ಬೆಂಗಳೂರು : 2020ರ ಅಂಡರ್-19 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿದ್ದ ಕರ್ನಾಟಕದ ಯುವ ಆಲ್ರೌಂಡರ್ ಶುಭಾಂಗ್ ಹೆಗ್ಡೆ ಆರ್ಸಿಬಿಗೆ ನೆಟ್ ಬೌಲರ್ ಆಗಿ ದುಬೈಗೆ ಪ್ರಯಾಣಿಸಲಿದ್ದಾರೆ.
ಈ ವರ್ಷಾರಂಭದಲ್ಲಿ ಮುಗಿದ ಅಂಡರ್-19 ವಿಶ್ವಕಪ್ನಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಶುಭಾಂಗ್ ಹೆಗ್ಡೆ, ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲೂ ಉತ್ತಮ ಹೆಸರು ಮಾಡಿದ್ದಾರೆ. ಕೆಪಿಎಲ್ನ ಬಳ್ಳಾರಿ ಟಸ್ಕರ್ ಪರ ಆಡಿರುವ ಶುಭಾಂಗ್, ದ್ರಾವಿಡ್ ಗರಡಿಯಲ್ಲಿ ಪಳಗಿದ್ದಾರೆ. ಕೆಲ ಪಂದ್ಯಗಳಲ್ಲಿ ಭಾರತದ ಕಿರಿಯರ ತಂಡ ಮುನ್ನಡೆಸಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ 6 ಮಂದಿ ನೆಟ್ ಬೌಲರ್ಗಳಿದ್ದಾರೆ. ಈಗ ಮತ್ತೆ 5 ನೆಟ್ ಬೌಲರ್ಗಳನ್ನು ಬಳಸಿಕೊಳ್ಳಲು ಆರ್ಸಿಬಿ ನಿರ್ಧರಿಸಿದೆ. ಇದರಲ್ಲಿ ಕರ್ನಾಟಕ ಪ್ರತೀಕ್ ಜೈನ್ ಹಾಗೂ ಶುಭಾಂಗ್ ಹೆಗ್ಡೆ ಸೇರಿದ್ದಾರೆ. ಒಟ್ಟಾರೆ ಆರ್ಸಿಬಿ 11 ನೆಟ್ ಬೌಲರ್ಗಳನ್ನು ಹೊಂದಿದಂತಾಗಿದೆ. ಈಗಾಗಲೇ ಒಂದು ಗುಂಪು ಆಗಸ್ಟ್ನಲ್ಲೇ ದುಬೈಗೆ ತೆರಳಿದ್ರೇ, ಮತ್ತೊಂದು ಗುಂಪು ಸೆಪ್ಟಂಬರ್ 3ರಂದೇ ತೆರಳಿದೆ.
ಪ್ರತೀಕ್ ಜೈನ್ ಕಳೆದ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಶುಭಾಂಗ್ ಹೆಗ್ಡೆ ಒಂದು ಪ್ರಥಮ ದರ್ಜೆ ಹಾಗೂ 4 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ.
ಸೆಪ್ಟಂಬರ್-19ರಿಂದ ಐಪಿಎಲ್ ಮಹಾಸಮರ ಆರಂಭವಾಗಲಿದೆ. ಭಾನುವಾರ ಐಪಿಎಲ್ನ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಲಿದೆ. ಆರ್ಸಿಬಿ ಯಾವ ತಂಡವನ್ನು ತನ್ನ ಮೊದಲ ಪಂದ್ಯದಲ್ಲಿ ಎದುರಿಸಲಿದೆ ಎಂದು ನೋಡುವುದಕ್ಕೆ ಸಹಸ್ರಾರು ಅಭಿಮಾನಿಗಳು ಕಾಯುತ್ತಿದ್ದಾರೆ.