಿ ತರಬೇತಿ ಶಿಬಿರ ಆರಂಭಿಸಿದೆ. 14ನೇ ಆವೃತ್ತಿಯ ಲೀಗ್ಗೆ ಕೇವಲ 2 ದಿನಗಳಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಇದೀಗ ಆಪತ್ಬಾಂಧವ ಕೀರನ್ ಪೊಲಾರ್ಡ್ 7 ದಿನಗಳ ಖಡ್ಡಾಯ ಕ್ವಾರಂಟೈನ್ ಮುಗಿಸಿದ್ದಾರೆ. ಇಂದಿನಿಂದ ತಂಡದ ಜೊತೆಗೆ ತರಬೇತಿ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ಮುಂಬೈ ಇಂಡಿಯನ್ಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ವಿಡಿಯೋ ಮತ್ತು ಫೋಟೊಗಳಲ್ಲಿ ಪೊಲಾರ್ಡ್ ಕಾಣದೆ ಇರುವುದು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
-
IPL 2021: MI all-rounder Kieron Pollard finishes 7-day quarantine, ready to train
— ANI Digital (@ani_digital) April 7, 2021 " class="align-text-top noRightClick twitterSection" data="
Read @ANI Story | https://t.co/9MoflYJHHT pic.twitter.com/1lPbkvYIV7
">IPL 2021: MI all-rounder Kieron Pollard finishes 7-day quarantine, ready to train
— ANI Digital (@ani_digital) April 7, 2021
Read @ANI Story | https://t.co/9MoflYJHHT pic.twitter.com/1lPbkvYIV7IPL 2021: MI all-rounder Kieron Pollard finishes 7-day quarantine, ready to train
— ANI Digital (@ani_digital) April 7, 2021
Read @ANI Story | https://t.co/9MoflYJHHT pic.twitter.com/1lPbkvYIV7
"ವೆಸ್ಟ್ ಇಂಡೀಸ್ನಿಂದ ಬಂದು ಚೆನ್ನೈನಲ್ಲಿ ಮುಂಬೈ ಯುನಿಟ್ ಸೇರಿದ್ದ ಪೊಲಾರ್ಡ್, ಬಿಸಿಸಿಐ ಫ್ರೋಟೋಕಾಲ್ಗಳ ಪ್ರಕಾರ 7 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಆದ್ದರಿಂದಲೇ ಮುಂಬೈ ಇಂಡಿಯನ್ಸ್ ತರಬೇತಿ ಶಿಬಿರಗಳಲ್ಲಿ ಕಾಣಿಸುತ್ತಿರಲಿಲ್ಲ" ಎಂದು ಫ್ರಾಂಚೈಸಿ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದೆ.
ಐಪಿಎಲ್ ಎಸ್ಒಪಿ ಭಾರತ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಪಾಲ್ಗೊಂಡಿದ್ದ ಆಟಗಾರರನ್ನು ಮಾತ್ರ ನೇರವಾಗಿ ಐಪಿಎಲ್ ಬಯೋಬಬಲ್ಗೆ ಸೇರುವ ಅವಕಾಶ ನೀಡಿತ್ತು. ಉಳಿದವರು ಖಡ್ಡಾಯ ಕ್ವಾರಂಟೈನ್ಗೆ ಒಳಗಾಗಬೇಕಿತ್ತು. ಪುಣೆ ಬಬಲ್ನಿಂದ ಹೊರ ಹೋಗಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಆರ್ಸಿಬಿ ಬಳಗ ಸೇರುವ ಮುನ್ನ 7 ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದರು.
ಬಿಸಿಸಿಐ ಐಪಿಎಲ್ನ ಯಶಸ್ವಿಯಾಗಿ ನೆರವೇರಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಆಟಗಾರರು, ಕುಟುಂಬಸ್ಥರು, ಸಿಬ್ಬಂದಿ ಬಬಲ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಇದನ್ನು ಓದಿ:ದೇವದತ್ ಪಡಿಕ್ಕಲ್ ಕೋವಿಡ್ ಟೆಸ್ಟ್ ಮತ್ತೆ ನೆಗೆಟಿವ್: ಆರ್ಸಿಬಿ ಸೇರಿದ ಯುವ ಓಪನರ್