ದುಬೈ: ನಾಯಕ ಕೆಎಲ್ ರಾಹುಲ್ ಭರ್ಜರಿ ಶತಕ ಹಾಗೂ ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರ್ಸಿಬಿ ತಂಡವನ್ನು 97ರನ್ಗಳ ಬೃಹತ್ ಅಂತರದಿಂದ ಮಣಿಸಿದೆ.
207 ರನ್ಗಳ ಬೆನ್ನತ್ತಿದ ಬೆಂಗಳೂರು ತಂಡ ಪಂಜಾಬ್ ಬೌಲರ್ಗಳ ದಾಳಿಗೆ ಸಿಲುಕಿ 17 ಓವರ್ಗಳಲ್ಲಿ109 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲುಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡಕ್ಕೆ ನಾಯಕ ಕೆಎಲ್ ರಾಹುಲ್ 132 ರನ್ಗಳಿಸಿ 206 ರನ್ಗಳ ಬೃಹತ್ ಮೊತ್ತ ದಾಖಲಿಸಲು ನೆರವಾಗಿದ್ದರು. ಅವರು 69 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 14 ಬೌಂಡರಿ ಸಿಡಿಸಿದ್ದರು. ಮಯಾಂಕ್ 26, ಪೂರನ್ 17 ಹಾಗೂ ಕರುಣ್ ನಾಯರ್ 15 ರನ್ಗಳಿಸಿ ರಾಹುಲ್ಗೆ ಬೆಂಬಲ ನೀಡಿದರು.
ಇನ್ನು 207 ರನ್ಗಳ ಟಾರ್ಗೆಟ್ ಪಡೆದಿದ್ದ ಆರ್ಸಿಬಿ ಮೊದಲ ಓವರ್ನಲ್ಲೇ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್(1) ಕಾಟ್ರೆಲ್ ಬೌಲಿಂಗ್ನಲ್ಲಿ ರವಿ ಬಿಷ್ಣೋಯ್ಗೆ ಕ್ಯಾಚ್ ನೀಡಿ ಔಟಾದರು. ನಂತರ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ಜೋಶ್ ಫಿಲಿಪ್ಪೆ ಶಮಿ ಬೌಲಿಂಗ್ ಎಲ್ಬಿ ಬಲೆಗೆ ಬಿದ್ದು ಶೂನ್ಯ ಸಂಪಾದಿಸಿದರು.
-
#KXIP are topping the charts in the Points Table after Match 6.#Dream11IPL #KXIPvRCB pic.twitter.com/T9gcCATZ40
— IndianPremierLeague (@IPL) September 24, 2020 " class="align-text-top noRightClick twitterSection" data="
">#KXIP are topping the charts in the Points Table after Match 6.#Dream11IPL #KXIPvRCB pic.twitter.com/T9gcCATZ40
— IndianPremierLeague (@IPL) September 24, 2020#KXIP are topping the charts in the Points Table after Match 6.#Dream11IPL #KXIPvRCB pic.twitter.com/T9gcCATZ40
— IndianPremierLeague (@IPL) September 24, 2020
ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ 1 ರನ್ಗಳಿಸಿ ಕಾಟ್ರೆಲ್ಗೆ 2ನೇ ಬಲಿಯಾದರು. ಈ ಹಂತದಲ್ಲಿ ಒಂದಾದ ಫಿಂಚ್(20) ಹಾಗೂ ವಿಲಿಯರ್ಸ್(30) 4ನೇ ವಿಕೆಟ್ಗೆ 49 ರನ್ ಸೇರಿಸಿ ಚೇತರಿಕೆ ನೀಡಲು ಪ್ರಯತ್ನಿಸಿದರು. ಆದರೆ 20 ರನ್ಗಳಿಸಿದ್ದ ಫಿಂಚ್ ಯುವ ಸ್ಪಿನ್ನರ್ ಬಿಷ್ಣೋಯ್ ಓವರ್ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಆರ್ಸಿಬಿ ಗೆಲುವಿನಿ ಕನಸನ್ನು ಕಮರುವಂತೆ ಮಾಡಿದರು.
ಫಿಂಚ್ ನಂತರ ಆರ್ಸಿಬಿ ಪೆವಿಲಿಯನ್ ಪರೇಡ್ ನಡೆಸಿತು. ವಿಲಿಯರ್ಸ್ 28, ಶಿವಂ ದುಬೆ 12, ಉಮೇಶ್ ಯಾದವ್(0) ಸೈನಿ(6) ಚಹಾಲ್(1) ರನ್ಗಳಿಸಿ ಔಟಾದರು. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಮಾತ್ರ ಕೊಂಚ ಪ್ರತಿರೋಧ ತೋರಿ ಸೋಲನ್ನು ಮುಂದಕ್ಕೆ ತಳ್ಳುವುದರ ಜೊತೆಗೆ ತಂಡದ ಮೊತ್ತವನ್ನು 100 ಗಡಿ ದಾಟಿಸಿದರು. ಅವರು 27 ಎಸೆತಗಳಲ್ಲಿ 30 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
-
No prizes for guessing who is our Man of the Match for Match 6 of #Dream11IPL.@klrahul11 #KXIPvRCB pic.twitter.com/ugxGioQNPV
— IndianPremierLeague (@IPL) September 24, 2020 " class="align-text-top noRightClick twitterSection" data="
">No prizes for guessing who is our Man of the Match for Match 6 of #Dream11IPL.@klrahul11 #KXIPvRCB pic.twitter.com/ugxGioQNPV
— IndianPremierLeague (@IPL) September 24, 2020No prizes for guessing who is our Man of the Match for Match 6 of #Dream11IPL.@klrahul11 #KXIPvRCB pic.twitter.com/ugxGioQNPV
— IndianPremierLeague (@IPL) September 24, 2020
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಪಂಜಾಬ್ ಪರ ರವಿ ಬೊಷ್ಣೋಯ್ 32ಕ್ಕೆ 3, ಮುರುಗನ್ ಅಶ್ವಿನ್ 21ಕ್ಕೆ 3, ಶೆಲ್ಡಾನ್ ಕಾಟ್ರೆಲ್ 17ಕ್ಕೆ 2 ಹಾಗೂ ಮೊಹಮ್ಮದ್ ಶಮಿ 14ಕ್ಕೆ 1 ಹಾಗೂ ಮ್ಯಾಕ್ಸ್ವೆಲ್ 10 ರನ್ ನೀಡಿ 1 ವಿಕೆಟ್ ಪಡೆದು ಗೆಲುವಿನ ಪಂಜಾಬ್ಗೆ ಸುಲಭ ಗೆಲುವು ತಂದುಕೊಟ್ಟರು.