ಅಬುಧಾಬಿ: ರೋಹಿತ್ ಶರ್ಮಾರ ಸ್ಫೋಟಕ ಅರ್ಧಶತಕ ಹಾಗೂ ಬೌಲರ್ಗಳ ಸಂಘಟಿತ ಪ್ರದರ್ಶನದ ಬಲದಿಂದ ಮುಂಬೈ ಇಂಡಿಯನ್ಸ್ 49 ರನ್ಗಳಿಂದ ಕೋಲ್ಕತ್ತಾ ನೈಟ್ರೈಡರ್ಸ್ ವಿರುದ್ಧ ಜಯಗಳಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಮುಂಬೈ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾರ 80 ರನ್ ಹಾಗೂ ಸೂರ್ಯಕುಮಾರ್ರ 47 ರನ್ಗಳ ನೆರವಿನಿಂದ 5 ವಿಕೆಟ್ ಕಳೆದುಕೊಂಡು 195 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 146 ರನ್ಗಳಿಸಿ 49 ರನ್ಗಳ ಸೋಲು ಕಂಡಿತು.
ಆರಂಭದಿಂದಲೇ ಮುಂಬೈ ಬೌಲರ್ಗಳು ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್ಮನ್ಗಳ ಮೇಲುಗೈ ಸಾಧಿಸಿದರು. ಆರಂಭಿಕನಾಗಿ ಬಡ್ತಿ ಪಡೆದಿದ್ದ ಶುಬ್ಮನ್ ಗಿಲ್ 11 ಎಸೆತಗಳಲ್ಲಿ ಕೇವಲ 7 ರನ್ಗಳಿಸಿ ಬೌಲ್ಟ್ ಓವರ್ನಲ್ಲಿ ಪೊಲಾರ್ಡ್ಗೆ ಕ್ಯಾಚ್ ನೀಡಿ ಔಟಾದರೆ, ನರೈನ್ 10 ಎಸೆತಗಳಲ್ಲಿ 9 ರನ್ಗಳಿಸಿ ಪ್ಯಾಟಿನ್ಸನ್ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ನಾಯಕ ದಿನೇಶ್ ಕಾರ್ತಿಕ್(30) ಹಾಗೂ ನಿತೀಶ್ ರಾಣಾ(24) 3ನೇ ವಿಕೆಟ್ಗೆ 46 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಲು ಪ್ರಯತ್ನಿಸಿದರು. ಆದರೆ ದಿನೇಶ್ ಕಾರ್ತಿಕ್ರನ್ನು ರಾಹುಲ್ ಚಹಾರ್ ಎಲ್ಬಿಡಬ್ಲಯೂ ಬಲೆಗೆ ಬೀಳಿಸಿದರು. ಮುಂದಿನ ಓವರ್ನಲ್ಲೇ ಪೊಲಾರ್ಡ್ ಓವರ್ನಲ್ಲಿ ರಾಣಾ ಕೂಡ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿ ಔಟಾದರು.
-
That's that from Match 5 as the Mumbai Indians win by 49 runs.
— IndianPremierLeague (@IPL) September 23, 2020 " class="align-text-top noRightClick twitterSection" data="
Scorecard - https://t.co/xDQdI54h5N #KKRvMI pic.twitter.com/j58dPCYVQl
">That's that from Match 5 as the Mumbai Indians win by 49 runs.
— IndianPremierLeague (@IPL) September 23, 2020
Scorecard - https://t.co/xDQdI54h5N #KKRvMI pic.twitter.com/j58dPCYVQlThat's that from Match 5 as the Mumbai Indians win by 49 runs.
— IndianPremierLeague (@IPL) September 23, 2020
Scorecard - https://t.co/xDQdI54h5N #KKRvMI pic.twitter.com/j58dPCYVQl
ಕೆಕೆಆರ್ನ ಬರವಸೆಯ ಬ್ಯಾಟ್ಸ್ಮನ್ಗಳಾ ಮಾರ್ಗನ್ ಹಾಗೂ ಆ್ಯಂಡ್ರೆ ರಸೆಲ್ ಕೂಡ ಮುಂಬೈ ಬೌಲರ್ಗಳ ಮುಂದೆ ಮಂಕಾದರು. ಮಾರ್ಗನ್ 20 ಎಸೆತಗಳಲ್ಲಿ 16 ಹಾಗೂ ರಸೆಲ್ 11 ಎಸೆತಗಳಲ್ಲಿ 11 ರನ್ಗಳಿಸಿ ಬುಮ್ರಾರ ಒಂದೇ ಓವರ್ನಲ್ಲಿ ಪೆವಿಲಿಯನ್ಸ್ ಸೇರಿಕೊಂಡರು.
8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಪ್ಯಾಟ್ ಕಮ್ಮಿನ್ಸ್ ಸೋಲುವುದು ಖಚಿತವಾಗಿದ್ದರೂ, ಶ್ರೇಷ್ಠ ವೇಗಿ ಬುಮ್ರಾರ ಒಂದೇ ಓವರ್ನಲ್ಲಿ 4 ಸಿಕ್ಸರ್ ಸಿಡಿಸಿ ಮಂಕಾಗಿದ್ದ ಪಂದ್ಯಕ್ಕೆ ಚೈತ್ಯ ನೀಡಿದರು. ಅವರು 12 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 33 ರನ್ಗಳಿಸಿ ಔಟಾದರು. ಒಟ್ಟಾರೆ 20 ಓವರ್ಗಳಲ್ಲಿ ಕೋಲ್ಕತ್ತಾ ತಂಡ 146 ರನ್ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
-
A look at the Points Table after Match 5 of #Dream11IPL 2020. pic.twitter.com/zJjwGqErxE
— IndianPremierLeague (@IPL) September 23, 2020 " class="align-text-top noRightClick twitterSection" data="
">A look at the Points Table after Match 5 of #Dream11IPL 2020. pic.twitter.com/zJjwGqErxE
— IndianPremierLeague (@IPL) September 23, 2020A look at the Points Table after Match 5 of #Dream11IPL 2020. pic.twitter.com/zJjwGqErxE
— IndianPremierLeague (@IPL) September 23, 2020
ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ 30/ 2, ಜೇಮ್ಸ್ ಪ್ಯಾಟಿನ್ಸನ್ 25/2, ಬುಮ್ರಾ 32/2, ರಾಹುಲ್ ಚಹಾರ್ 26ಕ್ಕೆ2. ಹಾಗೂ ಪೊಲಾರ್ಡ್ 21 ರನ್ ನೀಡಿ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮೊದಲು ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ರೋಹಿತ್ ಶರ್ಮಾ 54 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 3 ಬೌಂಡರಿ ಸಹಿತ 80 ರನ್, ಹಾಗೂ ಸೂರ್ಯಕುಮಾರ್ ಯಾದವ್ 28 ಎಸೆತಗಳಿಂದ 47 ರನ್ಗಳಿಸಿ 195 ರನ್ಗಳಿಸಲು ನೆರವಾಗಿದ್ದರು.