ದುಬೈ: 13ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಬೆಂಗಳೂರು ತಂಡದ ನಾಯಕ ಕೊಹ್ಲಿ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಫೈನಲ್ ತಲುಪಿದರೂ ಪ್ರಶಸ್ತಿ ಎತ್ತಿ ಹಿಡಿಯಲು ವಿಫಲವಾಗಿರುವ ನತದೃಷ್ಟ ತಂಡಗಳಾಗಿರುವ ಈ ಎರಡು ತಂಡಗಳು ಮೊದಲ ಬಾರಿಗೆ ಲೀಗ್ನಲ್ಲಿ ಮುಖಾಮುಖಿಯಾಗುತ್ತಿವೆ.
ಇಂದಿನ ಪಂದ್ಯದಲ್ಲಿ ಪಂಜಾಬ್ ಪರ ನ್ಯೂಜಿಲ್ಯಾಂಡ್ನ ಆಲ್ರೌಂಡರ್ ಜಿಮ್ಮಿ ನಿಶಾಮ್ ಪಂಜಾಬ್ ತಂಡದ ಪರ ಪದಾರ್ಪಣೆ ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಕ್ರಿಸ್ ಜೋರ್ಡಾನ್ ತಂಡದಿಂದ ಹೊರಬಿದ್ದಿದ್ದಾರೆ. ಕೆ ಗೌತಮ್ ಸ್ಥಾನಕ್ಕೆ ಮುರುಗನ್ ಅಶ್ವಿನ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆರ್ಸಬಿ ಮೊದಲ ಪಂದ್ಯದಲ್ಲಿ ಆಡಿಸಿದ ತಂಡವನ್ನೇ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಸುತ್ತಿದೆ.
-
#RCB have won the toss and will bowl first in Match 6 of #Dream11IPL.#KXIPvRCB pic.twitter.com/pjq7tuZpDA
— IndianPremierLeague (@IPL) September 24, 2020 " class="align-text-top noRightClick twitterSection" data="
">#RCB have won the toss and will bowl first in Match 6 of #Dream11IPL.#KXIPvRCB pic.twitter.com/pjq7tuZpDA
— IndianPremierLeague (@IPL) September 24, 2020#RCB have won the toss and will bowl first in Match 6 of #Dream11IPL.#KXIPvRCB pic.twitter.com/pjq7tuZpDA
— IndianPremierLeague (@IPL) September 24, 2020
ಎರಡು ತಂಡಗಳು ಐಪಿಎಲ್ನಲ್ಲಿ 24 ಪಂದ್ಯಗಳಲ್ಲಿ ಎದುರುಬದುರಾಗಿದ್ದು, ಇತ್ತಂಡಗಳು ತಲಾ 12 ಬಾರಿ ಜಯ ಸಾಧಿಸಿವೆ.
ಆರ್ಸಿಬಿ ತಂಡ: ದೇವದತ್ ಪಡಿಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಜೋಶ್ ಫಿಲಿಪ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ಡೇಲ್ ಸ್ಟೈನ್, ಯಜುವೇಂದ್ರ ಚಹಾಲ್.
ಪಂಜಾಬ್ ತಂಡ: ಮಯಂಕ್, ಕೆಎಲ್ ರಾಹುಲ್ (ನಾಯಕ, ವಿ.ಕೀ.), ಕರುಣ್ ನಾಯರ್, ಪೂರನ್, ಮ್ಯಾಕ್ಸ್ ವೆಲ್, ಸರ್ಫರಾಜ್ ಖಾನ್, ಮುರುಗನ್ ಅಶ್ನಿನ್, ನೀಶಾಮ್, ಮೊಹಮ್ಮದ್ ಶಮಿ, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ