ದುಬೈ: ಹೈದರಾಬಾದ್ ತಂಡ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ರನ್ನು ವಿಲಿಯಮ್ಸ್ಗಾಗಿ ತಂಡದಿಂದ ಹೊರಗಿಡುವ ಅನಿವಾರ್ಯತೆಗೊಳಗಾಗಿತ್ತು. ಆದರೆ ಅವರ ಜಾಗದಲ್ಲಿ ವಿಕೆಟ್ ಕೀಪರ್ ಅಗಿ ಅವಕಾಶ ಪಡೆದಿದ್ದ ವೃದ್ಧಿಮಾನ್ ಸಹಾ ಕ್ರಿಕೆಟ್ ಜಗತ್ತೇ ಅಚ್ಚರಿ ಪಡಿಸುವಂತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಮಧ್ಯಮ ಕ್ರಮಾಂಕವನ್ನು ಬಲಿಷ್ಟಗೊಳಿಸುವ ಒಂದೇ ನಿರ್ಧಾರದಿಂದ ಬೈರ್ಸ್ಟೋವ್ಗೆ ವಿಶ್ರಾಂತಿ ನೀಡಿ ವಿಲಿಯಮ್ಸನ್ಗೆ ಅವಕಾಶ ನೀಡಿದ್ದರಿಂದ ಇಂದು ವಾರ್ನರ್ ಜೊತೆ ಸಹಾ ಆರಂಭಿಕರಾಗಿ ಕಣಕ್ಕಿಳಿದಿದ್ದರು.
ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ವಾರ್ನರ್- ಸಹಾ ಜೋಡಿ ಮೊದಲ ವಿಕೆಟ್ಗೆ 106 ರನ್ಗಳ ಜೊತೆಯಾಟ ನೀಡಿದರು. ವಾರ್ನರ್ 34 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 66 ರನ್ಗಳಿಸಿದರೆ, ಸಹಾ 45 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 87 ರನ್ಗಳಿಸಿದರು.
ಟೂರ್ನಿಯಲ್ಲಿ ಆಡಿದ್ದ ಮೊದಲ ಪಂದ್ಯದಲ್ಲಿ 31 ಎಸೆತಗಳಲ್ಲಿ 30 ರನ್ಗಳಿಸಿ ಟೀಕೆಗೆ ಗುರಿಯಾಗಿದ್ದ ಸಹಾ, ಇಂದಿನ ಪಂದ್ಯದಲ್ಲಿ ನಿರೀಕ್ಷಗೂ ಮೀರಿದ ಪ್ರದರ್ಶನ ತೋರಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಂಡದಲ್ಲಿ ಕೇವಲ 4 ಮಂದಿ ವಿದೇಶಿಗರಿಗೆ ಮಾತ್ರ ಅವಕಾಶ ನೀಡಬೇಕಿರುವುದರಿಂದ ಬೈರ್ಸ್ಟೋವ್ ಮತ್ತು ವಿಲಿಯಮ್ಸನ್ರಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡುವ ಅನಿವಾರ್ಯತೆ ಇತ್ತು. ಕೊನೆಗೆ ವಾರ್ನರ್ ಮಧ್ಯಮಕ್ರಮಾಂಕ್ಕೆ ಆಧ್ಯತೆ ನೀಡಿದ ವಿಲಿಯಮ್ಸನ್ಗೆ ಅವಕಾಶ ನೀಡಿದ್ದರು. ಏಕೆಂದರೆ ರಶೀದ್, ಹೋಲ್ಡರ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ.