ETV Bharat / sports

ಘಟಾನುಘಟಿಗಳು ತಂಡ ಸೇರಿಕೊಂಡರೂ ಈ ಬಾರಿಯೂ ಶ್ರೇಯಸ್​ಗೆ ಒಲಿಯಿತು ನಾಯಕನ ಪಟ್ಟ - ಐಪಿಎಲ್​ ಟಿ20 2020

ಕಳೆದೆರಡು ಆವೃತ್ತಿಗಳಲ್ಲಿ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದ ಅಜಿಂಕ್ಯ ರಹಾನೆ ಹಾಗೂ ಕಿಂಗ್ಸ್​ ಇಲೆವನ್​ ಪಂಜಾಬ್​ ಮುನ್ನಡೆಸಿದ್ದ ಆರ್​ ಅಶ್ವಿನ್​ರನ್ನು ಡೆಲ್ಲಿ ಕ್ಯಾಪಿಟಲ್​ ​ಖರೀದಿಸಿತ್ತು. ಆದರೆ ಇವರಿಬ್ಬರಲ್ಲಿ ಯಾರಾದರೊಬ್ಬರನ್ನು ತಂಡದ ನಾಯಕರನ್ನಾಗಿ ಮಾಡಬಹುದು ಎನ್ನಲಾಗಿತ್ತು. ಅದ್ರೆ ಶ್ರೇಯಸ್​ ಅಯ್ಯರ್​ಗೆ ನಾಯಕನ ಸ್ಥಾನ ಒಲಿದಿದೆ.

Delhi Capitals
author img

By

Published : Nov 19, 2019, 12:46 PM IST

ನವದೆಹಲಿ: ಐಪಿಎಲ್​ 2020ರ ಹರಾಜಿಗೂ ಮುನ್ನ ಡೆಲ್ಲಿ ತಂಡ ಕೆಲ ಸೀನಿಯರ್​ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ತಂಡದ ನಾಯಕತ್ವ ಮಾತ್ರ ತಂಡದ ಯುವ ಆಟಗಾರ ಶ್ರೇಯಸ್​ ಅಯ್ಯರ್​ಗೆ ನೀಡಿದೆ.

ಕಳೆದೆರಡು ಆವೃತ್ತಿಗಳಲ್ಲಿ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದ ಅಜಿಂಕ್ಯ ರಹಾನೆ ಹಾಗೂ ಕಳದೆರಡು ಆವೃತ್ತಿಗಳಲ್ಲಿ ಕಿಂಗ್ಸ್​ ಇಲೆವನ್​ ಪಂಜಾಬ್​ ಮುನ್ನಡೆಸಿದ್ದ ಆರ್​ ಅಶ್ವಿನ್​ರನ್ನು ಡೆಲ್ಲಿ ಕ್ಯಾಪಿಟಲ್​ ​ಖರೀದಿಸಿತ್ತು. ಆದರೆ ಇವರಿಬ್ಬರಲ್ಲಿ ಯಾರಾದರೊಬ್ಬರನ್ನು ತಂಡದ ನಾಯಕರನ್ನಾಗಿ ಮಾಡಬಹುದು ಎನ್ನಲಾಗಿತ್ತು.

ಆದರೆ ಕಳೆದ ಬಾರಿ ಡೆಲ್ಲಿ ತಂಡವನ್ನು ಕ್ವಾಲಿಫೈಯರ್​ಗೆ ಕೊಂಡೊಯ್ದಿದ್ದ ಅಯ್ಯರ್​ ಅವರೇ ಈ ಬಾರಿಯೂ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಫ್ರಾಂಚೈಸಿ ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡುವ ಮೂಲಕ ಖಚಿತಪಡಿಸಿದೆ.

ಈ ವಿಡಿಯೋದಲ್ಲಿ ಶ್ರೇಯಸ್ ಅಯ್ಯರ್ ಮಾತನಾಡಿದ್ದು, ಹಿರಿಯ ಆಟಗಾರರು ತಂಡ ಸೇರಿಕೊಂಡಿದ್ದು, ಅವರೊಡನೆ ಆಡುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ಈ ಬಾರಿ ತಂಡವನ್ನು ಮುನ್ನಡೆಸುತ್ತಿದ್ದು, ಟ್ರೋಪಿ ಗೆಲ್ಲುವ ಗುರಿಯಿದ ಎಂದು ತಿಳಿಸಿದ್ದಾರೆ.

ಕಳೆದ ಬಾರಿ ಅಯ್ಯರ್​ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್​ 14 ಪಂದ್ಯಗಳಿಂದ 9 ಗೆಲುವು ಹಾಗೂ 5 ಸೋಲುಗಳಿಂದ 18 ಅಂಕ ಪಡೆದು 3ನೇ ಸ್ಥಾನಕ್ಕೇರಿತ್ತು. ಆದರೆ ಕ್ಲಾಲಿಫೈಯರ್​ 2 ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಎದುರು ಸೋಲುಕಂಡು ನಿರಾಶೆ ಅನುಭವಿಸಿತ್ತು.

ಈ ಬಾರಿ ತಂಡದಲ್ಲಿ ಅನುಭವಿ ಹಾಗೂ ಸ್ಫೋಟಕ ಆಟಗಾರರ ದಂಡನ್ನೇ ಹೊಂದಿದ್ದು, ಚೊಚ್ಚಲ ಟ್ರೋಫಿಯ ಕನಸು ಕಾಣುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.