ETV Bharat / sports

ಐಪಿಎಲ್.. ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್​ ಸಿಡಿಸಿ ದಾಖಲೆಗೆ ಪಾತ್ರರಾದ ರೋಹಿತ್​

author img

By

Published : Sep 23, 2020, 9:13 PM IST

Updated : Sep 23, 2020, 9:19 PM IST

12 ವರ್ಷಗಳ ಐಪಿಎಲ್ ಪಯಣದಲ್ಲಿ ರೋಹಿತ್ 26 ಪಂದ್ಯಗಳಿಂದ​ 1 ಶತಕ ಹಾಗೂ 5 ಅರ್ಧಶತಕ ಸಿಡಿಸಿದ್ದಾರೆ. ವಾರ್ನರ್​ ಕೆಕೆಆರ್​ ವಿರುದ್ಧ 21 ಪಂದ್ಯಗಳನ್ನಾಡಿದ್ದು, 46.63 ಸರಾಸರಿಯಲ್ಲಿ 829ರನ್​ ಗಳಿಸಿದ್ದಾರೆ..

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ

ಅಬುಧಾಬಿ : ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್ ಶರ್ಮಾ ಡೇವಿಡ್​ ವಾರ್ನರ್​ ಹಿಂದಿಕ್ಕಿ ಕೆಕೆಆರ್​ ವಿರುದ್ಧ ಅತಿ ಹೆಚ್ಚು ರನ್​ ದಾಖಲಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಇಂದು ಅಬುಧಾಬಿಯಲ್ಲಿ ನಡೆಯುತ್ತಿರುವ 5ನೇ ಪಂದ್ಯದಲ್ಲಿ ರೋಹಿತ್ ಈ ದಾಖಲೆಗೆ ಪಾತ್ರರಾಗಿದ್ದಾರೆ. ಈ ಪಂದ್ಯಕ್ಕೂ ಮುನ್ನ ಕೆಕೆಆರ್​ ವಿರುದ್ಧ 824 ರನ್​ಗಳಿಸಿದ್ದ ರೋಹಿತ್ ಕೇವಲ 6 ರನ್​ಗಳಿಸುತ್ತಿದ್ದಂತೆ ಸನ್​ರೈಸರ್ಸ್​ ಹೈದರಾಬಾದ್​ ನಾಯಕ ಡೇವಿಡ್​ ವಾರ್ನರ್​(829) ಅವರನ್ನು ಹಿಂದಿಕ್ಕಿ ಕೆಕೆಆರ್​ ವಿರುದ್ಧ ಗರಿಷ್ಠ ರನ್​ ಸರದಾರರಾಗಿದ್ದಾರೆ.

12 ವರ್ಷಗಳ ಐಪಿಎಲ್ ಪಯಣದಲ್ಲಿ ರೋಹಿತ್ 26 ಪಂದ್ಯಗಳಿಂದ​ 1 ಶತಕ ಹಾಗೂ 5 ಅರ್ಧಶತಕ ಸಿಡಿಸಿದ್ದಾರೆ. ವಾರ್ನರ್​ ಕೆಕೆಆರ್​ ವಿರುದ್ಧ 21 ಪಂದ್ಯಗಳನ್ನಾಡಿದ್ದು, 46.63 ಸರಾಸರಿಯಲ್ಲಿ 829ರನ್​ ಗಳಿಸಿದ್ದಾರೆ. ಇದರ ಜೊತೆಗೆ ಐಪಿಎಲ್​ ಇತಿಹಾಸದಲ್ಲೇ ಒಂದು ತಂಡದ ವಿರುದ್ಧ ಅತಿ ಹೆಚ್ಚು ರನ್​ ಸಿಡಿಸಿದ ಬ್ಯಾಟ್ಸ್​ಮನ್​ ಎಂಬ ದಾಖಲೆಗೂ ರೋಹಿತ್ ಪಾತ್ರರಾಗಿದ್ದಾರೆ.

ಕೆಕೆಆರ್​ ವಿರುದ್ಧ ಅತಿ ಹೆಚ್ಚು ರನ್‌ ದಾಖಲಿಸಿದ ಬ್ಯಾಟ್ಸ್​ಮನ್‌ಗಳು​

  • ರೋಹಿತ್ ಶರ್ಮಾ(875+)
  • ಡೇವಿಡ್ ವಾರ್ನರ್​(829)
  • ಸುರೇಶ್ ರೈನಾ(818)
  • ವಿರಾಟ್​ ಕೊಹ್ಲಿ(674)
  • ಶಿಖರ್​ ಧವನ್​(656)

ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್​

  • ರೋಹಿತ್ ಶರ್ಮಾ(875+)vs ಕೆಕೆಆರ್​
  • ಡೇವಿಡ್​ ವಾರ್ನರ್​( 829) vs ಕೆಕೆಆರ್​
  • ವಿರಾಟ್ ಕೊಹ್ಲಿ(825) vs ಡೆಲ್ಲಿ
  • ಡೇವಿಡ್ ವಾರ್ನರ್(819) vs​ ಪಂಜಾಬ್​
  • ಸುರೇಶ್ ರೈನಾ(818) vs ಕೆಕೆಆರ್​
  • ಸುರೇಶ್ ರೈನಾ(818) vs ಮುಂಬೈ

Last Updated : Sep 23, 2020, 9:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.