ಶಾರ್ಜಾ: ನಾಯಕ ವಿರಾಟ್ ಕೊಹ್ಲಿ ಹಾಗೂ ಕೊನೆಯ ಓವರ್ಗಳಲ್ಲಿ ಮೋರಿಸ್ ಅಬ್ಬರದಿಂದ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡ 171 ರನ್ಗಳಿಸಿ ಪಂಜಾಬ್ ತಂಡಕ್ಕೆ 172 ರನ್ಗಳ ಟಾರ್ಗೆಟ್ ನೀಡಿದೆ.
ಬ್ಯಾಟಿಂಗ್ ಸ್ವರ್ಗದಲ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯಿಂದ ಎಡವಿದ ಬೆಂಗಳೂರು ತಂಡದ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ಗಳಿಸಿದೆ.
ಆರಂಭಿಕರಾದ ದೇವದತ್ ಪಡಿಕ್ಕಲ್ 20 , ಆ್ಯರೋನ್ ಫಿಂಚ್ 18 ರನ್ಗಳಿಸಿ ಬೇಗ ವಿಕೆಟ್ ಒಪ್ಪಿಸಿದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ವಿಲಿಯರ್ಸ್ ಬದಲಿಗೆ ಬಂದ ಸುಂದರ್ ಎಲ್ಲರ ನಿರೀಕ್ಷೆಯನ್ನ ಹುಸಿಗೊಳಿಸಿದರು. ಅವರು 14 ಎಸೆತಗಳಲ್ಲಿ 13 ರನ್ಗಳಿಸಿ ಔಟಾದರು.
-
24 runs in the final over off Shami as #RCB post a total of 171/6 on the board.
— IndianPremierLeague (@IPL) October 15, 2020 " class="align-text-top noRightClick twitterSection" data="
Scorecard - https://t.co/yGA2RjN0TX #Dream11IPL #RCBvKXIP pic.twitter.com/BjGUJo0TvB
">24 runs in the final over off Shami as #RCB post a total of 171/6 on the board.
— IndianPremierLeague (@IPL) October 15, 2020
Scorecard - https://t.co/yGA2RjN0TX #Dream11IPL #RCBvKXIP pic.twitter.com/BjGUJo0TvB24 runs in the final over off Shami as #RCB post a total of 171/6 on the board.
— IndianPremierLeague (@IPL) October 15, 2020
Scorecard - https://t.co/yGA2RjN0TX #Dream11IPL #RCBvKXIP pic.twitter.com/BjGUJo0TvB
ನಂತರ ಬಂದ ದುಬೆ 19 ಎಸೆತಗಳಲ್ಲಿ 23 ರನ್ಗಳಿಸಿ ವಿಕೆಟ್ ಒಪ್ಪಿಸಿದರು. 4 ರಬದಲಾಗಿ 6ನೇ ಕ್ರಮಾಂಜದಲ್ಲಿ ಬ್ಯಾಟಿಂಗ್ ಬಂದ ವಿಲಿಯರ್ಸ್ ಕೇವಲ 2 ರನ್ಗಳಿಸಿ ಶಮಿಗೆ ವಿಕೆಟ್ ನೀಡಿದರೆ, ಅದೇ ಓವರ್ನಲ್ಲಿ ಕೊಹ್ಲಿ ಕೂಡ ರಾಹುಲ್ಗೆ ಕ್ಯಾಚ್ ನೀಡಿ ಔಟಾದರು.
ಆದರೆ ಕೊನೆಯ ಎರಡು ಓವರ್ಗಳಲ್ಲಿ ಅಬ್ಬರಿಸಿದ ಮೋರಿಸ್ ಕೇವಲ 8 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 25 ಹಾಗೂ ಉದಾನ 5 ಎಸೆತಗಳಲ್ಲಿ 10 ರನ್ಗಳಿಸಿ 171 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಪಂಜಾಬ್ ಪರ ಶಮಿ 45ಕ್ಕೆ 2, ಮುರುಗನ್ ಅಶ್ವಿನ್ 23ಕ್ಕೆ 2 , ಅರ್ಶ್ದೀಪ್ ಸಿಂಗ್ ಹಾಗೂ ಜೋರ್ಡಾನ್ ತಲಾ ಒಂದು ವಿಕೆಟ್ ಪಡೆದರು.