ದುಬೈ: ಐಪಿಎಲ್ನ 24ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಆಡಿರುವ 5 ಪಂದ್ಯಗಳಲ್ಲಿ 2 ಸೋಲು ಹಾಗೂ 3 ಗೆಲುವು ಪಡೆದಿರುವ ಆರ್ಸಿಬಿ ತಂಡ ಇಂದಿನ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮೇಲಕ್ಕೇರುವ ದಾವಂತದಲ್ಲಿದೆ. ಇತ್ತ ಸಿಎಸ್ಕೆ ಆಡಿರುವ 6 ಪಂದ್ಯಗಳಲ್ಲಿ 4 ಸೋಲು ಹಾಗೂ ಕೇವಲ 2 ಗೆಲುವಿನೊಂದಿಗೆ 6ನೇ ಸ್ಥಾನದಲ್ಲಿದೆ.
ಇಂದಿನ ಪಂದ್ಯದಲ್ಲಿ ಚೆನ್ನೈ ತಂಡ ಕೇದಾರ್ ಜಾಧವ್ ಬದಲಿಗೆ ತಮಿಳುನಾಡಿನ ಎನ್ ಜಗದೀಶನ್ ಅವರಿಗೆ ಅವಕಾಶ ನೀಢಿದೆ. ಆರ್ಸಿಬಿಯಲ್ಲಿ ಕ್ರಿಸ್ ಮೋರಿಸ್ ಪದಾರ್ಪಣೆ ಮಾಡುತ್ತಿದ್ದಾರೆ. ಸಿರಾಜ್ ಬದಲಿಗೆ ಗುರುಕಿರಾತ್ ಮನ್ಗೆ ಅವಕಾಶ ನೀಡಿದೆ.
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡ ಇಲ್ಲಿಯವರೆಗೆ 24 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ, ಆರ್ಸಿಬಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.
-
#RCB have won the toss and they will bat first against #CSK in Dubai.#Dream11IPL pic.twitter.com/qZzmgx7aCa
— IndianPremierLeague (@IPL) October 10, 2020 " class="align-text-top noRightClick twitterSection" data="
">#RCB have won the toss and they will bat first against #CSK in Dubai.#Dream11IPL pic.twitter.com/qZzmgx7aCa
— IndianPremierLeague (@IPL) October 10, 2020#RCB have won the toss and they will bat first against #CSK in Dubai.#Dream11IPL pic.twitter.com/qZzmgx7aCa
— IndianPremierLeague (@IPL) October 10, 2020
ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂ.ಎಸ್.ಧೋನಿ (ನಾಯಕ, ವಿ.ಕೀ), ಸ್ಯಾಮ್ ಕರನ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಕರಣ್ ಶರ್ಮಾ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆ್ಯರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿ.ಕೀ), ಕ್ರಿಸ್ ಮೋರಿಸ್, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಇಸುರು ಉದಾನ, ಗುರ್ಕೀರತ್ ಸಿಂಗ್ ಮನ್, ನವದೀಪ್ ಸೈನಿ, ಯುಜವೇದ್ರ ಚಹಾಲ್