ಅಬುಧಾಬಿ: ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಸಿಡಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ಗಳ ಅಂತರದಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಗ್ಗುಬಡಿದಿದೆ.
ರಾಜಸ್ಥಾನ್ ರಾಯಲ್ಸ್ ನೀಡಿದ 155 ರನ್ಗಳ ಗುರಿಯನ್ನು ಬೆನ್ನೆಟ್ಟಿದ ಬೆಂಗಳೂರು ತಂಡ 19.1 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 158 ರನ್ಗಳಿಸಿ ವಿಜಯ ಸಾಧಿಸಿತು. ಅಲ್ಲದೇ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿತು.
ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮುಂದುವರಿಸಿದ ಯುವ ಬ್ಯಾಟ್ಸ್ಮನ್ ಪಡಿಕ್ಕಲ್ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 63 ರನ್ಗಳಿಸಿ ಔಟಾದರು. ಅವರು ಔಟಾಗುವ ಮುನ್ನ 2ನೇ ವಿಕೆಟ್ಗೆ ಕೊಹ್ಲಿ ಜೊತೆ 99 ರನ್ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾಗಿದ್ದರು.
-
That's that from Abu Dhabi as @RCBTweets win by 8 wickets to register their third win in #Dream11IPL 2020.#RCBvRR pic.twitter.com/CY2Col5a0y
— IndianPremierLeague (@IPL) October 3, 2020 " class="align-text-top noRightClick twitterSection" data="
">That's that from Abu Dhabi as @RCBTweets win by 8 wickets to register their third win in #Dream11IPL 2020.#RCBvRR pic.twitter.com/CY2Col5a0y
— IndianPremierLeague (@IPL) October 3, 2020That's that from Abu Dhabi as @RCBTweets win by 8 wickets to register their third win in #Dream11IPL 2020.#RCBvRR pic.twitter.com/CY2Col5a0y
— IndianPremierLeague (@IPL) October 3, 2020
ಪಡಿಕ್ಕಲ್ ಔಟಾದ ನಂತರ ಕೊಹ್ಲಿ, ಎಬಿಡಿ ಜೊತೆ ಸೇರಿ 3ನೇ ವಿಕೆಟ್ಗೆ ಮುರಿಯದ 38 ರನ್ಗಳ ಜೊತೆಯಾಡ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಫಾರ್ಮ್ ಕಂಡುಕೊಂಡ ಕೊಹ್ಲಿ 53 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 72 ರನ್ಗಳಿಸಿ ಔಟಾಗದೇ ಉಳಿದರು.
ರಾಜಸ್ಥಾನ್ ಪರ ಆರ್ಚರ್ ಹಾಗೂ ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಪಡೆದಿದ್ದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ರಾಜಸ್ಥಾನ್ ಯುವ ಬ್ಯಾಟ್ಸ್ಮನ್ ಲಾಮ್ರರ್ ಅವರ 47, ತೆವಾಟಿಯಾ 24, ಬಟ್ಲರ್ 22 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತ್ತು.
ಆರ್ಸಿಬಿ ಪರ ಚಹಾಲ್ 3 ವಿಕೆಟ್ ಪಡೆದರೆ, ಉದಾನ 2 ಹಾಗೂ ಸೈನಿ ಒಂದು ವಿಕೆಟ್ ಪಡೆದಿದ್ದರು.