ಅಬುಧಾಬಿ: ರೋಹಿತ್, ಪೊಲಾರ್ಡ್ ಬ್ಯಾಟಿಂಗ್ ವೈಭವ ಹಾಗೂ ಬೌಲರ್ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 48 ರನ್ಗಳ ಅಂತರದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿದೆ.
ರೋಹಿತ್ ಶರ್ಮಾ ಅರ್ಧಶತಕ 70 (45 ಎಸೆತ), ಪೊಲಾರ್ಡ್ 47(27 ಎಸೆತ), ಹಾರ್ದಿಕ್ ಪಾಂಡ್ಯ 30(11 ಎಸೆತ) ರನ್ಗಳ ನೆರವಿನಿಂದ ಮುಂಬೈ ತಂಡ 20 ಓವರ್ಗಳಲ್ಲಿ 191 ರನ್ಗಳಿಸಿತ್ತು.
ಪಂಜಾಬ್ ಪರ ಕಾಟ್ರೆಲ್ 20ಕ್ಕೆ 1, ಶಮಿ 36ಕ್ಕೆ 2 ಹಾಗೂ ಗೌತಮ್ 45ಕ್ಕೆ 1 ವಿಕೆಟ್ ಪಡೆದಿದ್ದರು.
-
Another victory in the bag for @mipaltan as they beat #KXIP by 48 runs in Match 13 of #Dream11IPL.#KXIPvMI pic.twitter.com/PXN2K3cy2O
— IndianPremierLeague (@IPL) October 1, 2020 " class="align-text-top noRightClick twitterSection" data="
">Another victory in the bag for @mipaltan as they beat #KXIP by 48 runs in Match 13 of #Dream11IPL.#KXIPvMI pic.twitter.com/PXN2K3cy2O
— IndianPremierLeague (@IPL) October 1, 2020Another victory in the bag for @mipaltan as they beat #KXIP by 48 runs in Match 13 of #Dream11IPL.#KXIPvMI pic.twitter.com/PXN2K3cy2O
— IndianPremierLeague (@IPL) October 1, 2020
192 ರನ್ಗಳ ಗುರಿ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಉತ್ತಮ ಆರಂಭ ಪಡೆಯಿತಾದರೂ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ 25 ರನ್ಗಳಿಸಿ ಬುಮ್ರಾ ಓವರ್ನಲ್ಲಿ ಬೌಲ್ಡ್ ಆದರು. ನಂತರ ಬಂದ ಕರುಣ್ ನಾಯರ್ ಡಕ್ ಔಟ್ ಆಗುವ ಮೂಲಕ ನಿರಾಶೆ ಮೂಡಿಸಿದರು. ಇವರ ಬೆನ್ನಲ್ಲೇ ಚಹಾರ್ ಸ್ಪಿನ್ ಮೋಡಿಗೆ ರಾಹುಲ್ ಕೂಡ ಬೌಲ್ಡ್ ಆದರು.
ಈ ಸಂದರ್ಭದಲ್ಲಿ ಮ್ಯಾಕ್ಸ್ವೆಲ್ ಹಾಗೂ ಪೂರನ್ 41 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಲು ಪ್ರಯತ್ನಿಸಿದರಾದರೂ, ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಪೂರನ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಅವರು 27 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 44 ರನ್ಗಳಿಸಿದರು.
ಪೂರನ್ ಔಟಾಗುತ್ತಿದ್ದಂತೆ ಪಂಜಾಬ್ ಮತ್ತೊಮ್ಮೆ ಪೆವಿಲಿಯನ್ ಪರೇಡ್ ನಡೆಸಿತು. ಮ್ಯಾಕ್ಸ್ವೆಲ್ 11 ರನ್, ನಿಶಾಮ್ 7, ಸರ್ಫರಾಜ್ ಖಾನ್ 7 ಹಾಗೂ ರವಿ ಬಿಷ್ಣೋಯ್ 1 ರನ್ಗಳಿಸಿ ಔಟಾದರು. ಕೆ ಗೌತಮ್ 22 ಎಸೆತಗಳಲ್ಲಿ 22 ರನ್ಗಳಿಸಿ ಔಟಾಗದೆ ಉಳಿದರು. ಒಟ್ಟಾರೆ ಪಂಜಾಬ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ 18ಕ್ಕೆ 2, ರಾಹುಲ್ ಚಹಾರ್ 26ಕ್ಕೆ 2, ಜೇಮ್ಸ್ ಪ್ಯಾಟಿನ್ಸನ್ 2ಕ್ಕೆ2, ಕೃನಾಲ್ ಪಾಂಡ್ಯ 27ಕ್ಕೆ 1 ಹಾಗೂ ಬೌಲ್ಟ್ 42 ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. 20 ಎಸೆತಗಳಲ್ಲಿ 47 ರನ್ ಸಿಡಿಸಿದ ಪೊಲಾರ್ಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.