ಅಬುಧಾಬಿ: ಟೂರ್ನಿಯಲ್ಲಿ ಮೊದಲ ಗೆಲುವನ್ನು ಎದುರು ನೋಡುತ್ತಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಆವೃತ್ತಿಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಟಾಸ್ ಗೆದ್ದ ತಂಡಒಂದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಸನ್ರೈಸರ್ಸ್ ಹೈದರಾಬಾದ್ ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 10 ರನ್ಗಳ ಸೋಲುಕಂಡಿತ್ತು. ಇತ್ತ ಕೆಕೆಆರ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡಿದೆ.
ಎರಡು ತಂಡಗಳು ಮೊದಲ ಗೆಲುವಿಗಾಗಿ ಎದುರು ನೋಡುತ್ತಿವೆ. ಅಂಕಿ ಅಂಶಗಳ ಪ್ರಕಾರ ಕೆಕೆಆರ್ ಸನ್ರೈಸರ್ಸ್ಗಿಂದ ಮುಂದಿದೆಯಾದರೂ ವಿಶ್ವಶ್ರೇಷ್ಠ ಬೌಲರ್ ಹಾಗೂ ಸ್ಫೋಟಕ ಬ್ಯಾಟಿಂಗ್ ಲೈನ್ಅಪ್ ಹೊಂದಿರುವ ಹೈದರಾಬಾದ್ ತಂಡವನ್ನು ಕಡೆಗಣಿಸುವಂತಿಲ್ಲ.
-
The @SunRisers have won the toss and they will bat first in Match 8 of #Dream11IPL.https://t.co/qt3p7Ucx5T #KKRvSRH pic.twitter.com/prqWo8lPuo
— IndianPremierLeague (@IPL) September 26, 2020 " class="align-text-top noRightClick twitterSection" data="
">The @SunRisers have won the toss and they will bat first in Match 8 of #Dream11IPL.https://t.co/qt3p7Ucx5T #KKRvSRH pic.twitter.com/prqWo8lPuo
— IndianPremierLeague (@IPL) September 26, 2020The @SunRisers have won the toss and they will bat first in Match 8 of #Dream11IPL.https://t.co/qt3p7Ucx5T #KKRvSRH pic.twitter.com/prqWo8lPuo
— IndianPremierLeague (@IPL) September 26, 2020
ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಸಂದೀಪ್ ವಾರಿಯರ್ ಬದಲು ಯುವ ಬೌಲರ್ ಕಮಲೇಶ್ ನಾಗರಕೋಟಿಯನ್ನು ಹಾಗೂ ನಿಖಿಲ್ ನಾಯಕ್ ಬದಲು ತಮಿಳು ನಾಡಿನ ಯುವ ಸ್ಪಿನ್ನರ್ ವರುಣ್ ಚಕ್ರವರ್ತಿ ಇಂದಿನ ಪಂದ್ಯದಲ್ಲಿ ಕೆಕೆಆರ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಪರ ಗಾಯಾಳು ಮಿಚೆಲ್ ಮಾರ್ಶ್ ಸ್ಥಾನಕ್ಕೆ ಮೊಹಮ್ಮದ್ ನಬಿ ಹಾಗೂ ವಿಜಯ ಶಂಕರ್ ಜಾಗಕ್ಕೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್: ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ವೃದ್ಧಿಮಾನ್ ಸಹಾ, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್. ಸಂದೀಪ್ ಶರ್ಮಾ
ಕೆಕೆಆರ್: ಸುನೀಲ್ ನರೈನ್, ಶುಬ್ಮನ್ ಗಿಲ್, ದಿನೇಶ್ ಕಾರ್ತಿಕ್ (ನಾಯಕ/ವಿ.ಕೀ), ನಿತೀಶ್ ರಾಣಾ, ಇಯಾನ್ ಮಾರ್ಗನ್, ಆಂಡ್ರೆ ರಸ್ಸೆಲ್, ವರುಣ್ ಚಕ್ರವರ್ತಿ, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್,ವರುಣ್ ಚಕ್ರವರ್ತಿ