ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದಿರುವ ಡೇವಿಡ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.
ಅತಿ ಹೆಚ್ಚು ಐಪಿಎಲ್ ಪಂದ್ಯ ಆಡಿದ ದಾಖಲೆ ಬರೆದ ಧೋನಿ
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಇದು 194ನೇ ಪಂದ್ಯವಾಗಿದ್ದು, ಈ ಮೂಲಕ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಪ್ಲೇಯರ್ ಎಂಬ ದಾಖಲೆಗೆ ಭಾಜನರಾಗಿದ್ದಾರೆ.
-
MS Dhoni today becomes the most capped player (194) in the history of IPL.#Dream11IPL pic.twitter.com/PwpDFcEA2E
— IndianPremierLeague (@IPL) October 2, 2020 " class="align-text-top noRightClick twitterSection" data="
">MS Dhoni today becomes the most capped player (194) in the history of IPL.#Dream11IPL pic.twitter.com/PwpDFcEA2E
— IndianPremierLeague (@IPL) October 2, 2020MS Dhoni today becomes the most capped player (194) in the history of IPL.#Dream11IPL pic.twitter.com/PwpDFcEA2E
— IndianPremierLeague (@IPL) October 2, 2020
ಸತತ ಸೋಲಿನಿಂದ ಕಂಗೆಟ್ಟಿದ್ದ ಹೈದರಾಬಾದ್ ತಂಡ ಡೆಲ್ಲಿ ವಿರುದ್ಧದ ಹಿಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ ಕಮ್ಬ್ಯಾಕ್ ಮಾಡಿಕೊಂಡಿದೆ. ಆದರೆ, ಚೆನ್ನೈ ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಗೆಲುವು ದಾಖಲು ಮಾಡಿದ್ದು, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನು ಸನ್ರೈಸರ್ಸ್ ತಂಡ ಯಾವುದೇ ಬದಲಾವಣೆ ಮಾಡದೇ ಕಣಕ್ಕಿಳಿಯುತ್ತಿದ್ದು, ಚೆನ್ನೈ ತಂಡಕ್ಕೆ ರಾಯುಡು ಕಮ್ಬ್ಯಾಕ್ ಮಾಡಿದ್ದಾರೆ.
-
David Warner wins the toss and elects to bat first against #CSK in Match 14 of #Dream11IPL.#CSKvSRH pic.twitter.com/s0NeQCRJ37
— IndianPremierLeague (@IPL) October 2, 2020 " class="align-text-top noRightClick twitterSection" data="
">David Warner wins the toss and elects to bat first against #CSK in Match 14 of #Dream11IPL.#CSKvSRH pic.twitter.com/s0NeQCRJ37
— IndianPremierLeague (@IPL) October 2, 2020David Warner wins the toss and elects to bat first against #CSK in Match 14 of #Dream11IPL.#CSKvSRH pic.twitter.com/s0NeQCRJ37
— IndianPremierLeague (@IPL) October 2, 2020
ಉಭಯ ತಂಡಗಳು ಇಂತಿವೆ
ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಫಾಫು ಡುಪ್ಲೆಸಿ,ಕೇದಾರ್ ಜಾಧವ್, ಎಂಎಸ್ ಧೋನಿ( ನಾಯಕ/ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ಪಿಯೂಷ್ ಚಾವ್ಲಾ,ದೀಪಕ್ ಚಹಾರ್
ಸನ್ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್(ಕ್ಯಾಪ್ಟನ್), ಬೈರ್ಸ್ಟ್ರೋವ್(ವಿ.ಕೀ), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಅಭೀಷೇಕ್ ಶರ್ಮಾ, ಪ್ರಿಯಂ ಗರ್ಗ್, ರಾಶೀದ್ ಖಾನ್, ಭುವನೇಶ್ವರ್ ಕುಮಾರ್, ಅಖೀಲ್ ಅಹಮದ್, ಟಿ. ನಟರಾಜನ್