ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಟೀಂ ಇಂಡಿಯಾ ಟೆಸ್ಟ್ ಪ್ಲೇಯರ್ ಚೇತೇಶ್ವರ್ ಪೂಜಾರಾ ಸೇಲ್ ಆಗಿದ್ದು, 50 ಲಕ್ಷ ರೂ. ಮೂಲ ಬೆಲೆ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ಖರೀದಿ ಮಾಡಿದೆ.
2014ರಲ್ಲಿ ಕಿಂಗ್ಸ್ ಇಲೆವೆಲ್ ಪಂಜಾಬ್ ತಂಡದ ಪರ ಟಿ-20 ಕ್ರಿಕೆಟ್ನಲ್ಲಿ ಭಾಗಿಯಾಗಿದ್ದ ಪೂಜಾರಾ ತದನಂತರ ಅನ್ಸೋಲ್ಡ್ ಆಗಿ ಉಳಿದುಕೊಂಡಿದ್ದರು. ಆದರೆ ಇದೀಗ ಬರೋಬ್ಬರಿ ಏಳು ವರ್ಷಗಳ ಬಳಿಕ ಅವರು ಐಪಿಎಲ್ನಲ್ಲಿ ಸೇಲ್ ಆಗಿದ್ದಾರೆ.
-
Thank you for showing the faith 🙏
— cheteshwar pujara (@cheteshwar1) February 18, 2021 " class="align-text-top noRightClick twitterSection" data="
Look forward! https://t.co/t7QlT6SGW1
">Thank you for showing the faith 🙏
— cheteshwar pujara (@cheteshwar1) February 18, 2021
Look forward! https://t.co/t7QlT6SGW1Thank you for showing the faith 🙏
— cheteshwar pujara (@cheteshwar1) February 18, 2021
Look forward! https://t.co/t7QlT6SGW1
ಓದಿ: ಐಪಿಎಲ್ನಲ್ಲಿ ಅರ್ಜುನ್ ತೆಂಡೂಲ್ಕರ್ ಸೇಲ್... ಇಷ್ಟೊಂದು ಹಣ ನೀಡಿ ಖರೀದಿ ಮಾಡಿದ ಫ್ರಾಂಚೈಸಿ!
30 ಐಪಿಎಲ್ ಪಂದ್ಯಗಳಿಂದ 390 ರನ್ ಗಳಿಸಿರುವ ಚೇತೇಶ್ವರ್ ಪೂಜಾರಾ, ಇದೀಗ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಬಳಗವನ್ನು ಸೇರಿಕೊಂಡಿದ್ದಾರೆ. ಇವರ ಖರೀದಿ ಮಾಡುತ್ತಿದ್ದಂತೆ ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಚಾಂಪಿಯನ್ ಚೆ ಬುಜಿ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಎಂದಿದೆ. ಸೌರಾಷ್ಟ್ರದ ಪೂಜಾರಾ ಇಲ್ಲಿಯವರೆಗೆ 83 ಟೆಸ್ಟ್ ಪಂದ್ಯಗಳಿಂದ 13,834 ರನ್ ಗಳಿಸಿದ್ದು, ಐದು ಏಕದಿನ ಪಂದ್ಯಗಳಿಂದ 130 ರನ್ ಗಳಿಸಿದ್ದಾರೆ. ಆದರೆ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಿಲ್ಲ. ಈ ಹಿಂದೆ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದಾರೆ.
ಇನ್ನು ಚೇತೇಶ್ವರ್ ಪೂಜಾರಾ ಖರೀದಿ ಮಾಡಿದ್ದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿಗೆ ಅಭಿಮಾನಿಗಳು ಧನ್ಯವಾದ ಅರ್ಪಿಸಿದ್ದಾರೆ. ಇದರ ಬೆನ್ನಲ್ಲೇ ಚೇತೇಶ್ವರ್ ಪೂಜಾರಾ ಕೂಡ ಟ್ವೀಟ್ ಮಾಡಿ ಚೆನ್ನೈ ಸೂಪರ್ ಕಿಂಗ್ಸ್ಗೆ ಧನ್ಯವಾದ ಹೇಳಿದ್ದು, ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು, ಮುಂದೆ ನೋಡಿ ಎಂದಿದ್ದಾರೆ.