ETV Bharat / sports

ಡಿ ವಿಲಿಯರ್ಸ್​​ 'ಆರ್​​ಸಿಬಿ'ಯ ಅತ್ಯಂತ ಪರಿಣಾಮಕಾರಿ ಆಟಗಾರ: ವಿರಾಟ್​ ಕೊಹ್ಲಿ! - ಇಂಡಿಯನ್​ ಪ್ರೀಮಿಯರ್​ ಲೀಗ್​​

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಆರ್​​ಸಿಬಿ ತಂಡದ ಅತ್ಯಂತ ಪರಿಣಾಮಕಾರಿ ಆಟಗಾರ ಎಬಿ ಡಿವಿಲಿಯರ್ಸ್​​ ಎಂದು ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಹೇಳಿದ್ದಾರೆ.

ABD
ABD
author img

By

Published : Oct 18, 2020, 9:12 AM IST

ದುಬೈ: ರಾಜಸ್ಥಾನ ರಾಯಲ್ಸ್​​ ನೀಡಿದ್ದ 178 ರನ್​​ಗಳ ಗುರಿ ಬೆನ್ನಟ್ಟಿದ್ದ ಆರ್​​ಸಿಬಿ ತಂಡಕ್ಕೆ ಆಸರೆಯಾಗಿದ್ದ ಡಿವಿಲಿಯರ್ಸ್​​ ಆರು ಸಿಕ್ಸರ್​ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್​​ಸಿಬಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮೆಚ್ಚುಗೆಯ ಮಾತು ವ್ಯಕ್ತಪಡಿಸಿದ್ದಾರೆ.

ಪಂದ್ಯ ಮುಕ್ತಾಯಗೊಂಡ ಬಳಿಕ ಮಾತನಾಡಿರುವ ಬೆಂಗಳೂರು ತಂಡದ ನಾಯಕ ವಿರಾಟ್​​ ಕೊಹ್ಲಿ, ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಆರ್​ಸಿಬಿ ತಂಡದ ಅತ್ಯಂತ ಪರಿಣಾಮಕಾರಿ ಆಟಗಾರ ಎಬಿಡಿ ಎಂದಿದ್ದಾರೆ.

IPL 2020
ಬ್ಯಾಟಿಂಗ್​ನಲ್ಲಿ ಆರ್​ಸಿಬಿ ಅಬ್ಬರ

ಎಬಿಡಿ ಯಾವಾಗಲು ಪರಿಸ್ಥಿತಿಗೆ ಅನುಗುಣವಾಗಿ ಆಟವಾಡುತ್ತಾರೆ. ಅವರು ಮೈದಾನದಲ್ಲಿ ಆಟಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಐಪಿಎಲ್​​ನಲ್ಲಿ ಹೆಚ್ಚು ಪ್ರಭಾವಶಾಲಿ ಆಟಗಾರ ಎಂದಿದ್ದಾರೆ. ಅವರು ಬ್ಯಾಟಿಂಗ್​ ಮಾಡಲು ಮೈದಾನಕ್ಕಿಳಿಯುತ್ತಿದ್ದಂತೆ ಎದುರಾಳಿ ತಂಡಗಳಲ್ಲಿ ನಡುಕ ಶುರುವಾಗುತ್ತದೆ. ಅವರು ಎಷ್ಟು ಎಸೆತ ಎದುರಿಸುತ್ತಾರೆ ಎಂಬುದು ಮುಖ್ಯವಲ್ಲ. ಟಾರ್ಗೆಟ್​ ಯಾವ ರೀತಿಯಾಗಿ ಮುಟ್ಟುತ್ತಾರೆ ಎಂಬುದು ಮುಖ್ಯ ಎಂದಿದ್ದಾರೆ.

ಈ ಟೂರ್ನಿಯಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದೇವೆ. ಅದಕ್ಕಾಗಿಯೇ 12 ಅಂಕ ಹೊಂದಿದ್ದೇವೆ. ತುಂಬಾ ಸಂತೊಷವಾಗಿದ್ದು, ಮುಂದಿನ ಮೂರು ದಿನಗಳ ಕಾಲ ನಮಗೆ ವಿಶ್ರಾಂತಿ ಸಿಗಲಿದೆ ಎಂದಿದ್ದಾರೆ.ದೇವದತ್​ ಪಡಿಕ್ಕಲ್​ ಉತ್ತಮವಾಗಿ ಬ್ಯಾಟಿಂಗ್​ ಮಾಡ್ತಿದ್ದು, ಫಿಂಚ್​ ಕೆಲವೊಂದು ಪ್ರಭಾವಿ ಇನ್ನಿಂಗ್ಸ್​ ಆಡಿದ್ದಾರೆ. ಈಗಾಗಲೇ ಯೋಜನೆ ಪ್ರಕಾರ ಎಲ್ಲವೂ ನಡೆಯುತ್ತಿದೆ ಎಂದಿದ್ದಾರೆ. ಕ್ರಿಸ್​ ಮೊರಿಸ್​​, ನವದೀಪ್​ ಸೈನಿ ವಾಷಿಂಗ್ಟನ್​ ಸುಂದರ್​ ಉದಾನ್​ ಬೌಲಿಂಗ್​ ಅದ್ಭುತವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.