ETV Bharat / sports

ರಾಜಸ್ಥಾನ-ಬೆಂಗಳೂರು ಫೈಟ್​​: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಸ್ಮಿತ್​ ಪಡೆ - ರಾಜಸ್ಥಾನ-ಬೆಂಗಳೂರು ಫೈಟ್​​

ಇಂಡಿಯನ್​ ಪ್ರೀಮಿಯರ್​ ಲೀಗ್​ನ 33ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್​ ಮುಖಾಮುಖಿಯಾಗುತ್ತಿದ್ದು, ಗೆಲುವಿನ ಉತ್ಸಾಹದೊಂದಿಗೆ ಉಭಯ ತಂಡಗಳು ಮೈದಾನಕ್ಕಿಳಿಯಲಿವೆ.

IPL 2020
IPL 2020
author img

By

Published : Oct 17, 2020, 3:21 PM IST

ದುಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಮುಖಾಮುಖಿಯಾಗುತ್ತಿದ್ದು, ಟಾಸ್​ ಗೆದ್ದ ಸ್ಟೀವ್​ ಸ್ಮಿತ್​ ಪಡೆ ಬ್ಯಾಟಿಂಗ್​​ ಆಯ್ದುಕೊಂಡಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಉಭಯ ತಂಡಗಳು ಈಗಾಗಲೇ 8 ಪಂದ್ಯಗಳಲ್ಲಿ ಆಡಿದ್ದು, ಬೆಂಳೂರು 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ 8ರಲ್ಲಿ 3 ಗೆದ್ದು 6 ಪಾಯಿಂಟ್​​ಗಳೊಂದಿಗೆ 7ನೇ ಸ್ಥಾನದಲ್ಲಿದೆ. ಪ್ಲೇ-ಆಫ್​ ಹಂತಕ್ಕೆ ಲಗ್ಗೆ ಹಾಕಬೇಕಾದರೆ ಆರ್​ಆರ್​ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿದೆ. ಇನ್ನು ಮುಂದಿನ ಹಾದಿ ಮತ್ತಷ್ಟು ಸುಲಭ ಮಾಡಿಕೊಳ್ಳಬೇಕಾದರೆ ಬೆಂಗಳೂರು ತಂಡ ಗೆಲ್ಲಬೇಕಾದ ಅನಿವಾರ್ಯತೆಯಲ್ಲಿದೆ. ಈ ಹಿಂದಿನ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದ ಕೊಹ್ಲಿ ಪಡೆ ಪಂಜಾಬ್​ ವಿರುದ್ಧ ರೋಚಕ ಸೋಲು ಕಂಡಿತ್ತು. ಇಂದಿನ ಪಂದ್ಯಕ್ಕಾಗಿ ಆರ್​ಸಿಬಿ ಎರಡು ಬದಲಾವಣೆ ಮಾಡಿದ್ದು, ಸಿರಾಜ್​ ಹಾಗೂ ದುಬೆ ಸ್ಥಾನದಲ್ಲಿ ಬೇರೆ ಆಟಗಾರರಿಗೆ ಮಣೆ ಹಾಕಿದೆ.

ಉಭಯ ತಂಡ ಇಂತಿವೆ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ಆರೋನ್​ ಫಿಂಚ್​​​​, ದೇವದತ್​ ಪಡಿಕ್ಕಲ್​, ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಎಬಿ ಡಿವಿಲಿಯರ್ಸ್​​(ವಿ.ಕೀ), ಗುರುಕಿರತ್​ ಸಿಂಗ್ ಮನನ್​, ವಾಷಿಂಗ್ಟನ್​ ಸುಂದರ್​​, ಕ್ರಿಸ್ ಮೊರಿಸ್​, ಅಹ್ಮದ್​, ಇರುಸ್​ ಉದಾನ್​, ನವದೀಪ್​ ಸೈನಿ,ಚಹಾಲ್.​

ರಾಜಸ್ಥಾನ ರಾಯಲ್ಸ್​​: ಬೆನ್​ ಸ್ಟೋಕ್ಸ್​, ಜೊಸ್​ ಬಟ್ಲರ್​​(ವಿ,ಕೀ), ಸ್ಮೀವ್​ ಸ್ಮಿತ್​(ಕ್ಯಾಪ್ಟನ್​), ಸಂಜು ಸ್ಯಾಮ್ಸನ್​, ರಾಬಿನ್​ ಉತ್ತಪ್ಪ, ಪರಾಗ್​, ರಾಹುಲ್​ ತೆವಾಟಿಯಾ, ಜೋಫ್ರಾ ಆರ್ಚರ್​​, ಶ್ರೇಯಸ್​ ಗೋಪಾಲ್​, ಜಯದೇವ್ ಉನ್ಕಾದತ್​, ಕಾರ್ತಿಕ್​ ತ್ಯಾಗಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.