ETV Bharat / sports

ಡಿ.19ರಂದು ಐಪಿಎಲ್​ ಹರಾಜು.. ಕನ್ನಡಿಗ ಉತ್ತಪಗೆ ₹1.5 ಕೋಟಿ.. ಮತ್ಯಾರಿಗೆ ಎಷ್ಟೆಷ್ಟಿದೆ? - 13ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ದಿನಗಣನೆ

ಐಪಿಎಲ್​ 13ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್​ 19ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

IPL 2020 player auction list announced
ಅಂತಿಮ ಪಟ್ಟಿ
author img

By

Published : Dec 13, 2019, 8:00 PM IST

ಮುಂಬೈ: ಇಂಡಿಯನ್‌ ಪ್ರೀಮಿಯರ್​ ಲೀಗ್​​​ (ಐಪಿಎಲ್) 13ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ಈ ಪ್ರಕ್ರಿಯೆಯಲ್ಲಿ ಅಂತಿಮವಾಗಿ 332 ಆಟಗಾರರು ಮಾತ್ರ ಕಣದಲ್ಲಿದ್ದಾರೆ.

ಡಿಸೆಂಬರ್​ 19ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. 8 ಪ್ರಾಂಚೈಸಿಗಳಲ್ಲಿದ್ದ 997 ಆಟಗಾರ ಪಟ್ಟಿಯನ್ನು ಅಂತಿಮವಾಗಿ 332 ಮಂದಿಗೆ ಇಳಿಸಲಾಗಿದೆ.

IPL 2020 player auction list announced
ಅಂತಿಮ ಪಟ್ಟಿ

ಆಸ್ಟ್ರೇಲಿಯಾದ ಪ್ಯಾಟ್​ ಕುಮಿನ್ಸ್​, ಜೋಶ್​​​ ಹಜ್ಜಲ್​ವುಡ್, ಕ್ರಿಸ್​ಲಿನ್​, ಮಿಚೆಲ್​ ಮಾರ್ಚ್​, ಡೇಲ್​ಸ್ಟೈನ್​ ಮತ್ತು ಶ್ರೀಲಂಕಾದ ಆ್ಯಂಜಲೋ ಮ್ಯಾಥ್ಯೂಸ್​​ಗೆ ಮೂಲ ಬೆಲೆಯನ್ನು ₹2 ಕೋಟಿಗೆ ನಿಗದಿ ಮಾಡಲಾಗಿದೆ.

IPL 2020 player auction list announced
ಅಂತಿಮ ಪಟ್ಟಿ

ಕನ್ನಡಿಗ ರಾಬಿನ್​ ಉತ್ತಪ್ಪ ಸೇರಿ 10 ಮಂದಿ (9 ವಿದೇಶಿ ಆಟಗಾರರು) ₹1.5 ಕೋಟಿ ಮೂಲ ಬೆಲೆ ಹೊಂದಿದ್ದಾರೆ. ಭಾರತದ ಪಿಯೂಷ್​ ಚಾವ್ಲಾ, ಯೂಸುಫ್​ ಪಠಾಣ್, ಜಯದೇವ್​ ಉನಾದ್ಕತ್​ ಸೇರಿದಂತೆ 23 ಆಟಗಾರರಿಗೆ (20 ವಿದೇಶಿ ಆಟಗಾರರು) ಮೂಲ ಬೆಲೆ ₹1 ಕೋಟಿ ನಿಗದಿ ಪಡಿಸಲಾಗಿದೆ.

  • 75 ಲಕ್ಷ ಮೂಲ ಬೆಲೆ ಹೊಂದಿದ 16 ಆಟಗಾರರು
  • 50 ಲಕ್ಷ ಮೂಲ ಬೆಲೆ ನಿಗದಿಯಾದವರು 78 ಪ್ಲೇಯರ್ಸ್ (9 ಭಾರತದ ಆಟಗಾರರು)
  • 40 ಲಕ್ಷ ಮೂಲ ಬೆಲೆ ಹೊಂದಿದ 6 ಆಟಗಾರರು (ಒಬ್ಬ ಭಾರತೀಯ)
  • 30 ಲಕ್ಷ ಮೂಲ ಬೆಲೆ ನಿಗದಿಯಾದ 8 ಪ್ಲೇಯರ್ಸ್ (ಭಾರತದ ಆಟಗಾರರ ಸಂಖ್ಯೆ 5)
  • 20 ಲಕ್ಷ ಮೂಲ ಬೆಲೆ ಹೊಂದಿದ 183 ಆಟಗಾರರು (ಇದರಲ್ಲಿ 167 ಭಾರತದ ಆಟಗಾರರು)

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.