ETV Bharat / sports

ಈ ಸಲದ IPL ದುಬೈನಲ್ಲಿ: ಖಾಸಗಿ ಸುದ್ದಿವಾಹಿನಿಗೆ ಬ್ರಿಜೇಶ್​ ಪಟೇಲ್​ ಮಾಹಿತಿ - ದುಬೈ

ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್ ಲೀಗ್​ ವಿದೇಶದಲ್ಲಿ ನಡೆಯುವುದು ಕೊನೆಗೂ ಖಚಿತಗೊಂಡಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ.

IPL 2020 to be played in the UAE
IPL 2020 to be played in the UAE
author img

By

Published : Jul 21, 2020, 10:44 PM IST

ನವದೆಹಲಿ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಯುವುದು ಬಹುತೇಕ ಖಚಿತಗೊಂಡಿದ್ದು, ಇದೇ ವಿಷಯವಾಗಿ ಐಪಿಎಲ್​​ ಮುಖ್ಯಸ್ಥ ಬ್ರಿಜೇಶ್​ ಪಟೇಲ್​ ಖಾಸಗಿ ಸುದ್ದಿವಾಹಿನಿವೊಂದಕ್ಕೆ ಮಹತ್ವದ ಮಾಹಿತಿ ನೀಡಿದ್ದಾರೆ.

ನವೆಂಬರ್​-ಡಿಸೆಂಬರ್​ ತಿಂಗಳಲ್ಲಿ ನಡೆಯಬೇಕಾಗಿದ್ದ ಟಿ-20 ವಿಶ್ವಕಪ್ ಟೂರ್ನಮೆಂಟ್​​​ ಮುಂದೂಡಿಕೆಯಾಗಿದ್ದು, ಹೀಗಾಗಿ ಇದೇ ತಿಂಗಳಲ್ಲಿ ವಿದೇಶದಲ್ಲಿ ಐಪಿಎಲ್​ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಅದರಂತೆ ದುಬೈನಲ್ಲಿ ಪ್ರಸಕ್ತ ಸಾಲಿನ ಐಪಿಎಲ್​ ನಡೆಸಲು ಈಗಾಗಲೇ ಬಹುತೇಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬ್ರಿಜೇಶ್​ ಪಟೇಲ್​ ತಿಳಿಸಿದ್ದಾರೆ.

ಪ್ರಸಕ್ತ ವರ್ಷದ ಐಪಿಎಲ್​ ಮಾರ್ಚ್​ 29ರಿಂದ ಆರಂಭಗೊಳ್ಳಬೇಕಾಗಿತ್ತು. ಆದರೆ ಕೊರೊನಾ ಕಾರಣ ಮುಂದೂಡಿಕೆ ಮಾಡಲಾಗಿತ್ತು. ಇಲ್ಲಿಯವರೆಗೆ ವೇಳಾಪಟ್ಟಿ ರಿಲೀಸ್​ ಆಗಿಲ್ಲ. ಆದರೆ ವಿದೇಶದಲ್ಲಿ ನಡೆಸಲು ಕೊನೆಯದಾಗಿ ನಿರ್ಧರಿಸಿ, ಅಂತಿಮ ನಿರ್ಧಾರ ಹೊರಹಾಕಲು ಕೇಂದ್ರ ಸರ್ಕಾರದ ಅನುಮತಿಗೋಸ್ಕರ ಕಾಯಲಾಗುತ್ತಿದೆ.

ಇದರ ಜತೆಗೆ ಬಿಸಿಸಿಐ 2020ರ ಐಪಿಎಲ್​ ಆವೃತ್ತಿ ನಡೆಸಲು ಕೇಂದ್ರ ಸರ್ಕಾರದ ಅನುಮತಿ ಕೇಳಿದ್ದು, ಅದಕ್ಕೆ ಗ್ರೀನ್​ ಸಿಗ್ನಲ್​ ಸಿಗುತ್ತಿದ್ದಂತೆ ವೇಳಾಪಟ್ಟಿ ರಿಲೀಸ್​ ಮಾಡುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.