ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸಿಕ್ಸರ್ಗಳ ಸುರಿಮಳೆ ಸುರಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 200 ಸಿಕ್ಸರ್ ಸಿಡಿಸಿದ 4ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಅಬುಧಾಬಿಯಲ್ಲಿ ನಡೆಯುತ್ತಿರುವ 5ನೇ ಪಂದ್ಯದಲ್ಲಿ ರೋಹಿತ್ ಶರ್ಮಾ 6ನೇ ಸಿಕ್ಸರ್ ಸಿಡಿಸುತ್ತಿದ್ದಂತೆ ಈ ದಾಖಲೆಗೆ ಪಾತ್ರರಾಗಿದ್ದಾರೆ.
ಈಗಾಗಲೆ ಐಪಿಎಲ್ನಲ್ಲಿ ಕ್ರಿಸ್ ಗೇಲ್ 326, ಎಬಿ ಡಿ ವಿಲಿಯರ್ಸ್ 214, ಎಂಎಸ್ ಧೋನಿ 212 ಸಿಕ್ಸರ್ ಸಿಡಿಸುವ ಈ ಮೈಲಿಗಲ್ಲನ್ನು ತಲುಪಿದ್ದಾರೆ.
ರೋಹಿತ್ ಶರ್ಮಾ ಆರಂಭದಿಂದಲೇ ತಮ್ಮ ಆರ್ಭಟ ಶುರುಮಾಡಿದ್ದು, ಐಪಿಎಲ್ನಲ್ಲೇ ಅತ್ಯಂತ ಹೆಚ್ಚು ಬೆಲೆ ಪಡೆದ ಬೌಲರ್ ಆಗಿರುವ ಪ್ಯಾಟ್ ಕಮ್ಮಿನ್ಸ್ಗೂ ಕೂಡ ಸಿಕ್ಸರ್ಗಳ ರುಚಿ ತೋರಿಸಿದ್ದಾರೆ.
-
🚨 Milestone Alert
— IndianPremierLeague (@IPL) September 23, 2020 " class="align-text-top noRightClick twitterSection" data="
The HITMAN now has 200* SIXES in the IPL.@ImRo45 #Dream11IPL pic.twitter.com/aaM9XVYyD6
">🚨 Milestone Alert
— IndianPremierLeague (@IPL) September 23, 2020
The HITMAN now has 200* SIXES in the IPL.@ImRo45 #Dream11IPL pic.twitter.com/aaM9XVYyD6🚨 Milestone Alert
— IndianPremierLeague (@IPL) September 23, 2020
The HITMAN now has 200* SIXES in the IPL.@ImRo45 #Dream11IPL pic.twitter.com/aaM9XVYyD6
ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಟಾಪ್ 5 ಬ್ಯಾಟ್ಸ್ಮನ್
- ಕ್ರಿಸ್ ಗೇಲ್ -326
- ಎಬಿಡಿ ವಿಲಿಯರ್ಸ್-214
- ಎಂಎಸ್ ಧೋನಿ- 212
- ರೋಹಿತ್ ಶರ್ಮಾ-200
- ಸುರೇಶ್ ರೈನಾ - 194
- ವಿರಾಟ್ ಕೊಹ್ಲಿ- 190