ETV Bharat / sports

ಏಕದಿನ ಸರಣಿ ಮುಗಿಯುತ್ತಿದ್ದಂತೆ ತಮ್ಮ ತಮ್ಮ ಫ್ರಾಂಚೈಸಿ ಸೇರಿದ ಎರಡು ತಂಡದ ಆಟಗಾರರು - Mumbai Indians

ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್​ ಭಾರತೀಯ ಆಟಗಾರರಾದ ಶುಭಮನ್ ಗಿಲ್​ ಮತ್ತು ಪ್ರಸಿಧ್ ಕೃಷ್ಣರ ಜೊತೆಗೆ ಚೆನ್ನೈನಲ್ಲಿರುವ ಕೆಕೆಆರ್​ ತಂಡಕ್ಕೆ ಸೇರಿದ್ದಾರೆ. ಏಪ್ರಿಲ್​ 11ರಂದು ಸಿಎಸ್​ಕೆ ಮತ್ತು ಕೆಕೆಆರ್​ ಕಣಕ್ಕಿಳಿಯಲಿವೆ..

ಐಪಿಎಲ್​ 2021
ಐಪಿಎಲ್​ 2021
author img

By

Published : Mar 29, 2021, 7:38 PM IST

Updated : Mar 29, 2021, 7:52 PM IST

ಮುಂಬೈ : ಭಾರತದ ವಿರುದ್ಧ ಏಕದಿನ ಸರಣಿ ಮುಗಿಯುತ್ತಿದ್ದಂತೆ ಐಪಿಎಲ್​ ಒಪ್ಪಂದ ಹೊಂದಿರುವ ಇಂಗ್ಲೆಂಡ್ ಆಟಗಾರರು 14ನೇ ಐಪಿಎಲ್ ಸೀಸನ್‌​ಗಾಗಿ ತಮ್ಮ ಗೌರವಾನ್ವಿತ ಫ್ರಾಂಚೈಸಿಯನ್ನು ಸೋಮವಾರ ಸೇರಿಕೊಂಡಿದ್ದಾರೆ.

ಭಾನುವಾರ ಪುಣೆಯಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ 7 ರನ್​ಗಳ ರೋಚಕ ಸೋಲು ಕಂಡಿದ್ದ ಇಂಗ್ಲೆಂಡ್ ತಂಡ ಸರಣಿಯಲ್ಲಿ 2-1ರಲ್ಲಿ ಕಳೆದುಕೊಂಡಿತ್ತು. ಈ ಮೂಲಕ ಮೂರು ಮಾದರಿಯ ಸರಣಿಗಳಲ್ಲೂ ಸೋಲಿನ ಮುಖಭಂಗ ಅನುಭವಿಸಿದೆ. ಸರಣಿ ಸೋಲಿನ ಕಹಿ ಮರೆತು ಇದೀಗ ವಿಶ್ವದ ಶ್ರೀಮಂತ ಲೀಗ್​ನಲ್ಲಿ ಪಾಲ್ಗೊಳ್ಳಲು ಸೋಮವಾರ ತಮ್ಮ ತಂಡಗಳಿರುವ ಸ್ಥಳಗಳಿಗೆ ಸೇರಿದ್ದಾರೆ.

ಆಲ್​ರೌಂಡರ್​ಗಳಾದ ಸ್ಯಾಮ್ ಕರ್ರನ್ ಮತ್ತಯ ಮೊಯೀನ್ ಅಲಿ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಸೇರಿದ್ದಾರೆ. ಇದನನ್ನ ಸಿಎಸ್​ಕೆ ಟ್ವೀಟ್ ಮೂಲಕ ಖಚಿತಪಡಿಸಿದೆ.

ಇದನ್ನು ಓದಿ:ಭುವಿಯನ್ನು ಮ್ಯಾನ್​ ಆಫ್​ ಸಿರೀಸ್​ ಪ್ರಶಸ್ತಿಗಾಗಿ ಹೆಸರಿಸದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಮೈಕಲ್ ವಾನ್​

ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್​ ಭಾರತೀಯ ಆಟಗಾರರಾದ ಶುಭಮನ್ ಗಿಲ್​ ಮತ್ತು ಪ್ರಸಿಧ್ ಕೃಷ್ಣರ ಜೊತೆಗೆ ಚೆನ್ನೈನಲ್ಲಿರುವ ಕೆಕೆಆರ್​ ತಂಡಕ್ಕೆ ಸೇರಿದ್ದಾರೆ. ಏಪ್ರಿಲ್​ 11ರಂದು ಹೈದರಾಬಾದ್​ ಮತ್ತು ಕೆಕೆಆರ್ ತನ್ನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿವೆ.

ರಿಷಬ್ ಪಂತ್ ಜೊತೆಗೆ ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಸೇರಿರುವ ಸ್ಯಾಮ್ ಬಿಲ್ಲಿಂಗ್ಸ್​ ಮತ್ತು ಟಾಮ್ ಕರ್ರನ್​ ಮುಂಬೈಗೆ ಬಂದು ಸೇರಿದ್ದಾರೆ ಎಂದು ಡಿಸಿ ತನ್ನ ಟ್ವಿಟರ್​ನಲ್ಲಿ ತಿಳಿಸಿದೆ. ಮೂವರು ಏಕದಿನ ಸರಣಿಯ ಭಾಗವಾಗಿದ್ದರು.

ಉಳಿದಂತೆ ಸನ್​ರೈಸರ್ಸ್​ನ ಜಾನಿ ಬೈರ್​ಸ್ಟೋವ್ ಆರ್​ಸಿಬಿ ತಂಡದ ಯಜ್ವೇಂದ್ರ ಚಹಾಲ್​ ಜೊತೆಗೆ ಚೆನ್ನೈ ತಲುಪಿದ್ದಾರೆ. ಇಂಗ್ಲೆಂಡ್​ ಆಟಗಾರರಲ್ಲದೆ ಭಾರತದ ಕೆಲವು ಪ್ಲೇಯರ್‌ಗಳು ಕೂಡ ಅವರವರ ಫ್ರಾಂಚೈಸಿ ಬಯೋಬಬಲ್​ಗೆ ಬಂದು ಸೇರಿದ್ದಾರೆ.

Last Updated : Mar 29, 2021, 7:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.