ದುಬೈ: ಐಪಿಎಲ್ನಲ್ಲಿ ಸತತ 25 ಪಂದ್ಯಗಳಲ್ಲಿ ವಿಕೆಟ್ ಪಡೆದಿದ್ದ ರಬಾಡ ಹೈದರಾಬಾದ್ ಬ್ಯಾಟ್ಸ್ಮನ್ಗಳ ಆರ್ಭಟಕ್ಕೆ ತುತ್ತಾಗಿ ಕೊನೆಗೂ ವಿಕೆಟ್ಲೆಸ್ ಆಗಿ ಬೌಲಿಂಗ್ ಕೋಟಾ ಮುಗಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ 14 ಹಾಗೂ ಈ ಆವೃತ್ತಿಯಲ್ಲಿ 11 ಪಂದ್ಯಗಳಲ್ಲಿ ಕನಿಷ್ಠ ಒಂದು ವಿಕೆಟ್ ಪಡೆಯುವಲ್ಲಿ ಸಫರಾಗಿದ್ದರು. ಇದೇ ಟೂರ್ನಿಯಲ್ಲಿ ವೇಗವಾಗಿ 50 ವಿಕೆಟ್ ಪೂರೈಸಿದ ಬೌಲರ್ ಆಗಿದ್ದ ಅವರು 11 ಪಂದ್ಯಗಳಿಂದ 23 ವಿಕೆಟ್ ಪಡೆದೂ ಪರ್ಪಲ್ ಕ್ಯಾಪ್ ಕೂಡ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಸತತ 25 ಪಂದ್ಯಗಳಲ್ಲಿ ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದ ರಬಡಾ ಈ ಪಂದ್ಯದಲ್ಲಿ 4 ಪಂದ್ಯಗಳಲ್ಲಿ 54 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಜೊತೆಗೆ 2 ವರ್ಷಗಳ ಬಳಿಕ ಸನ್ರೈಸರ್ಸ್ ವಿರುದ್ಧ ವಿಕೆಟ್ ಇಲ್ಲದೆ ತಮ್ಮ 4 ಓವರ್ ಕೋಟಾ ಮುಗಿಸಿದರು.
ರಬಾಡ ಬೌಲಿಂಗ್ ವಿರುದ್ಧ ಪ್ರಾಬಲ್ಯ ಸಾಧಿಸಿದ ಡೇವಿಡ್ ವಾರ್ನರ್ ಪವರ್ ಪ್ಲೇ ಒಂದೇ ಓವರ್ನಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ಸ್ ಡೆಲ್ಲಿ ತಂಡಕ್ಕೆ ಆಘಾತ ನೀಡಿದ್ದರು.