ETV Bharat / sports

ಬಹುಕಾಲದ ಗೆಳತಿಯೊಂದಿಗೆ ನಿಶ್ಚತಾರ್ಥ ಮಾಡಿಕೊಂಡ ವಿಂಡೀಸ್​ ತಂಡ ನಿಕೋಲಸ್ ಪೂರನ್​ - ವೆಸ್ಟ್​ ಇಂಡೀಸ್ ಕ್ರಿಕೆಟ್ ತಂಡ

ಪೂರನ್​ಗೆ ವೆಸ್ಟ್​ ಇಂಡೀಸ್ ತಂಡದ ನಾಯಕ ಕೀರನ್ ಪೊಲಾರ್ಡ್​, ಜೇಸನ್ ಹೋಲ್ಡರ್​, ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಜಿಮ್ಮಿ ನೀಶಮ್, ಮಂದೀಪ್ ಸಿಂಗ್​,ಅರ್ಶ್​ದೀಪ್ ಸಿಂಗ್ ಸೇರಿದಂತೆ ಹಲವಾರು ಕ್ರಿಕೆಟಿಗರು ಶುಭಕೋರಿದ್ದಾರೆ.

ನಿಕೋಲಸ್ ಪೂರನ್​
ನಿಕೋಲಸ್ ಪೂರನ್​
author img

By

Published : Nov 17, 2020, 10:52 PM IST

ಬಾರ್ಬಡೋಸ್​: ವೆಸ್ಟ್ ಇಂಡೀಸ್ ತಂಡದ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ನಿಕೋಲಸ್ ಪೂರನ್ ತಮ್ಮ ಬಹುಕಾಲದ ಗೆಳತಿ ಕ್ಯಾತರಿನ್​ ಮೈಗಲ್‌ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಗೆಳತಿಗೆ ಕ್ಯಾತರಿನ್ ಮೈಗಲ್‌ಗೆ ಉಂಗುರ ತೊಡಿಸುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ದುಬೈನಲ್ಲಿ ನಡೆದಿದ್ದ 13ನೇ ಆವೃತ್ತಿಯ ಐಪಿಎಲ್​ನಲ್ಲಿ ನಿಕೋಲಸ್ ಪೂರನ್ ಕಿಂಗ್ಸ್​ ಇಲೆವೆನ್ ಪಂಜಾಬ್​ ಪರ ಆಡಿದ್ದರು. ಬ್ಯಾಟಿಂಗ್ ಮತ್ತು ಫೀಲ್ಡಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅವರು ಇದೇ ತಿಂಗಳು ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿ ಟಿ20 ತಂಡದ ಉಪ ನಾಯಕನಾಗಿ ಆಯ್ಕೆಯಾಗಿದ್ದರು.

"ನಮ್ಮನ್ನು ದೇವರು ಆಶೀರ್ವದಿಸಿದ್ದಾರೆ. ನಾನು ಮತ್ತು ಮೈಗಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಐ ಲವ್​ ಯು ಮೈಗಲ್​ " ಎಂದು ಪೂರನ್ ಇನ್ಸ್ಟಾಗ್ರಾಮ್​ನಲ್ಲಿ ಉಂಗುರ ತೊಡಿಸುತ್ತಿರುವ ಪೋಟೋ ಶೇರ್​ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.