ETV Bharat / sports

ಪ್ರಿಯಂ ಗರ್ಗ್​ ಅರ್ಧ ಶತಕದಾಟ: ಸಿಎಸ್​ಕೆ ಗೆಲುವಿಗೆ 165ರನ್​ ಟಾರ್ಗೆಟ್​ ನೀಡಿದ ಹೈದರಾಬಾದ್​​

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಮುಖಾಮುಖಿಯಾಗಿವೆ.

IPL 2020
IPL 2020
author img

By

Published : Oct 2, 2020, 9:44 PM IST

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 14ನೇ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ಗೆಲುವಿಗೆ ಹೈದರಾಬಾದ್​​ 165ರನ್​ ಟಾರ್ಗೆಟ್​ ನೀಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಲು ಮುಂದಾದ ವಾರ್ನರ್​ ಪಡೆಗೆ ಆರಂಭದಲ್ಲೇ ಆಘಾತ ಎದುರಾಯ್ತು. ಆರಂಭಿಕರಾಗಿ ಕಣಕ್ಕಿಳಿದ ಬೈರ್ಸ್ಟ್ರೋವ್ ರನ್​ ಖಾತೆ ತೆರೆಯುವ ಮೊದಲು ಪೆವಿಲಿಯನ್​ ಸೇರಿಕೊಂಡರು. ಈ ವೇಳೆ, ಕಣಕ್ಕಿಳಿದ ಮನೀಷ್​ ಪಾಂಡೆ ನಾಯಕ ವಾರ್ನರ್​​ ಜೊತೆಯಾದರು. ಆದರೆ, ಕ್ಯಾಪ್ಟನ್​​ 28 ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರೆ, ಇವರ ಬೆನ್ನಲ್ಲೇ ಬಂದ ವಿಲಿಯಮ್ಸನ್​ ಕೂಡ 9ರನ್ ​ಗಳಿಕೆ ಮಾಡಿ ನಿರಾಸೆ ಮೂಡಿಸಿದರು. ಇದಾದ ಬಳಿಕ ಉತ್ತಮವಾಗಿ ಆಡುತ್ತಿದ್ದ ಪಾಂಡೆ 29 ರನ್​ಗಳಿಸಿದ್ದ ವೇಳೆ ಶಾರ್ದೂಲ್​ ಠಾಕೂರ್​ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಸನ್​ರೈಸರ್ಸ್​ ತಂಡದ ಯಂಗ್​ ಬ್ಯಾಟ್ಸ್​​​​​ಮನ್​ ಪ್ರಿಯಂ ಗರ್ಗ್​​ ಕೇವಲ 26 ಎಸೆತಗಳಲ್ಲಿ 51ರನ್​ಗಳಿಕೆ ಮಾಡಿ ಅಜೇಯರಾಗಿ ಉಳಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಒದಾದ ಪ್ರಿಯಂ ಗರ್ಗ್​ (51) ಅಭಿಷೇಕ್​ ಶರ್ಮಾ (31) ತಂಡವನ್ನ 150ರ ಗಡಿ ದಾಟುವಂತೆ ಮಾಡಿದರು. ಕೊನೆಯದಾಗಿ ತಂಡ 5ವಿಕೆಟ್​ ಕಳೆದುಕೊಂಡು 164ರನ್​ಗಳಿಕೆ ಮಾಡಿದ್ದು, ಚೆನ್ನೈ ತಂಡಕ್ಕೆ 165ರನ್​ ಟಾರ್ಗೆಟ್​ ನೀಡಿದೆ. ಸಿಎಸ್​ಕೆ ಪರ ದೀಪಕ್​ ಚಹಾರ್​ 2ವಿಕೆಟ್, ಶಾರ್ದೂಲ್​ ಠಾಕೂರ್​ ಹಾಗೂ ಚಾವ್ಲಾ 1ವಿಕೆಟ್​ ಪಡೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.