ನವದೆಹಲಿ: ಕೊರೊನಾ ವೈರಸ್ ಮಹಾಮಾರಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೂ ಬಿದ್ದಿದೆ. ಅನೇಕ ಗೊಂದಲಗಳ ನಡುವೆ ಐಪಿಎಲ್ ಮುಂದೂಡಿಕೆ ಮಾಡಿ ಭಾರತೀಯ ಕ್ರಿಕೆಟ್ ಮಂಡಳಿ ಮಹತ್ವದ ಆದೇಶ ಹೊರಹಾಕಿದೆ.
-
🚨Announcement🚨: #VIVOIPL suspended till 15th April 2020 as a precautionary measure against the ongoing Novel Corona Virus (COVID-19) situation.
— IndianPremierLeague (@IPL) March 13, 2020 " class="align-text-top noRightClick twitterSection" data="
More details ➡️ https://t.co/hR0R2HTgGg pic.twitter.com/azpqMPYtoL
">🚨Announcement🚨: #VIVOIPL suspended till 15th April 2020 as a precautionary measure against the ongoing Novel Corona Virus (COVID-19) situation.
— IndianPremierLeague (@IPL) March 13, 2020
More details ➡️ https://t.co/hR0R2HTgGg pic.twitter.com/azpqMPYtoL🚨Announcement🚨: #VIVOIPL suspended till 15th April 2020 as a precautionary measure against the ongoing Novel Corona Virus (COVID-19) situation.
— IndianPremierLeague (@IPL) March 13, 2020
More details ➡️ https://t.co/hR0R2HTgGg pic.twitter.com/azpqMPYtoL
ಕೊರೋನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಐಪಿಎಲ್ ಟೂರ್ನಿ ಆಡಿಸುವಂತೆ ಕೇಂದ್ರ ವಿದೇಶಾಂಗ ಇಲಾಖೆ ಸಲಹೆ ನೀಡಿದ್ದು, ಅಂತಿಮ ನಿರ್ಧಾರ ಬಿಸಿಸಿಐನದ್ದೇ ಎಂದು ಹೇಳಿತ್ತು. ಆದರೆ ಇದೀಗ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದ್ದು, ಏಪ್ರಿಲ್ 15ರ ನಂತರ ಈ ಟೂರ್ನಿ ನಡೆಯುವ ಸಾಧ್ಯತೆ ಇದೆ. ಈಗಾಗಲೇ ದೆಹಲಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸದಿರುವ ಸಂಬಂಧ ಅಲ್ಲಿನ ಸರ್ಕಾರ ನಿರ್ಧಾರ ಕೈಗೊಂಡಿದೆ.
13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಇದೇ ತಿಂಗಳ ಮಾರ್ಚ್ 29ರಿಂದ ಆರಂಭಗೊಳ್ಳಬೇಕಾಗಿತ್ತು. ಉದ್ಘಾಟನಾ ಪಂದ್ಯ ಮುಂಬೈನ ವಾಖೆಂಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ನಡೆಯಬೇಕಿತ್ತು. ಆದರೆ ಇದೀಗ ಕೊರೊನಾ ಕರಿನೆರಳು ಅದರ ಮೇಲೆ ಬಿದ್ದಿರುವ ಕಾರಣ, ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಈಗಾಗಲೇ ಭಾರತ ಸರ್ಕಾರ ಏಪ್ರಿಲ್ 15ರವರೆಗೆ ವಿದೇಶಿ ವೀಸಾ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದ್ದು, ದೆಹಲಿ ಸರ್ಕಾರ ಕೂಡ ಐಪಿಎಲ್ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಮಹತ್ವದ ನಿರ್ಧಾರ ಹೊರಬಿದ್ದಿದೆ.