ಅಬುಧಾಬಿ: ಸೂರ್ಯಕುಮಾರ್ ಯಾದವ್(79) ಹಾಗೂ ಜಪ್ರೀತ್ ಬುಮ್ರಾ(4 ವಿಕೆಟ್) ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 57 ರನ್ಗಳ ಅಂತರದಿಂದ ರಾಜಸ್ಥಾನ್ ತಂಡವನ್ನು ಮಣಿಸಿ ಅಗ್ರಸ್ಥಾನಕ್ಕೇರಿದೆ.
ಅಬುಧಾಬಿಯ ಶೇಖ್ ಜಾಯೇದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಮುಂಬೈ ಇಂಡಿಯನ್ಸ್ ಸೂರ್ಯ ಕುಮಾರ್ ಯಾದವ್ 79(47 ಎಸೆತ), ಹಾರ್ದಿಕ್ ಪಾಂಡ್ಯ 30(19), ರೋಹಿತ್ 35(23) ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 193 ರನ್ಗಳಿಸಿತ್ತು.
294 ರನ್ಗಳ ಗುರಿ ಪಡೆದಿದ್ದ ರಾಜಸ್ಥಾನ್ ರಾಯಲ್ಸ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿ 18.1 ಓವರ್ಗಳಲ್ಲಿ 136 ರನ್ಗಳಿಗೆ ಆಲೌಟ್ ಆಯಿತು.
-
And, that's the match here in Abu Dhabi.
— IndianPremierLeague (@IPL) October 6, 2020 " class="align-text-top noRightClick twitterSection" data="
A comprehensive victory for @mipaltan as they win by 57 runs.#Dream11IPL #MIvRR pic.twitter.com/fOLF7GPswN
">And, that's the match here in Abu Dhabi.
— IndianPremierLeague (@IPL) October 6, 2020
A comprehensive victory for @mipaltan as they win by 57 runs.#Dream11IPL #MIvRR pic.twitter.com/fOLF7GPswNAnd, that's the match here in Abu Dhabi.
— IndianPremierLeague (@IPL) October 6, 2020
A comprehensive victory for @mipaltan as they win by 57 runs.#Dream11IPL #MIvRR pic.twitter.com/fOLF7GPswN
ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ 44 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 70 ರನ್ಗಳಿಸಿ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿ ವಿಫಲರಾದರು. ಇವರನ್ನು ಬಿಟ್ಟರೆ 11 ಎಸೆತಗಳಲ್ಲಿ 24 ರನ್ಗಳಿಸಿದ ಆರ್ಚರ್ ತಂಡದ ಗರಿಷ್ಠ ಸ್ಕೋರರ್ ಆದರು.
ತಂಡದ ಉಳಿದ ಬ್ಯಾಟ್ಸ್ಮನ್ಗಳ ದಯನೀಯ ವೈಫಲ್ಯದಿಂದ ರಾಜಸ್ಥಾನ್ ರಾಯಲ್ಸ್ ತಂಡ ಹೀನಾಯ ಸೋಲು ಕಂಡಿತು.
-
Give us a thumbs-up if you've got a 4-wkt haul 😊😊#Dream11IPL pic.twitter.com/ZqwOHm0ESK
— IndianPremierLeague (@IPL) October 6, 2020 " class="align-text-top noRightClick twitterSection" data="
">Give us a thumbs-up if you've got a 4-wkt haul 😊😊#Dream11IPL pic.twitter.com/ZqwOHm0ESK
— IndianPremierLeague (@IPL) October 6, 2020Give us a thumbs-up if you've got a 4-wkt haul 😊😊#Dream11IPL pic.twitter.com/ZqwOHm0ESK
— IndianPremierLeague (@IPL) October 6, 2020
ನಾಯಕ ಸ್ಟಿವ್ ಸ್ಮಿತ್ 6, ಯಶಸ್ವಿ ಜೈಸ್ವಾಲ್ 0 , ಸಂಜು ಸಾಮ್ಸನ್ 0, ಲ್ಯಾಮ್ರೊರ್ 11, ಟಾಮ್ ಕರ್ರನ್ 15, ರಾಹುಲ್ ತೆವಾಟಿಯಾ 5 ಶ್ರೇಯಸ್ ಗೋಪಾಲ್ 1, ಅಂಕಿತ್ ರಜಪೂತ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ 20 ರನ್ಗಳಿಗೆ 4 ವಿಕೆಟ್, ಟ್ರೆಂಟ್ ಬೌಲ್ಟ್ 26ಕ್ಕೆ 2 ವಿಕೆಟ್, ಜೇಮ್ಸ್ ಪ್ಯಾಟಿನ್ಸನ್ 18 ರನ್ಗಳಿಗೆ 2 ವಿಕೆಟ್, ಚಹಾರ್ ಮತ್ತು ಪೊಲಾರ್ಡ್ ತಲಾ ಒಂದು ವಿಕೆಟ್ ಪಡೆದು ರಾಜಸ್ಥಾನ್ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.
79 ರನ್ಗಳಿಸಿದ ಸೂರ್ಯಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.